ಕರ್ನಾಟಕದ ಮಾಜಿ ಸಿಎಂ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯನವರು ಇತ್ತೀಚಿಗೆ ಮಹಿಳೆಯೊಬ್ಬರ ಮೇಲೆ ತಮ್ಮ ದರ್ಪವನ್ನು ಪ್ರದರ್ಶಿಸಿ ಭಾರೀ ವಿವಾದವನ್ನು ಮೈಮೇಲೆ ಎಳೆದುಕೊಂದು ಸುದ್ದಿಯಾಗಿದ್ದರು. ವಿವಾದಗಳು ಇದೇ ಮೊದಲಲ್ಲ ಹಿಂದೆಯೂ ಸಾಕಷ್ಟು ವಿವಾದಗಳನ್ನು ಅವರು ಸೃಷ್ಟಿಸಿಕೊಂಡಿದ್ದಾರೆ.
ಕ್ಯೂನೆಟ್ನ ವಿಜಯ್ ಈಶ್ವರನ್ ಅವರಿಂದ 70 ಲಕ್ಷ ರೂಪಾಯಿ ಮೊತ್ತದ ಹಬ್ಲೋಟ್ ವಾಚ್ ಪಡೆದು ಭಾರೀ ಸುದ್ದಿಯಾಗಿದ್ದರು. ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಅವರು ಇದೇ ವಿಷಯವನ್ನು ಇಟ್ಟುಕೊಂಡು ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರ ಮಾಡಿದ್ದರು.
ಕ್ಯೂನೆಟ್ ಔಪಚಾರಿವಾಗಿ ಕ್ವೆಸ್ಟ್ನೆಟ್, ಗೋಲ್ಡ್ಕ್ವೆಸ್ಟ್ ಮತ್ತು ಕ್ಯೂಐ ಎಂದು ಕರೆಯಲ್ಪಡುತ್ತದೆ. 1998ರಲ್ಲಿ ವಿಜಯ್ ಈಶ್ವರನ್ ಅವರಿಂದ ಸ್ಥಾಪನೆಯಾದ ಹಾಂಕಾಂಕ್ ಮೂಲದ ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಕಂಪನಿ ಇದಾಗಿದೆ. ಕ್ಯೂಐ ಗ್ರೂಪ್ ಇದರ ಮಾಲಿಕತ್ವ ಹೊಂದಿದೆ. ಹಣಕಾಸು ವಂಚನೆಯ ಆರೋಪದೊಂದಿಗೆ ಹಲವಾರು ರಾಷ್ಟ್ರಗಳಲ್ಲಿ ಇದು ನಿಷೇಧಗೊಂಡಿದೆ.
ಭಾರತದಲ್ಲೂ, ಬಾಂಬೆ ಹೈಕೋರ್ಟ್ ಈ ವಿಷಯದ ಬಗ್ಗೆ ಕೆಲವೊಂದು ಮಹತ್ವದ ಉಲ್ಲೇಖಗಳನ್ನು ಮಾಡಿದೆ. ಕ್ಯೂನೆಟ್ ಹಗರಣದಲ್ಲಿ ಐದು ಆರೋಪಿಗಳಿಗೆ ನಿರೀಕ್ಷಣಾ ಜಾಮೀನನ್ನು ನಿರಾಕರಿಸಿ ಹೇಳಿಕೆ ನೀಡಿದ್ದ ನ್ಯಾ.ಮೃದುಲ್ ಭಟ್ಕರ್ ಅವರು, ’ಈ ಕಂಪನಿಯ ಧ್ಯೇಯ ’ಹೆಚ್ಚು ಮಾರಿ, ಹೆಚ್ಚು ಆದಾಯ ಗಳಿಸಿ’ ಎಂಬುದು. ಕೇಳಲು ಆಕರ್ಷಕ ಮತ್ತು ನಿರುಪದ್ರವಿಯಾಗಿ ಕಾಣುತ್ತದೆ. ಆದಾಗ್ಯೂ, ಈ ಗುರಿಯನ್ನು ಸಂಪೂರ್ಣವಾಗಿ ಮರೆಮಾಡಲಾಗಿದೆ. ಜನರನ್ನು ಮೂರ್ಖರನ್ನಾಗಿಸಬಹುದು ಎಂಬ ತತ್ವದೊಂದಿಗೆ ಇದು ಕೆಲಸ ಮಾಡುತ್ತಿದೆ’ ಎಂದಿದ್ದರು.
ಅಲ್ಲದೇ ’ಇದು ಜನರ ಆರ್ಥಿಕ ಸ್ಥಾನಮಾನ ಮತ್ತು ಮಾನಸಿಕ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿದೆ, ಅಪರಾಧ ದಂಡ ಸಂಹಿತೆಯ ಸೆಕ್ಷನ್ 438ರ ಅನುಸಾರ, ಆರೋಪಿಯನ್ನು ನಾನು ರಕ್ಷಣೆ ಮಾಡುವುದಿಲ್ಲ. ಈ ಉದ್ಯಮ ಚಟುವಟಿಕೆ ಮೂಲಕ ಕ್ರಮಕೈಗೊಳ್ಳುವ ಕ್ರಮಕೈಗೊಳ್ಳುವುದು ನ್ಯಾಯಾಂಗಕ್ಕೆ ಅನಿವಾರ್ಯ. ಈ ಉದ್ಯಮವನ್ನು ನಿಲ್ಲಿಸಿದರೆ, ಅನೇಕ ಮಂದಿ ಆರ್ಥಿಕವಾಗಿ ಸಂಕಷ್ಟಕ್ಕೀಡಾಗುತ್ತಾರೆ ಎಂಬುದು ನಿಜ, ಆದರೆ ಅನೇಕ ಮಂದಿ ಈ ಉದ್ಯಮದ ಪಾಶಕ್ಕೆ ಬೀಳದಿರುವುದರಿಂದ ಸುರಕ್ಷಿತರಾಗುತ್ತಾರೆ”
ಮನಿಲೈಫ್ 2012ರಲ್ಲಿ ರಹಸ್ಯ ವರದಿಯಲ್ಲಿ ವರದಿಯನ್ನು ಮಾಡಿದ್ದು, ಅದರಲ್ಲಿ ಕ್ಯೂನೆಟ್ ಸಂಸ್ಥೆ “ರಾಷ್ಟ್ರೀಯ ಭದ್ರತೆಗೆ ಸಂಭವನೀಯ ಬೆದರಿಕೆ” ಎಂದು ಹೇಳಿದೆ.
ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ಘಟಕ 2013 ರ ಆಗಸ್ಟ್ನಲ್ಲಿ ಈ ಪ್ರಕರಣದ ಮೊದಲ ಬಂಧನವನ್ನು ಮಾಡಿತು. ಈ ಘಟಕವು ಶಂಕಿತ ವಂಚನೆ ಪ್ರಕರಣವನ್ನು ತನಿಖೆ ನಡೆಸುತ್ತಿದೆ. ಅದೇ ತಿಂಗಳಲ್ಲಿ, ಈ ಕಂಪೆನಿಯ 6 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿತ್ತು, ಇದರಲ್ಲಿ 46 ಕೋಟಿ ರೂ ಠೇವಣಿ ಇತ್ತು. ಇದು ಆಗಸ್ಟ್ 16 ರಂದು ಕಂಪೆನಿಯ ವಿರುದ್ಧ ಮತ್ತು ಅದರ ಕಚೇರಿ ಅಧಿಕಾರಿಗಳ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ.
2009ರಲ್ಲಿ ಕಂಪೆನಿಯ ವಿರುದ್ಧ ತಮಿಳುನಾಡಿನಲ್ಲೂ ಪ್ರಕರಣ ದಾಖಲಾಯಿತು. ಬಂಗಾರದ ನಾಣ್ಯಗಳು ಮತ್ತು ಇತರ ವಸ್ತುಗಳನ್ನು ಸೀಮಿತ ಆವೃತ್ತಿಯಷ್ಟೇ ಇರುವುದು ಎಂದು ಹೇಳಿ ಜನರನ್ನು ನಂಬಿಸಿ ಹೆಚ್ಚು ಬೆಲೆಗಗೆ ಮಾರಾಟ ಮಾಡಿದ್ದಕ್ಕಾಗಿ ಪ್ರಕರಣವನ್ನು ದಾಖಲು ಮಾಡಲಾಗಿತ್ತು.
ಸಿದ್ದರಾಮಯ್ಯ ಅವರು ಈಶ್ವರನ್ ಅವರನ್ನು 2013ರ ಚೀನಾದ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಭೇಟಿಯಾದರು. ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಮನವಿ ಮಾಡಲು ಅವರು ಭೇಟಿಯಾದ ಉದ್ಯಮಿಗಳಲ್ಲಿ ಈಶ್ವರನ್ ಕೂಡ ಒಬ್ಬರು. ಭಾರತದ ವಿವಿಧ ತನಿಖಾ ಸಂಸ್ಥೆಗಳು ಅವರ ಕಂಒನಿ ವಿರುದ್ಧ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲೇ ಸಿದ್ದರಾಮಯ್ಯ ಭೇಟಿಯಾದರು. ಈಶ್ವರನ್ ಪ್ರಮುಖ ಆರೋಪಿಯೂ ಆಗಿದ್ದರು.
ಅಕ್ರಮಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ಈ ಕಂಪನಿ ಜೊತೆ ಬಾಂಧವ್ಯ ಹೊಂದಿರುವು ಕಾಂಗ್ರೆಸ್ ನಾಯಕ ಕೇವಲ ಸಿದ್ದರಾಮಯ್ಯ ಮಾತ್ರ ಅಲ್ಲ. ಮಾಜಿ ಸಚಿವ ಪಿ.ಚಿದಂಬರಂ ಅವರ ಪತ್ನಿ ನಳಿಸಿ ಚಿದಂಬರಂ ಅವರಿಗೂ ಈ ಕಂಪನಿಗೂ ಸಂಬಂಧವಿದೆ. ಇತ್ತೀಚಿಗಷ್ಟೇ ಶರದಾ ಚಿಟ್ ಫಂಡ್ಗೆ ಸಂಬಂಧಿಸಿದಂತೆ ನಳಿನಿ ಅವರ ಮೇಲೆ ಸಿಬಿಐ ಚಾಜ್ಶೀಟ್ ಸಲ್ಲಿಸಿದೆ.
ಕ್ಯೂನೆಟ್ ಕಂಪನಿ ಕೋಟ್ಯಾಂತರ ಮೌಲ್ಯದ ಅಕ್ರಮ ನಡೆಸಿರುವ ಶಂಕೆ ಇದೆ. ಈ ಬಗ್ಗೆ ತನಿಖೆಯೂ ಆಗುತ್ತಿದೆ. ಆದರೆ ಅದರೊಂದಿಗೆ ಸಂಪರ್ಕ ಹೊಂದಿರುವ ಕಾಂಗ್ರೆಸ್ ನಾಯಕರು ಅದರಲ್ಲೂ ಸಿದ್ದರಾಮಯ್ಯ ಆ ಕಂಪನಿಗೆ ಮಾಡಿದ ಲಾಭವೇನು ಎಂಬ ಬಗ್ಗೆ ಇನ್ನೂ ತನಿಖೆ ನಡೆದಿಲ್ಲ ಎಂಬುದು ವಿಪರ್ಯಾಸ.
source: opindia
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.