ಆಸ್ಪತ್ರೆಯ ಕಾರಿಡಾರ್ ಮೂಲಕ ನಡೆದುಕೊಂಡು ಹೋಗುವುದು ಪ್ರಪಂಚದ ಅತ್ಯಂತ ವಿಚಿತ್ರವಾದ ಭಾವನೆ. ಒಂದೆಡೆ, ಜನರು ಹುಟ್ಟಿನ ಸಂತೋಷವನ್ನೋ, ಕ್ಯಾನ್ಸರ್ನಿಂದ ಯಶಸ್ವಿಯಾಗಿ ಹೊರಬಂದ ಕಾರಣದಿಂದಲೋ ಅಥವಾ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಂಡ ಕಾರಣಕ್ಕೋ ಇಲ್ಲಿ ಖುಷಿ ಪಡುತ್ತಾರೆ. ಮತ್ತೊಂದೆಡೆ, ಸಾವುಗಳು, ಕಾಯಿಲೆಗಳು ಮತ್ತು ಸಮಸ್ಯೆಗಳಿಂದ ಬಳಲುತ್ತಿರುವವರು ಇಲ್ಲಿ ಕಾಣಸಿಗುತ್ತಾರೆ. ಅವರನ್ನು ಕಂಡು ಇಂತಹ ಸ್ಥಳ ಜಗತ್ತಿನ ಯಾವ ಮೂಲೆಯಲ್ಲೂ ಇರಬಾರದು ಎಂದು ಜನ ಬಯಸುತ್ತಾರೆ. ಮನುಷ್ಯರಾಗಿ ನಾವು ಜಗತ್ತಿನಲ್ಲಿ ಮಾರಕ ರೋಗಗಳು ಅಸ್ತಿತ್ವದಲ್ಲೇ ಇರಬಾರದೆಂದು ಬಯಸುತ್ತೇವೆ, ಆದರೆ ಅದೊಂದು ಕನಸು, ವಾಸ್ತವವಾಗಿ ಸಾಧ್ಯವಿಲ್ಲದ್ದು ಎಂಬ ಅರಿವು ನಮಗಿದೆ. ಆದರೂ, ರೋಗಗಳ ಆಗಮನವನ್ನು ಕಡಿಮೆಗೊಳಿಸುವುದು, ಚಿಕಿತ್ಸೆಯ ಪ್ರಕ್ರಿಯೆಯನ್ನು ಸರಳಗೊಳಿಸುವುದು, ಔಷಧಿಗಳು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಮತ್ತು ಜನರಿಗೆ ಸೂಕ್ತವಾದ ಸಹಾಯವನ್ನು ಒದಗಿಸುವ ಮೂಲಕ ಅವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲು ಪ್ರೋತ್ಸಾಹಿಸುವುದು ನಮ್ಮಿಂದ ಸಾಧ್ಯ.
ಒಂದು ದೇಶದ ಆರೋಗ್ಯ ಕ್ಷೇತ್ರದ ಸ್ಥಿತಿಗತಿಯು ಆ ದೇಶದ ನೈಜ ಮುಖದ ಬಗ್ಗೆ ಸಾಕಷ್ಟನ್ನು ಹೇಳುತ್ತದೆ. ಪ್ರಜೆಗಳಿಗೆ ಉತ್ತಮವಾದ ಆರೈಕೆ ಇಲ್ಲದಿದ್ದರೆ, ಅಭಿವೃದ್ಧಿಗೆ ನೇರವಾದ ಹೊಡೆತ ಬೀಳುತ್ತದೆ. ನಾಗರಿಕರು ಆರೋಗ್ಯಕರವಾಗಿದ್ದಾಗ ಮಾತ್ರ, ಅವರು ತಮ್ಮ ದೇಶಕ್ಕಾಗಿ ಕೆಲಸ ಮಾಡುವ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು ಮತ್ತು ಅವರ ಶಕ್ತಿಯನ್ನು ದೇಶದ ಪರವಾಗಿ ಒಗ್ಗೂಡಿಸಬಹುದು. ಆದರೆ ಅನೇಕ ವರ್ಷಗಳಿಂದ, ಆರೋಗ್ಯ ಕ್ಷೇತ್ರದಲ್ಲಿನ ಯೋಜನೆಗಳು ಸಮರ್ಪಕ ಬೆಂಬಲವನ್ನು ಪಡೆದಿರಲಿಲ್ಲವಾದ್ದರಿಂದ ಈ ಕ್ಷೇತ್ರ ಹಿಂದುಳಿಯುತ್ತಾ ಬಂದಿದೆ. 2014ರ ಲೋಕಸಭಾ ಚುನಾವಣೆಗಳ ನಂತರ, ಹೊಸ ಸರ್ಕಾರವು ಈ ತಪ್ಪನ್ನು ಅರಿತುಕೊಂಡು ಅಸ್ತಿತ್ವದಲ್ಲಿರುವ ಆರೋಗ್ಯ ನಿಯಮಗಳನ್ನು ಬದಲಿಸಲು ನಿರ್ಧರಿಸಿತು.
ಮೋದಿ ಸರಕಾರವು ಎಲ್ಲಾ ನಾಗರಿಕರ ಪರವಾಗಿ ಅನೇಕ ಯೋಜನೆಗಳನ್ನು ಪರಿಚಯಿಸಿತು ಮತ್ತು ಎಲ್ಲರಿಗೆ ಆರೋಗ್ಯ ರಕ್ಷಣೆಗಾಗಿ ಸಮಾನ ಅವಕಾಶವನ್ನು ಒದಗಿಸಿತು. ಇದಲ್ಲದೆ, ಸ್ವ-ಆರೈಕೆ ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ಉತ್ತೇಜಿಸಲು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂತಹ ಕಾರ್ಯಕ್ರಮಗಳನ್ನು ಪರಿಚಯಿಸಲಾಯಿತು, ಈ ಕಾರ್ಯಕ್ರಮದಲ್ಲಿ ಸ್ವತಃ ಪ್ರಧಾನಿಯವರೇ ಭಾಗವಹಿಸಿ, ಇಡೀ ರಾಷ್ಟ್ರದ ಜನತೆಗೆ ಯೋಗಾಭ್ಯಾಸ ನಡೆಸಲು ಸ್ಪೂರ್ತಿ ನೀಡುತ್ತಾರೆ.
ಆರೋಗ್ಯದ ಚಿತ್ರಣವನ್ನು ಬದಲಿಸುವ ಮತ್ತು ಯೋಜನೆಗಳನ್ನು ಪರಿಚಯಿಸುವ ಸಂದರ್ಭಗಳಲ್ಲಿ, ದೇಶದ ಎಲ್ಲ ವರ್ಗಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಪ್ರತಿಯೊಬ್ಬರೂ ಈ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂಬ ಉದ್ದೇಶದೊಂದಿಗೆ ಇವುಗಳನ್ನು ಪರಿಚಯಿಸಲಾಗಿದೆ.
ಉಜ್ಜಲಾ ಯೋಜನೆಯ ಮೂಲಕ ಸರಳವಾದ ಮಾರ್ಗದೊಂದಿಗೆ ಆರೋಗ್ಯ ಚಿತ್ರಣವನ್ನು ಬದಲಿಸುವ ಕೆಲಸವನ್ನು ಆರಂಭಿಸಲಾಯಿತು. ಕಡಿಮೆ ಆದಾಯದ ಕುಟುಂಬಗಳಿಗೆ ಎಲ್ಪಿಜಿ ಒದಗಿಸುವ ಉದ್ದೇಶದಿಂದ ಆರಂಭಗೊಂಡ ಈ ಯೋಜನೆ, ಆಸ್ತಮಾದ ಅಪಾಯವನ್ನು ತಪ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಆಹಾರವನ್ನು ತಯಾರಿಸಲು ಕಲ್ಲಿದ್ದಲು ಅಥವಾ ಕಟ್ಟಿಗೆಗಳನ್ನು ಬಳಸುವುದರಿಂದ ಅಸ್ತಮಾ ರೋಗದ ಅಪಾಯ ಹೆಚ್ಚಿದೆ. ಆದರೆ ಉಜ್ವಲಾ ಯೋಜನೆಯ ಮೂಲಕ ಸರಕಾರವು ಕಡಿಮೆ ವೆಚ್ಚದಲ್ಲಿ ಎಲ್ಪಿಜಿ ನೀಡಿ ಪ್ರತಿ ಬಡ ಕುಟುಂಬದ ಮಹಿಳೆಯರು ಅಡುಗೆ ಅನಿಲದಿಂದ ಅಡುಗೆ ಮಾಡುವಂತೆ ಮಾಡಿದೆ. ಈ ಮೂಲಕ ಅವರನ್ನು ಅಸ್ತಮಾದ ಅಪಾಯದಿಂದ ಹೊರದೂಡುತ್ತಿದೆ.
ಆರೋಗ್ಯಕರ, ಕೈಗೆಟುಕುವ ಮತ್ತು ಸುಲಭವಾಗಿ ಆರೋಗ್ಯ ಸೇವೆ ಲಭ್ಯವಾಗುವ ದಿಕ್ಕಿನಲ್ಲಿ ತೆಗೆದುಕೊಂಡ ಮತ್ತೊಂದು ಮಹತ್ವದ ಹೆಜ್ಜೆಯೆಂದರೆ ಅಮಿೃತ್ (ಎಎಮ್ಆರ್ಐಟಿ) ಮಳಿಗೆಗಳ ಅನುಷ್ಠಾನ, ಇಲ್ಲಿ ರೋಗಿಗಳು ಒಳ್ಳೆಯ ಗುಣಮಟ್ಟದ ಔಷಧಿಗಳನ್ನು ಮತ್ತು ಇತರ ಚಿಕಿತ್ಸಾ ವಸ್ತುಗಳನ್ನು ಸುಲಭವಾಗಿ ಪಡೆಯಬಹುದು. ಅದೇ ರೀತಿ, 2015ರಲ್ಲಿ ಜನ್ಔಷಧಿ ಯೋಜನೆಯನ್ನೂ ಪ್ರಾರಂಭಿಸಲಾಗಿದೆ. ಇದರಡಿಯಲ್ಲಿ ಹಲವಾರು ಜನ್ಔಷಧಿಗಳನ್ನು ಕೇಂದ್ರಗಳನ್ನು ತೆರೆಯಲಾಗಿದೆ. ಜೆನೆರಿಕ್ ಔಷಧಗಳು 50-80% ಕಡಿಮೆ ದರದಲ್ಲಿ ಲಭ್ಯವಿವೆ ಮತ್ತು ಇಲ್ಲಿ ರೋಗಿಗಳು ಔಷಧಿಗಳನ್ನು ಪಡೆಯಲು ವೈದ್ಯರ ಚೀಟಿಗಳನ್ನು ತೋರಿಸಿ ಕಡಿಮೆ ದರದಲ್ಲಿ ಔಷಧಿಯನ್ನು ಪಡೆಯಬಹುದಾಗಿದೆ. ಔಷಧಿಗಳ ಮತ್ತು ಇತರ ಚಿಕಿತ್ಸಾ ವಸ್ತುಗಳ ಸುಲಭ ಲಭ್ಯತೆಯಿಂದ ರೋಗಿಗಳ ಆರೋಗ್ಯವನ್ನು ವೃದ್ಧಿಸಲು ಹೆಚ್ಚು ಅನುಕೂಲಕರವಾಗುತ್ತದೆ.
ಮಿಷನ್ ಇಂದ್ರಧನುಷ್ ಪರಿಚಯದೊಂದಿಗೆ ಲಸಿಕೆಗಳಿಗೆ ಸಮಾನ ಪ್ರಾಮುಖ್ಯತೆ ನೀಡಲಾಗಿದೆ. ಲಸಿಕೆಯಿಂದ ನಿಯಂತ್ರಿಸಬಹುದಾದ ಕಾಯಿಲೆಗಳಿಗೆ ತುತ್ತಾಗಿ ಯಾವ ಮಗವೂ ಸಾಯಬಾರದೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯ. ಇದಕ್ಕಾಗಿಯೇ ಅವರು ಮಿಷನ್ ಇಂದ್ರಧನುಷ್ ಅನ್ನು ಪರಿಚಯಿಸಿದ್ದಾರೆ. ಫೆಬ್ರವರಿ 1, 2019ರ ವೇಳೆಗೆ ಈ ಯೋಜನೆಯಡಿ 5 ವರ್ಷ ಕೆಳಗಿನ ಸುಮಾರು 3,38,೦೦,೦೦೦ ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದೆ. ಮಾತ್ರವಲ್ಲ, ಪ್ರತಿರಕ್ಷಿತ ಗರ್ಭಿಣಿ ಮಹಿಳೆಯರ ಸಂಖ್ಯೆಯನ್ನು ಕೂಡ ಹೆಚ್ಚಳವಾಗಿದೆ. ಈ ಮೂಲಕ ಶಿಶು ಮರಣ ಪ್ರಮಾಣವನ್ನು ತಗ್ಗಿಸಿದ್ದು ಮಾತ್ರವಲ್ಲದೇ, ಪ್ರತಿ ಮಗುವಿನ ಜನನವು ಲಸಿಕೆಯಿಂದ ನಿಯಂತ್ರಿಸಬಹುದಾದ ರೋಗಗಳಿಂದ ಮುಕ್ತವಾದ ಜಗತ್ತಿನಲ್ಲಿ ಜನಿಸಿದೆ ಎಂಬುದನ್ನು ಖಚಿತಪಡಿಸಿದೆ. ಮೊದಲು ಒಂದು ಲಕ್ಷಕ್ಕೆ 167 ಶಿಶು ಮರಣಗಳು ಸಂಭವಿಸುತ್ತಿದ್ದವು, ಈಗ ಈ ಸಂಖ್ಯೆ 130ಕ್ಕೆ ಇಳಿದಿದೆ. ಗರ್ಭಿಣಿಯರಿಗೆ ಮತ್ತು ಅವರ ನವಜಾತ ಶಿಶುಗಳಿಗೆ ಹೆಚ್ಚು ವೈದ್ಯಕೀಯ ಸೌಲಭ್ಯಗಳು ಮತ್ತು ಸಹಾಯಗಳು ದೊರೆಯುತ್ತಿರುವ ಕಾರಣ, ತಾಯಿ ಮತ್ತು ಮಗು ಸುರಕ್ಷಿತ ಜೀವನವನ್ನು ಪಡೆಯುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಶಿಶುಗಳು ಮಾತ್ರವಲ್ಲದೆ, ಗರ್ಭಿಣಿ ಮಹಿಳೆಯರ ಮರಣ ಪ್ರಮಾಣವೂ ಕೂಡಾ ಈ ಕ್ರಮಗಳಿಂದಾಗಿದೆ ತಗ್ಗಿದೆ. ತಾಯಿ ಸುರಕ್ಷಿತವಾಗಿ ಮತ್ತು ಆರೋಗ್ಯಕರವಾಗಿದ್ದಾಗ ಮಾತ್ರ ಆಕೆ ತನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬಲ್ಲಳು.
ಮೋದಿ ಸರಕಾರವು ತೆಗೆದುಕೊಂಡ ಮತ್ತೊಂದು ದೊಡ್ಡ ಹೆಜ್ಜೆಯು, ಭಾರತದ ಆರೋಗ್ಯ ರಕ್ಷಣೆಯ ಚಿತ್ರಣವನ್ನೇ ಬದಲಾಯಿಸಿದೆ. ಆ ದೊಡ್ಡ ಯೋಜನೆಯೇ ಆಯುಷ್ಮಾನ್ ಭಾರತ್. ಈ ಯೋಜನೆ 10 ಕೋಟಿ ಬಡವರಿಗೆ ಮತ್ತು ದುರ್ಬಲ ಕುಟುಂಬಗಳಿಗೆ ಉಚಿತ ಆರೋಗ್ಯವನ್ನು ಒದಗಿಸುವ ಗುರಿಯನ್ನು ಹೊಂದಿದೆ. ರೂ. 1.5 ಲಕ್ಷ ವೆಲ್ನೆಸ್ ಮತ್ತು ಆರೋಗ್ಯ ಕೇಂದ್ರಗಳಿಗೆ 1200 ಕೋಟಿ ರೂ.ಗಳನ್ನು ಈ ಯೋಜನೆಯ ಮೂಲಕ ಒದಗಿಸಲಾಗಿದೆ. ಈ ಯೋಜನೆ ಮೂಲತಃ ಎರಡು ಪ್ರಮುಖ ಕಾರ್ಯಕ್ರಮಗಳನ್ನು ಹೊಂದಿದೆ-
ವೆಲ್ನೆಸ್ ಮತ್ತು ಆರೋಗ್ಯ ಕೇಂದ್ರ- ಈ ಯೋಜನೆಯಡಿಯ 1.5 ಲಕ್ಷ ವೆಲ್ನೆಸ್ ಮತ್ತು ಆರೋಗ್ಯ ಕೇಂದ್ರಗಳು ಆರೋಗ್ಯ ಸೇವೆಯನ್ನು ಬಡವರ ಹತ್ತಿರಕ್ಕೆ ಕೊಂಡೊಯ್ದಿದೆ. ತಾಯಿಯ ಮತ್ತು ಮಕ್ಕಳ ಆರೋಗ್ಯ ಸೇವೆ, ಗುಪ್ತ ಆರೋಗ್ಯ ಸೇವೆ ಮುಂತಾದ ಸಮಗ್ರ ಆರೋಗ್ಯ ಸೇವೆಗಳ ಮೂಲಕ ಆರೋಗ್ಯ ವ್ಯವಸ್ಥೆಯನ್ನು ಜನರ ಮನೆಗಳಿಗೆ ಹತ್ತಿರ ತರುತ್ತಿವೆ. ಉಚಿತ ಅಗತ್ಯ ಔಷಧಿಗಳನ್ನು ಮತ್ತು ರೋಗನಿರ್ಣಯದ ಸೇವೆಗಳನ್ನು ಕೂಡಾ ಈ ಕೇಂದ್ರಗಳು ನೀಡುತ್ತಿವೆ.
ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ-ದ್ವಿತೀಯ ಮತ್ತು ತೃತೀಯ ಆರೈಕೆಗೆ ಸಂಬಂಧಿಸಿದಂತೆ ವರ್ಷಕ್ಕೆ 5 ಲಕ್ಷ ರೂಪಾಯಿಗಳಷ್ಟು ಹಣವನ್ನು ಕುಟುಂಬಗಳಿಗೆ ಈ ಯೋಜನೆ ಒದಗಿಸುತ್ತದೆ. ಇದರ ಮೂಲಕ ಯೋಜನೆಯು 10 ಕೋಟಿಗೂ ಹೆಚ್ಚು ಬಡ ಮತ್ತು ದುರ್ಬಲ ಕುಟುಂಬಗಳಿಗೆ ಆರೋಗ್ಯ ಭದ್ರತೆಯನ್ನು ನೀಡುತ್ತಿದೆ. ಇದು ವಿಶ್ವದ ಅತಿದೊಡ್ಡ ಸರ್ಕಾರಿ ಧನಸಹಾಯದ ಆರೋಗ್ಯ ಯೋಜನೆ ಎಂದು ಹೆಸರುವಾಸಿಯಾಗಿದೆ.
ನಿಗದಿತ ಫಲಾನುಭವಿಗಳನ್ನು ತಲುಪುವ ಉದ್ದೇಶದೊಂದಿಗೆ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಜಿಲ್ಲೆಗಳಲ್ಲಿಯೂ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಮಿಷನ್ನನ್ನು ಅನುಷ್ಠಾನಕ್ಕೆ ತರಲಾಗಿದೆ.
60 ವರ್ಷಗಳು ಮೇಲ್ಪಟ್ಟ ಮತ್ತು ಬಡತನ ರೇಖೆಗಿಂತ ಕೆಳಗಿರುವ (ಮತ್ತು 11 ಇತರ ವಿಭಾಗದ ಜನರಾದ-ಮನರೇಗಾ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಗಣಿ ಕಾರ್ಮಿಕರು, ಲೈಸೆನ್ಸ್ಡ್ ರೈಲ್ವೆ ಪೋರ್ಟರ್ಗಳು, ಬೀದಿಬದಿ ವ್ಯಾಪಾರಿಗಳು, ಬೀಡಿ ಕಾರ್ಮಿಕರು, ರಿಕ್ಷಾ ಎಳೆಯುವವರು, ಚಿಂದಿ ಆಯುವವರು ಮತ್ತು ಆಟೋ, ಟ್ಯಾಕ್ಸಿ ಚಾಲಕರು)ಗಾಗಿ ಹಿರಿಯ ನಾಗರಿಕ ಆರೋಗ್ಯ ವಿಮಾ ಯೋಜನೆ ಅನ್ನು ಆರೋಗ್ಯ ವ್ಯಾಪ್ತಿಗೆ ತರಲಾಗಿದೆ. ರೂ.3೦,೦೦೦ ದಷ್ಟು ಹಣ ಹಿರಿಯ ನಾಗರಿಕರಿಗೆ ವಾರ್ಷಿಕ ಚಿಕಿತ್ಸೆಗಾಗಿ ಇದರಡಿ ಸಿಗುತ್ತದೆ. ಈ ಯೋಜನೆಯನ್ನು 8 ರಾಜ್ಯಗಳಲ್ಲಿ ಅಸ್ಸಾಂ, ಗುಜರಾತ್, ಕರ್ನಾಟಕ, ಕೇರಳ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ ಮತ್ತು ಉತ್ತರ ಪ್ರದೇಶಗಳಲ್ಲಿ ಜಾರಿಗೊಳಿಸಲಾಗಿದೆ.
ಈ ಯೋಜನೆಗಳ ಜೊತೆಯಲ್ಲಿ, ಡಿಜಿಟಲ್ ಇಂಡಿಯಾ ಮೂಲಕ ಆರೋಗ್ಯ ಕ್ಷೇತ್ರವನ್ನು ಡಿಜಿಟಲೀಕರಣ ಮಾಡಲು ಮತ್ತೊಂದು ಪ್ರಮುಖ ಹೆಜ್ಜೆಯನ್ನಿಡಲಾಗಿದೆ. ಅದಕ್ಕಾಗಿ, ಎನ್ಎನ್ಪಿ ಸ್ವಸ್ಥ ಭಾರತ್ ಮತ್ತು ಮೇರಾ ಅಸ್ಪತಾಲ್ನಂತಹ ಅಪ್ಲಿಕೇಶನ್ಗಳನ್ನು ಬಿಡುಗಡೆ ಮಾಡಲಾಗಿದೆ.
ಆರೋಗ್ಯಕರ ಜೀವನಶೈಲಿ, ರೋಗದ ಪರಿಸ್ಥಿತಿಗಳು, ಲಕ್ಷಣಗಳು, ಚಿಕಿತ್ಸಾ ಆಯ್ಕೆಗಳು, ಪ್ರಥಮ ಚಿಕಿತ್ಸಾ ಮತ್ತು ಸಾರ್ವಜನಿಕ ಆರೋಗ್ಯ ಎಚ್ಚರಿಕೆಗಳ ಬಗ್ಗೆ ವಿಶ್ವಾಸಾರ್ಹ ಮತ್ತು ಸೂಕ್ತವಾದ ಮಾಹಿತಿಯನ್ನು ನಾಗರಿಕರಿಗೆ ಒದಗಿಸುವ ಸಲುವಾಗಿ “ಸ್ವಸ್ಥ ಭಾರತ್ ಮೊಬೈಲ್ ಅಪ್ಲಿಕೇಶನ್”ನನ್ನು ಹೊರ ತರಲಾಗಿದೆ.
“ಮೇರಾ ಅಸ್ಪತಾಲ್ ಅಪ್ಲಿಕೇಶನ್” ಅನ್ನು ನಮ್ಮ ಪ್ರಧಾನಿಯವರೇ, ಒಂದು ಮಾದರಿ ಎನಿಸುವ ಬದಲಾವಣೆ ಎಂದು ಕರೆದಿದ್ದಾರೆ. ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳ, ಸೇವೆಗಳ ಬಗ್ಗೆ ರೋಗಿಯ ಪ್ರತಿಕ್ರಿಯೆಯನ್ನು ಪಡೆಯಲು ಈ ಅಪ್ಲಿಕೇಶನ್ ಒಂದು ಪ್ರಮುಖ ಅಸ್ತ್ರವಾಗಿದೆ. ರೋಗಿಗಳಿಂದ ಪಡೆದ ಮಾಹಿತಿಯನ್ನು ಆರೋಗ್ಯ ಸೌಲಭ್ಯಗಳ, ಸೇವೆಗಳ ಗುಣಮಟ್ಟವನ್ನು ವಿಶ್ಲೇಷಿಸಲು ಮತ್ತು ಸುಧಾರಣೆಗೊಳಿಸಲು ಬಳಸಿಕೊಳ್ಳಲಾಗುತ್ತುದೆ.
ಎಬೋಲಾ ಮತ್ತು ಝಿಕಾ ವೈರಸ್ ಕಾಣಿಸಿಕೊಂಡಾಗ ಲಿಬೇರಿಯಾ, ಗಿನಿಯಾ, ಸಿಯೆರಾ ಲಿಯೋನ್ ಮುಂತಾದ ದೇಶಗಳ ಜಿಡಿಪಿ ಬಹುತೇಕ ಕುಸಿಯಿತು. ಭಾರತವು ಆರೋಗ್ಯದ ಕಠಿಣ ಕಾಲದಲ್ಲಿ ಹೀಗೆ ಕುಸಿಯಬಹುದು ಎಂಬುದನ್ನು ನಾವು ಮರೆಯುವಂತಿಲ್ಲ. ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಪ್ಪಿಸಲು ನಮ್ಮ ಆರೋಗ್ಯ ವೃತ್ತಿಪರರು, ಸೇವಕರು ಮತ್ತು ಸ್ವಯಂಸೇವಕರು ಯಾವುದೇ ಅವಕಾಶವನ್ನು ಕೈಚೆಲ್ಲಲಿಲ್ಲ ಎಂಬುದನ್ನು ನಾವು ಹೆಮ್ಮೆ ಪಡುವ ವಿಷಯವಾಗಿದೆ.
ಸಾರ್ವತ್ರಿಕ ಆರೋಗ್ಯ ಮತ್ತು ಉತ್ತಮ ಸೌಲಭ್ಯಗಳನ್ನು ಒದಗಿಸುವ ದಿಕ್ಕಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು ಕೈಗೊಂಡಿದೆ. ಭಾರತವು ಆರೋಗ್ಯ ವಲಯದಲ್ಲಿ ಕ್ಷಿಪ್ರವಾಗಿ ಬೆಳೆಯುತ್ತಿದೆ ಮತ್ತು ದೇಶದ ಚಿತ್ರಣವನ್ನು ಬದಲಿಸುತ್ತಿದೆ. ಭಾರತದ ಆರೋಗ್ಯ ವಲಯದಲ್ಲಿನ ಕ್ರಾಂತಿಕಾರಕ ಬದಲಾವಣೆಯನ್ನು ಜಗತ್ತು ಬೆರಗು ಕಣ್ಣಿನಿಂದ ನೋಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.