ಹಿಂದೂ ದೇವರುಗಳನ್ನು ಕಟ್ಟುಕತೆ ಎನ್ನಲಾಗುತ್ತದೆ. ಲೇವಡಿ ಮಾಡಲಾಗುತ್ತದೆ. ರಾಮಸೇತು ಸುಳ್ಳು ಎನ್ನಲಾಗುತ್ತದೆ! ರಾಮನವಮಿ , ದುರ್ಗಾ ಪೂಜೆಗಳಿಗೆ ತಡೆ ತರಲಾಗುತ್ತದೆ. ಗಣಪತಿ ಉತ್ಸವಕ್ಕೆ ಹಲವು ನಿಬಂಧನೆ ತರುತ್ತಾರೆ. ಹಿಂದೂ ಹಬ್ಬಗಳನ್ನು ಪರಿಸರ ಮತ್ತು ಪ್ರಾಣಿಗಳ ರಕ್ಷಣೆಯ ಹೆಸರಿನಲ್ಲಿ ತಡೆಯಲಾಗುತ್ತದೆ. ಇತ್ಯಾದಿ ಇತ್ಯಾದಿ ಇತ್ಯಾದಿ… ಇಷ್ಟೆಲ್ಲವನ್ನೂ ಕಾಂಗ್ರೇಸ್ ಪಕ್ಷ ಮಾಡುತ್ತಿದ್ದರೂ ಕಾಂಗ್ರೇಸ್ ಕಾರ್ಯಕರ್ತರು ಎಂದಾದರೂ ನಾವು ಚುನಾವಣೆಯಲ್ಲಿ ಕಾಂಗ್ರೇಸಿನ ವಿರುದ್ದ ಮತ ಹಾಕುತ್ತೇವೆ ಎಂದು ಹೇಳುವುದನ್ನ ಕೇಳಿದ್ದೀರಾ ?!
ಅದೇ ಬಿಜೆಪಿ ಬೆಂಬಲಿಗರ ಕತೆ ನೋಡಿ. ಪದ್ಮಾವತಿ ಸಿನಿಮಾವನ್ನು ತಡೆಯದೇ ಇದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ. ರಾಮಮಂದಿರ ಕಟ್ಟದೇ ಇದ್ದಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ! ಗೋ ಹತ್ಯಾ ನಿಷೇಧ ತಂದಿಲ್ಲವಾದರೆ ಬಿಜೆಪಿಯನ್ನು ಸೋಲಿಸುತ್ತೇವೆ! ಸಿದ್ದಗಂಗಾ ಶ್ರೀ ಗಳಿಗೆ ಭಾರತರತ್ನ ಕೊಡದೇ ಇದ್ದಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ! GST ಗಾಗಿ ಸೋಲಿಸುತ್ತೇವೆ! ನೋಟ್ ಬಂಧಿಗಾಗಿ ಸೋಲಿಸುತ್ತೇವೆ! 15 ಲಕ್ಷ ಕೊಡಲಿಲ್ಲವಾದ್ದರಿಂದ ಸೋಲಿಸುತ್ತೇವೆ! ಉದ್ಯೋಗ ಕೊಡಲಿಲ್ಲವಾದ್ದರಿಂದ ಸೋಲಿಸುತ್ತೇವೆ. ಇತ್ಯಾದಿ ಇತ್ಯಾದಿ ಇತ್ಯಾದಿ…
ಇದೇ ನೋಡಿ ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷದ ಬೆಂಬಲಿಗರ ನಡುವಿರುವ ಬಹುದೊಡ್ಡ ವ್ಯತ್ಯಾಸ! ಕಾಂಗ್ರೇಸಿಗರದ್ದು ಗ್ಯಾರಂಟಿ ಓಟು. ಆದರೆ ಬಿಜೆಪಿ ಕಾರ್ಯಕರ್ತರನ್ನ ನಂಬಿಕೊಂಡು ಧೈರ್ಯದಿಂದ ಕಠಿಣ ನಿರ್ಧಾರ ತೆಗೆದುಕೊಂಡಲ್ಲಿ ಮೊದಲಿಗೆ ಬೆನ್ನಿಗೆ ಇರಿಯುವವರು ಬಜೆಪಿಗರೇ ಎನ್ನುವುದು ಕಟು ಸತ್ಯ.
ಹಲವರ ಅಭಿಪ್ರಾಯ ಮೋದಿ ಅಭಿವೃದ್ಧಿ ಬಿಟ್ಟು ಓಟಿಗಾಗಿ ರಾಮಮಂದಿರವನ್ನು ಮತ್ತೆ ತಂದಿದ್ದಾರೆ ಎಂದು! ಯೋಚಿಸಿ ನೋಡಿ ರಾಮಮಂದಿರವನ್ನು ಓಟಿನ ವಿಚಾರವಾಗಿ ಮತ್ತೆ ತಂದಿದ್ದು ಮೋದಿಯವರೇ, ಅಲ್ಲಾ ನಾವೇ?
ಕಳೆದ ನಾಲ್ಕು ವರ್ಷದಲ್ಲಿ ಹಗಲಿರುಳು ಓಡಾಡಿ ಈ ದೇಶದ ಚಿತ್ರಣವನ್ನೇ ಬದಲಿಸಿದ ಮೇಲೂ ಮೋದಿಯವರಿಗೆ ನಮ್ಮಿಂದ ಸಿಕ್ಕಿದ್ದು ಏನು ಗೊತ್ತೇ? ಈ ಮೇಲೆ ಹೇಳಿದ ದಮ್ಕಿಗಳ ಜೊತೆ “ಮೊದಲು ರಾಮಮಂದಿರ ನಂತರ ಸರಕಾರ!” ಎಂಬ ಘೋಷಣೆ! ರಾಮಮಂದಿರವೊಂದನ್ನು ಬಿಟ್ಟು ಬೇರೆಲ್ಲವನ್ನು ಮಾಡಿದರೂ, ಮಾಡಿದ್ದನ್ನು ನೋಡಿ ಖುಷಿಪಡುವ ಗುಣ ನಮ್ಮಲ್ಲಿ ಇಲ್ಲ. ಏನು ಮಾಡಿಲ್ಲವೆಂದೇ ಹೇಳುವುದು ನಮ್ಮ ಹಣೆಬರಹವಾಗಿದೆ.
ಹಾಗಿರುವಾಗ ಜನ ರಾಮಮಂದಿರ ಮಾಡಿಲ್ಲವೆಂದಾದರೆ ಬಿಜೆಪಿಯನ್ನು ಸೋಲಿಸಿ ಹಿಂದೂ ಜೀವನಕ್ರಮವನ್ಬೇ ತಮಾಷೆ ಮಾಡುವ ಪಕ್ಷವನ್ನು ಗೆಲ್ಲಿಸಲು ನಾವು ತಯಾರಿದ್ದೇವೆ ಎನ್ನುವ ಹೆಡ್ಡುತನ ತೋರಿಸಲು ತಯಾರಾಗಿರುವಾಗ ಮೋದಿಯವರಾದರೂ ಏನು ಮಾಡುವುದು ನೀವೇ ಹೇಳಿ? ಎಲ್ಲಾ ಬಿಟ್ಟು ರಾಮಮಂದಿರದ ಹಿಂದೆ ಹೋಗುವ ಅನಿವಾರ್ಯತೆ ಎದುರಾಯಿತು. ಆ ಅನಿವಾರ್ಯತೆ ಸೃಷ್ಟಿಸಿದ್ದು ನಾವೇ ಹೊರತು ಬೇರೆಯಾರು ಅಲ್ಲ ಸ್ನೇಹಿತರೇ.
ಎಲ್ಲವನ್ನೂ ನಾವೇ ಸೃಷ್ಟಿ ಮಾಡಿ ಕೊನೆಗೆ ಮೋದಿ ಓಟಿಗಾಗಿ ರಾಮಮಂದಿರದ ಹಿಂದೆ ಬಿದ್ದಿದ್ದಾರೆಂದು ಆರೋಪಿಸುವುದು ಕೂಡ ನಾವೇ! ಎಂತಾ ವಿಚಿತ್ರವಲ್ಲವೇ…
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.