ನರೇಂದ್ರ ಮೋದಿ ಆಡಳಿತದ ಕಳೆದ ನಾಲ್ಕೂವರೆ ವರ್ಷಗಳಲ್ಲಿ, ಆಟೋಮೊಬೈಲ್ ಮತ್ತು ಸಾರಿಗೆ ವಲಯ ಕ್ಷಿಪ್ರಗತಿಯಲ್ಲಿ ಪ್ರಗತಿ ಕಂಡಿದೆ. ಟಿವಿ ಮೋಹನ್ ದಾಸ್ ಪೈ ಮತ್ತು ಯಶ್ ಬೈದ್ ಅವರು ಫಿನಾನ್ಶಿಯಲ್ ಎಕ್ಸ್ಪ್ರೆಸ್ನಲ್ಲಿ ಬರೆದ ಲೇಖನಗಳ ಪ್ರಕಾರ, 2018ರ ಹಣಕಾಸು ವರ್ಷದಲ್ಲಿ ಸಾರಿಗೆ ವಲಯದಲ್ಲಿ 34 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. 2019ರ ಹಣಕಾಸು ವರ್ಷದ ಮೊದಲ 9 ತಿಂಗಳಲ್ಲಿ 28 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮಾಫೆಕ್ಚರಿಂಗ್ ಮತ್ತು ಟ್ರ್ಯಾಕ್ಟರ್ ಆಂಡ್ ಮೆಕಾನಿಝೇಶನ್ ಅಸೋಸಿಯೇಶನ್ನ ಅಂಕಿಅಂಶಗಳು ಉದ್ಯೋಗ ಸೃಷ್ಟಿಯ ಬಗ್ಗೆ ಸ್ಪಷ್ಟವಾದ ಚಿತ್ರಣವನ್ನು ನೀಡುತ್ತವೆ.
ಕಳೆದ ಕೆಲವು ತಿಂಗಳುಗಳಿಂದ, ಈ ಸರ್ಕಾರದಡಿ ಸೃಷ್ಟಿಯಾದ ಉದ್ಯೋಗಗಳ ಬಗ್ಗೆ ಹಲವಾರು ಅಂಕಿಅಂಶಗಳು ಬರುತ್ತಿವೆ. ಇದನ್ನೇ ಇಟ್ಟುಕೊಂಡು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಮೋದಿ ಸರ್ಕಾರದ ಮೇಲೆ ದಾಳಿ ನಡೆಸುತ್ತಿವೆ ಮತ್ತು ಮುಂದಿನ ಚುನಾವಣೆಯಲ್ಲೂ ಇದನ್ನೇ ಅಸ್ತ್ರವನ್ನಾಗಿಸಲು ನಿರ್ಧರಿಸಿದೆ. ಈ ಹಿಂದೆ, ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ಮೈತ್ರಿಯಾಗಿರುವ ಥಿಂಕ್ ಟ್ಯಾಂಕ್ ‘ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕನಾಮಿ’ಯು ಉದ್ಯೋಗ ಸೃಷ್ಟಿಯ ಬಗ್ಗೆ ಅಪ್ರಬುದ್ಧ ವರದಿಯನ್ನು ಪ್ರಕಟಿಸಿದ್ದು, ಮೋದಿ ಸರ್ಕಾರವನ್ನು ಹಳಿಯುವುದು ಅದರ ಮುಖ್ಯ ಉದ್ದೇಶವಾಗಿತ್ತು. ಡಿಸೆಂಬರ್ನಲ್ಲಿ ಸಮೀಕ್ಷೆ ನಡೆಸಿ, 1,40,000 ಸ್ಪಂದನೆದಾರರ ಪ್ರತಿಕ್ರಿಯೆ ಪಡೆದುಕೊಂಡು, ದೇಶದಲ್ಲಿ ಕಳೆದ ವರ್ಷ 1 ಕೋಟಿ ಉದ್ಯೋಗಗಳು ಕಡಿಮೆಯಾಗಿವೆ ಎಂದು ವರದಿಯನ್ನು ಮಾಡಿತು. ಆದರೆ, ಇತರ ಸಮೀಕ್ಷೆ ಮತ್ತು ಅಂಕಿಅಂಶಗಳು ಇದಕ್ಕೆ ವಿರುದ್ಧವಾದ ಫಲಿತಾಂಶವನ್ನು ತೋರಿಸಿವೆ.
ಮೋದಿ ಸರಕಾರದಡಿ ಆಟೋಮೊಬೈಲ್ ವಲಯವು ತ್ವರಿತ ಮಟ್ಟದಲ್ಲಿ ಬೆಳೆದಿದೆ ಮತ್ತು ಅದರಲ್ಲೂ ವಿಶೇಷವಾಗಿ ದೇಶೀಯ ಮಾರಾಟವು ಈ ಬೆಳವಣಿಗೆಗೆ ಹೆಚ್ಚಿನ ಕೊಡುಗೆಯನ್ನು ನೀಡಿದೆ. ಮೂಲ ಸರಕುಗಳು ಮತ್ತು ಸೇವೆಗಳ ಬೆಲೆಗಳಲ್ಲಿ ಕಡಿತಗೊಂಡ ಕಾರಣದಿಂದಾಗಿ ಉಳಿತಾಯವಾದ ಆದಾಯದಿಂದ ಜನರು ವಾಹನಗಳನ್ನು ಹೊಂದಲು ಸಾಧ್ಯವಾಗುತ್ತಿದೆ. ಒಟ್ಟಾರೆ ದೇಶೀಯ ವಾಹನ ಮಾರಾಟಗಳು ಹಣಕಾಸು ವರ್ಷ 2013 ರಿಂದ 2018ರಲ್ಲಿ ಶೇ7.01 ರಷ್ಟು ಏರಿಕೆಯಾಗಿ 24.97 ದಶಲಕ್ಷ ವಾಹನಗಳ ಮಾರಾಟವಾಗಿದೆ. ಬೆಳೆಯುತ್ತಿರುವ ಮಧ್ಯಮ ವರ್ಗ ಮತ್ತು ಜನಸಂಖ್ಯಾ ವಿಭಜನೆ (ಕೆಲಸ ಮಾಡುವ ವಯಸ್ಸಿನ ಬಹುಪಾಲು ಜನಸಂಖ್ಯೆ) ದೇಶದಲ್ಲಿ ಆಟೋಮೊಬೈಲ್ ಕ್ಷೇತ್ರದ ಮಹತ್ವದ ಬೆಳವಣಿಗೆಗೆ ಮುಖ್ಯ ಕಾರಣಗಳು. ಸಯಾಮ್ ಮತ್ತು ಟಿಎಂಎಗಳ ಮಾಹಿತಿಯು ದೇಶದ ಗ್ರಾಹಕರ ಕ್ಷೇತ್ರದ ಅತ್ಯಂತ ಸಮಗ್ರ ಎಂದು ಪರಿಗಣಿತವಾಗಿದೆ. ಈ ಮಾಹಿತಿಯ ಪ್ರಕಾರ, ಸಾರಿಗೆ ವಲಯದಲ್ಲಿ ಉದ್ಯೋಗಗಳ ಸಂಖ್ಯೆ ಹಣಕಾಸು ವರ್ಷ 2015ರಲ್ಲಿ 26 ಲಕ್ಷ, ಹಣಕಾಸು ವರ್ಷ 2016 ರಲ್ಲಿ 27 ಲಕ್ಷ, ಹಣಕಾಸು ವರ್ಷ 2017 ರಲ್ಲಿ 28 ಲಕ್ಷ ಮತ್ತು ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಸುಮಾರು 28 ಲಕ್ಷಗಳು.
ದೇಶದ ಆಟೋಮೊಬೈಲ್ ಉದ್ಯಮವು ವಿಶ್ವದಲ್ಲೇ ಅತಿ ದೊಡ್ಡದಾಗಿದೆ. ಇದರ ಜೊತೆಜೊತೆಯಲ್ಲಿ ಐಟಿ ಕ್ಷೇತ್ರವೂ ದೇಶದ ರಫ್ತಿಗೆ ಉತ್ತಮ ಕೊಡುಗೆ ನೀಡುತ್ತಿದೆ. ಭಾರತ ವಿಶ್ವದ ಏಳನೇ ಅತಿದೊಡ್ಡ ವಾಣಿಜ್ಯ ವಾಹನಗಳ ಉತ್ಪಾದಕ ರಾಷ್ಟ್ರವಾಗಿದೆ. ವಾಣಿಜ್ಯ ವಾಹನಗಳ ರಫ್ತು ದೇಶಕ್ಕೆ ಸಾಕಷ್ಟು ವಿದೇಶಿ ವಿನಿಮಯವನ್ನು ತಂದುಕೊಡುತ್ತಿದೆ. ಆಟೋಮೊಬೈಲ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣತಿ ಪಡೆದಿರುವ ಆಟೋಮೊಬೈಲ್ ವಲಯವು ಭಾರತದ ರಫ್ತುಗಳನ್ನು ವೇಗಗೊಳಿಸಲು ಸಿದ್ಧವಾಗಿದೆ. ಮೆಕ್ಸಿಕೋ, ದಕ್ಷಿಣ ಆಫ್ರಿಕಾ ಮುಂತಾದ ಅಭಿವೃದ್ಧಿ ಹೊಂದುತ್ತಿರುವ ದೇಶಗಳೂ ಭಾರತದಷ್ಟೇ ಅಟೊಮೊಬೈಲ್ ಬೇಡಿಕೆಗಳನ್ನು ಹೊಂದಿದ್ದು, ಹೀಗಾಗಿ ಈ ದೇಶಗಳು ಅಪಾರ ಪ್ರಮಾಣದಲ್ಲಿ ಅಟೋಮೊಬೈಲ್ಗಳನ್ನು ಆಮದು ಮಾಡಿಕೊಳ್ಳುವ ನಿರೀಕ್ಷೆ ಇದೆ.
ಆಟೋಮೊಬೈಲ್ ಮತ್ತು ಮಾಹಿತಿ ತಂತ್ರಜ್ಞಾನದ ಸಂಗಮ ಎಂದು ಕರೆಯಲ್ಪಡುವ ವಲಯದ ದಾರಿಯನ್ನು ಮುನ್ನಡೆಸಲು ಭಾರತ ಯೋಜಿಸುತ್ತಿದೆ. ಇವುಗಳನ್ನು ಒಟ್ಟಾಗಿ CASE- ಸಂಪರ್ಕಿತ, ಸ್ವಾಯತ್ತತೆ, ಹಂಚಿಕೆಯ ಚಲನಶೀಲತೆ ಮತ್ತು ವಿದ್ಯುತ್ ಎಂದು ಉಲ್ಲೇಖಿಸಲಾಗುತ್ತದೆ. ಮರ್ಸಿಡಿಸ್-ಬೆನ್ಝ್ ಸ್ವಾಯತ್ತತೆ ಮತ್ತು ಭವಿಷ್ಯದ ಸಂಪರ್ಕಿತ ಕಾರುಗಳಿಗಾಗಿ ಭಾರತೀಯ ಮೂಲಗಳು ಈಗಾಗಲೇ ಸಾಫ್ಟ್ವೇರ್ ಕೋಡ್ಗಳನ್ನು ಹೊರತಂದಿದೆ. ಥಿಂಗ್ಸ್ ಇಂಟರ್ನೆಟ್ (ಐಒಟಿ) ನೊಂದಿಗೆ ಸಂಪರ್ಕ ಹೊಂದಿದ ಚಾಲಕ ರಹಿತ ಕಾರುಗಳು ಆಟೋಮೊಬೈಲ್ ಉದ್ಯಮದ ಭವಿಷ್ಯ ಎನಿಸಿಕೊಂಡಿವೆ ಮತ್ತು ಭಾರತವು ಅದೇ ಕಡೆಗೆ ಮುನ್ನಡೆಯುತ್ತಿದೆ.
ಮೂಲ ಲೇಖನ : Amit Agrahari
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.