ವಡೋದರ: ವಡೋದರ ಮುನ್ಸಿಪಲ್ ಕಾರ್ಪೋರೇಶನ್ ಅತ್ಯಂತ ದಿಟ್ಟ ಹೆಜ್ಜೆಯನ್ನು ಮುಂದಿಟ್ಟಿದ್ದು, ವಡೋದರದ ಎಲ್ಲಾ ಮುನ್ಸಿಪಲ್ ಸ್ಕೂಲ್ಗಳ ಹೆಣ್ಣು ಮಕ್ಕಳಿಗೆ ಉಚಿತವಾಗಿ ನ್ಯಾಪ್ಕಿನ್ ವಿತರಣೆ ಮಾಡಲು ನಿರ್ಧರಿಸಿದೆ.
ಶೇ.30ರಷ್ಟು ಹೆಣ್ಣುಮಕ್ಕಳು 9ನೇ ತರಗತಿಯ ಬಳಿಕ ಶಾಲೆಗೆ ಬರುವುದನ್ನೇ ಬಿಟ್ಟು ಬಿಡುತ್ತಾರೆ. ಶೇ.57ರಷ್ಟು ಹೆಣ್ಣು ಮಕ್ಕಳು 11ನೇ ತರಗತಿಯಿಂದ ಶಾಲೆಯನ್ನು ತೊರೆಯುತ್ತಾರೆ. 2018ರ ವದರಿಯಲ್ಲಿ ಇದು ಸಾಬೀತಾಗಿದೆ. ಸಮರ್ಪಕ ನೈರ್ಮಲ್ಯದ ಕೊರತೆಯೇ ಇದಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಉಚಿತ ನ್ಯಾಪ್ಕಿನ್ ವಿತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುನ್ಸಿಪಲ್ ಕಾರ್ಪೋರೇಶನ್ ಹೇಳಿದೆ.
ಈಗಾಗಲೇ ಉಚಿತ ನ್ಯಾಪ್ಕಿನ್ ವಿತರಿಸುವ ಕಾರ್ಯವನ್ನು ಆರಂಭಿಸಲಾಗಿದೆ. 10 ಶಾಲೆಗಳಲ್ಲಿ ಉಚಿತ ನ್ಯಾಪ್ಕಿನ್ ವೆಂಡಿಂಗ್ ಮೆಶಿನ್ಗಳನ್ನು ಅಳವಡಿಸಲಾಗಿದೆ, ಶೀಘ್ರದಲ್ಲೇ ಉಳಿದ ಶಾಲೆಗಳಿಗೂ ಈ ಮೆಶಿನ್ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ಮುನ್ಸಿಪಲ್ ಕಮಿಷನರ್ ಅಜಯ್ ಭಾಡೋ ಹೇಳಿದ್ದಾರೆ.
ಹೆಣ್ಣು ಮಕ್ಕಳಿಗೆ ಕಲಿಯಲು ಪೂರಕ ವಾತಾವರಣವನ್ನು ಶಾಲೆಗಳಲ್ಲಿ ನಿರ್ಮಾಣ ಮಾಡಿಕೊಡಬೇಕು ಎಂಬ ಉದ್ದೇಶದೊಂದಿಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.