ನವದೆಹಲಿ: ದೇಶದ ಮೊದಲ ಎಂಜಿನ್ ರಹಿತ ರೈಲು ‘ವಂದೇ ಭಾರತ್ ಎಕ್ಸ್ಪ್ರೆಸ್’ನ್ನು ಫೆಬ್ರವರಿ 15ರಂದು ನವದೆಹಲಿ ರೈಲ್ವೇ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಲಿದ್ದಾರೆ.
ಟ್ರೈನ್ 18 ದೇಶದ ಮೊದಲ ಎಂಜಿನ್ ರಹಿತ ರೈಲಾಗಿದ್ದು, ಇದರ ಹೆಸರನ್ನು ಇತ್ತೀಚಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ಎಂದು ಬದಲಿಸಲಾಗಿದೆ, ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಇದನ್ನು ತಯಾರಿಸಿದೆ.
ದೆಹಲಿ-ಮುಂಬಯಿ ರಾಜಧಾನಿ ಮಾರ್ಗವಾಗಿ ಇದರ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗಿದ್ದು, ಗಂಟೆಗೆ 180 ಕಿಲೋಮೀಟರ್ ವೇಗದಲ್ಲಿ ಚಲಿಸಿದೆ. ಈ ಮೂಲಕ ದೇಶದ ಅತೀವೇಗದ ರೈಲು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
”ಫೆ.15ರಂದು ಬೆಳಿಗ್ಗೆ 10 ಗಂಟೆಗೆ ಪ್ರಧಾನಿಯವರು ರೈಲಿಗೆ ಚಾಲನೆಯನ್ನು ನೀಡಲಿದ್ದಾರೆ ಮತ್ತು ಅಲ್ಲಿ ನಡೆಯಲಿರುವ ಸಮಾರಂಭದಲ್ಲಿ ಭಾಷಣವನ್ನು ಮಾಡಲಿದ್ದಾರೆ. ಇದು ರೈಲ್ವೇ ಮೊದಲ ದೇಶೀಯ ರೈಲಾಗಿರುವುದರಿಂದ ನಮಗೆ ಅತೀವ ಹೆಮ್ಮೆ ಎನಿಸುತ್ತಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
16 ಕೋಚುಗಳುಳ್ಳ ಈ ರೈಲು 30 ವರ್ಷ ಹಳೆಯ ಶತಾಬ್ದಿ ಎಕ್ಸ್ಪ್ರೆಸ್ನ್ನು ರಿಪ್ಲೇಸ್ ಮಾಡಲಿದೆ.
ಈ ರೈಲು ದೆಹಲಿ ಮತ್ತು ವಾರಣಾಸಿಯ ನಡುವೆ ಸಂಚರಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.