ಹುಸಿ ಜಾತ್ಯಾತೀತತೆ ಮತ್ತು ಮತ್ತು ಅಲ್ಪಸಂಖ್ಯಾತ ಓಲೈಕೆಯಲ್ಲಿ ಕಾಂಗ್ರೆಸ್ ಸದಾ ಮುಂದಾಳುವಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಚುನಾವಣೆಯಲ್ಲಿ ಮತಗಳಿಸುವ ಏಕೈಕ ಉದ್ದೇಶಕ್ಕಾಗಿ ಅಲ್ಪಸಂಖ್ಯಾತರನ್ನು ಓಲೈಸಲು ಅದು ಎಷ್ಟು ಕೀಳುಮಟ್ಟಕ್ಕೆ ಬೇಕಾದರೂ ಇಳಿಯುತ್ತದೆ. 1986ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಸರ್ಕಾರ ಜಾರಿಗೆ ತಂದ ಮುಸ್ಲಿಂ ಮಹಿಳೆ (ವಿಚ್ಛೇದನಾ ಹಕ್ಕುಗಳ ರಕ್ಷಣಾ) ಕಾಯ್ದೆ, 1986 ಕಾಂಗ್ರೆಸ್ನ ವಿಶ್ವಾಸಘಾತುಕ ಓಲೈಕೆ ರಾಜಕಾರಣಕ್ಕೆ ಒಂದು ಉತ್ತಮ ಉದಾಹರಣೆ. ಈ ಕಾಯ್ದೆ ಮೂಲಕ ಕಾಂಗ್ರೆಸ್ ಮುಸ್ಲಿಂ ಮಹಿಳೆಯರಿಗೆ ಲಿಂಗ ಸಮಾನತೆಯನ್ನು ಕಾಂಗ್ರೆಸ್ ನಿರಾಕರಿಸಿತು.
ಭಾರೀ ಸಂಚಲನವನ್ನು ಸೃಷ್ಟಿಸಿದ್ದ ಶಾ ಬಾನೋ ಪ್ರಕರಣದಲ್ಲಿ ಕಾಂಗ್ರೆಸ್ ನಡೆದುಕೊಂಡ ರೀತಿಯಿಂದಲೇ ಅದು ತನ್ನ ಮತ ಬ್ಯಾಂಕ್ ಉಳಿಸಿಕೊಳ್ಳಲು ಎಂತಹ ಮಟ್ಟಕ್ಕಾದರೂ ಇಳಿಯುತ್ತದೆ ಎಂಬುದು ಸಾಬೀತಾಗಿದೆ. 62 ವರ್ಷದ, ಐದು ಮಕ್ಕಳ ತಾಯಿಯಾಗಿದ್ದ ಶಾ ಬಾನೋಳನ್ನು ಆಕೆಯ ಪತಿ 1978ರಲ್ಲಿ ಮೂರು ಬಾರಿ ತಲಾಖ್ ಉಚ್ಚರಿಸಿ ವಿಚ್ಛೇಧನ ಕೊಟ್ಟುಬಿಟ್ಟಿದ್ದ. ದಿಕ್ಕಿಲ್ಲದ ಅನಾಥೆಯಾದ ನನ್ನನ್ನೂ ನನ್ನ ಐದು ಮಕ್ಕಳನ್ನೂ ಮನೆಯಿಂದ ಹೊರಹಾಕಿರುವುದು ಮಾತ್ರವಲ್ಲದೆ ಜೀವನಾಂಶ ಕೊಡದೆ ಕರ್ತವ್ಯದಿಂದ ನುಣುಚಿಕೊಂಡಿದ್ದಾನೆ ಎಂದು ಹೇಳಿ ಆಕೆ ತನ್ನ ಪತಿಯ ವಿರುದ್ಧ ಸುಪ್ರೀಂಕೋರ್ಟ್ಗೆ ದಾವೆ ದಾಖಲಿಸಿದಳು. 1985ರಲ್ಲಿ ನ್ಯಾಯಾಲಯ ಬಾನೋ ಪರವಾಗಿ ತೀರ್ಪಿತ್ತಿತು. ಆದರೆ ತನ್ನ ಮತಬ್ಯಾಂಕ್ ರಕ್ಷಿಸಿಕೊಳ್ಳಲು ಟೊಂಕ ಕಟ್ಟಿದ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ, ಸರ್ವೋಚ್ಚ ನ್ಯಾಯಾಲಯ ಕೊಟ್ಟಿದ್ದ ತೀರ್ಪನ್ನು ನಿರಾಕರಿಸುವಂಥ, ಪ್ರಶ್ನಿಸುವಂಥ, ಅಳಿಸಿಹಾಕುವಂಥ ಕಾನೂನನ್ನು ಜಾರಿಗೆ ತಂದಿತು! ಶಾ ಬಾನೋ ಮತ್ತು ಆಕೆಯಂಥ ಸಾವಿರಾರು ಮಂದಿಗೆ ಅನ್ಯಾಯವಾದರೂ ಪರವಾಗಿಲ್ಲ, ತನ್ನ ಅತಿಮುಖ್ಯ ಮತಗಳು ಕಳೆದುಹೋಗಬಾರದೆಂಬ ಕಾಳಜಿಯಿಂದ ಕಾಂಗ್ರೆಸ್, ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾದ ಮಸೂದೆ ಮಂಡಿಸಿ ಮುಸ್ಲಿಮ್ ಗಂಡಸರ ತಲಾಖ್ ಹಕ್ಕನ್ನು ಉಳಿಸಿಕೊಟ್ಟಿತು!
ಮತವನ್ನು ಉಳಿಸಿಕೊಳ್ಳಲು ತಾನೆಂಥಹ ಓಲೈಕೆಯನ್ನಾದರೂ ಮಾಡಬಲ್ಲೆ ಎಂದು ಕಾಂಗ್ರೆಸ್ ಈ ಪ್ರಕರಣದಲ್ಲಿ ತೋರಿಸಿಕೊಟ್ಟಿದೆ. ಭಾರತದ ರಾಜಕೀಯದಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಮುಸ್ಲಿಂ ಮಹಿಳೆಯರಿಗೆ ನ್ಯಾಯವನ್ನೇ ಧಿಕ್ಕರಿಸಿತು. ಆದರೆ ಈ ಪ್ರಕರಣದ ಬಳಿಕ ಅದು ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿತೆಂಬುದು ಅಷ್ಟೇ ನಿಜ. 1985ರಲ್ಲಿ ಅಲ್ಪ ಬಹುಮತದಿಂದ ಅಧಿಕಾರಕ್ಕೆ ಬಂದಿತ್ತು. ಆದರೆ ಮುಸ್ಲಿಂ ಮಹಿಳೆಯರಿಗೆ ನ್ಯಾಯ ನಿರಾಕರಿಸಿದ ಬಳಿಕ ಆ ಪಕ್ಷ ತನ್ನ ಮುಖವನ್ನೇ ಕಳೆದುಕೊಂಡು ಜನರ ಮುಂದೆ ತನ್ನ ಘನತೆಯನ್ನು ತಾನೇ ಕುಗ್ಗಿಸಿಕೊಂಡಿತು.
ಮುಸ್ಲಿಂ ಮಹಿಳೆ (ವಿಚ್ಛೇದನಾ ಹಕ್ಕುಗಳ ರಕ್ಷಣಾ) ಕಾಯ್ದೆ, 1986ಯನ್ನು ಕಾಂಗ್ರೆಸ್ ಜಾರಿಗೆ ತಂದು 30 ವರ್ಷಗಳೇ ಕಳೆದಿವೆ. ಆದರೆ ಅದರ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಪರಿವರ್ತನೆಗಳಾಗಿಲ್ಲ, ರಾಹುಲ್ ಗಾಂಧಿಯವರು ತಮ್ಮ ತಂದೆಯ ಹೆಜ್ಜೆ ಗುರುತನ್ನೇ ಅನುಸರಿಸುತ್ತಿದ್ದಾರೆ. ಅವರ ತಂದೆ ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಜೀವನಾಂಶವನ್ನು ನಿರಾಕರಿಸಿದರು. ಆದರೀಗ ರಾಹುಲ್ ಗಾಂಧೀ ನೇತೃತ್ವದ ಪಕ್ಷ ತ್ರಿವಳಿ ತಲಾಖ್ನ್ನು ವಿರೋಧಿಸಿ ಮುಸ್ಲಿಂ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದೆ. ಜೆಎಲ್ಎನ್ನಲ್ಲಿ ಸಮಾವೇಶ ನಡೆಸಿದ್ದ ಎಐಸಿಸಿ, ಅಧಿಕಾರಕ್ಕೆ ಬಂದರೆ ಮತ್ತೆ ತ್ರಿವಳಿ ತಲಾಖ್ನ್ನು ತರುವುದಾಗಿ ಹೇಳಿಕೊಂಡಿದೆ. ತ್ರಿವಳಿ ತಲಾಖ್ನ್ನು ಪ್ರಸ್ತುತ ಸರ್ಕಾರ ಅಪರಾಧ ಎಂದು ಘೋಷಿಸಿದೆ. ಆದರೆ ಕಾಂಗ್ರೆಸ್ ತನ್ನ ಮತ ಉಳಿಸಿಕೊಳ್ಳಲು ಈ ನಿರ್ಧಾರದ ವಿರುದ್ಧ ಬೊಬ್ಬಿಡುತ್ತಿದೆ.
ಹುಸಿ ಜಾತ್ಯಾತೀತ ಪಕ್ಷಗಳ ಓಲೈಕೆ ರಾಜಕಾರಣದ ಪರಿಣಾಮವಾಗಿ, ಅದರ ನಾಯಕರ ಕೀಳು ಮಾನಸಿಕತೆಯಿಂದಾಗಿ ಭಾರತದ ಮುಸ್ಲಿಂ ಮಹಿಳೆಯರು ಇಂದಿಗೂ ಹಿಂದುಳಿದೇ ಇದ್ದಾರೆ. ಅವರಿಗೆ ನ್ಯಾಯ ಎಂಬುದು ಮರೀಚಿಕೆಯೇ ಆಗಿದೆ. ಓಲೈಕೆ ರಾಜಕಾರಣದ ಪರಿಣಾಮವಾಗಿಯೇ ಕಾಂಗ್ರೆಸ್ನ್ನು ಮುಸ್ಲಿಮರ ಪಕ್ಷ ಎಂದು ಪರಿಗಣಿಸುವಂತಾಗಿದೆ. ತಮ್ಮ ತಂದೆಯ ಪರಂಪರೆಯನ್ನು ಮುಂದುವರೆಸುವ ಮೂಲಕ ರಾಹುಲ್ ಗಾಂಧಿಯವರು ನ್ಯಾಯಕ್ಕಾಗಿ ಹೋರಾಡುತ್ತಿರುವ ಮುಸ್ಲಿಂ ಮಹಿಳೆಯರ ಭಾವನೆಗಳನ್ನು ನೋಯಿಸುತ್ತಿದ್ದಾರೆ ಮಾತ್ರವಲ್ಲ ತಮ್ಮ ಪಕ್ಷಕ್ಕೆ ಗುಂಡಿಯನ್ನು ತಾವೇ ತೋಡಿಕೊಳ್ಳುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಹುಪಾಲು ಮುಸ್ಲಿಂ ಮಹಿಳೆಯರ ವಿರೋಧವನ್ನು ಈ ಪಕ್ಷ ಎದುರಿಸಬೇಕಾಗಿರುವುದು ಅನಿವಾರ್ಯ. ಚುನಾವಣೆ ವಿಷಯದಲ್ಲಿ ಮುಸ್ಲಿಂ ಮಹಿಳೆಯರಿಗೆ ತಮ್ಮದೇ ಆದ ನಿಲುವುಗಳಿಲ್ಲ ಎಂಬುದು ಕಾಂಗ್ರೆಸ್ ಪಕ್ಷದ ಅನಿಸಿಕೆ, ಆದರೆ ಇದು ಅದರ ತಪ್ಪು ತಿಳುವಳಿಕೆ. ಆ ಪಕ್ಷ ಮುಂದಿನ ಚುನಾವಣೆಯಲ್ಲಿ ಇನ್ನಿಲ್ಲದಂತೆ ಸೋಲನುಭವಿಸುವುದು ಕಟ್ಟಿಟ್ಟ ಬುತ್ತಿ ಎಂದು ಮಾತುಗಳು ಕೇಳಿ ಬರುತ್ತಿವೆ.
Source : rightlog
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.