ದೇಶದ ಬಹುತೇಕ ಜನರು ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ಆರ್ಥಿಕ ಸುಧಾರಣಾ ಕ್ರಮಗಳ ಬಗ್ಗೆ ಸಹಮತವನ್ನು ಹೊಂದಿದ್ದಾರೆ ಎಂಬುದು ದಿ ಎಕನಾಮಿಕ್ಸ್ ಟೈಮ್ಸ್ ಇತ್ತೀಚಿಗೆ ನಡೆಸಿದ ಆನ್ಲೈನ್ ಸಮೀಕ್ಷೆಯಿಂದ ದೃಢಪಟ್ಟಿದೆ. ಈ ನಿಯಮಗಳನ್ನು 2019ರ ಬಜೆಟ್ಗೂ ವಿಸ್ತರಣೆಗೊಳಿಸುವ ಅವಶ್ಯಕತೆಯಿದೆ ಎಂಬುದನ್ನು ಸಮೀಕ್ಷೆ ಪ್ರತಿಪಾದಿಸಿದೆ. ಅಷ್ಟೇ ಅಲ್ಲದೇ, ಮೋದಿ ಸರ್ಕಾರದಡಿ ಭಾರತದ ಆರ್ಥಿಕತೆ ಸಾಕಷ್ಟು ಸುಧಾರಣೆ ಕಂಡಿದೆ ಎಂಬುದು ಬಹುತೇಕರ ನಂಬಿಕೆಯಾಗಿದೆ.
ಮೋದಿ ಸರ್ಕಾರವು ಮುಂಬರುವ ಬಜೆಟ್ನಲ್ಲಿ ಮಧ್ಯಮ ವರ್ಗಗಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಘೋಷಣೆ ಮಾಡಲಿದೆ ಎಂಬ ವದಂತಿಗಳಿವೆ. ಹಿಂದಿ ಹೃದಯಭಾಗದ ರಾಜ್ಯಗಳಲ್ಲಿ ಇತ್ತೀಚಿನ ಚುನಾವಣೆಯಲ್ಲಿ ಮೋದಿ ಸರ್ಕಾರ ಜನಾದೇಶ ಪಡೆಯಲು ವಿಫಲವಾದರೂ, ಅಲ್ಲಿನ ಜನರು ಮೋದಿ ಸರ್ಕಾರದ ಕಾರ್ಯ, ಸಾಧನೆ, ಆರ್ಥಿಕ ನೀತಿಗಳ ಬಗ್ಗೆ ಅರಿವು ಹೊಂದಿದ್ದಾರೆ ಎಂಬುದನ್ನು ಸಮೀಕ್ಷೆ ಬಹಿರಂಗಪಡಿಸಿದೆ. ಜನರು ಸಾಮಾನ್ಯವಾಗಿ ಜನಪ್ರಿಯ ಘೋಷಣೆಗಳನ್ನು ನಿರೀಕ್ಷೆ ಮಾಡುತ್ತಾರೆ. ಈ ಬಾರಿ ಆರ್ಥಿಕ ಪ್ರಗತಿಯನ್ನು ನಿರ್ವಹಿಸುವತ್ತ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು ಎಂದೂ ಜನ ಬಯಸುತ್ತಿದ್ದಾರೆ.
ಈಗಿರುವ ಪ್ರಶ್ನೆಯೆಂದರೆ ಮೋದಿ ಆಡಳಿತದಲ್ಲಿ ಆರ್ಥಿಕತೆ ಸುಧಾರಣೆ ಕಂಡಿದೆಯೇ ಎಂಬುದು? ಇದಕ್ಕೆ ಅಂಕಿಅಂಶಗಳೇ ಉತ್ತರ ನೀಡುತ್ತವೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ. 80ರಷ್ಟು ಮಂದಿ ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ. ಶೇ. 51 ರಷ್ಟು ಮಂದಿ ಸ್ಪಷ್ಟವಾಗಿ ಹೌದು ಎಂದಿದ್ದಾರೆ, ಶೇ. 18 ರಷ್ಟು ಮಂದಿ ಸ್ಪಷ್ಟವಾಗಿ ಇಲ್ಲ ಎಂದಿದ್ದಾರೆ, ಶೇ.28 ರಷ್ಟು ಸಮಾಧಾನಕರ ಎಂದಿದ್ದಾರೆ, ಶೇ.3ರಷ್ಟು ಮಂದಿ ಏನೂ ಪ್ರತಿಕ್ರಿಯೆ ನೀಡಿಲ್ಲ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅನುಷ್ಠಾನದ ವಿಷಯಕ್ಕೆ ಸಂಬಂಧಿಸಿದಂತೆ, ಶೇ.62 ರಷ್ಟು ಮಂದಿ ಇದು ಆರಂಭಿಕ ತೊಡಕುಗಳಿಂದ ಮೇಲೆದ್ದಿದೆ ಎಂದು ಅಭಿಪ್ರಾಯಿಸಿದ್ದಾರೆ. ಪ್ರತಿಪಕ್ಷ ಏನೇ ಹೇಳಿದರೂ, ತೆರಿಗೆ ಸುಧಾರಣಾ ಕ್ರಮಕ್ಕೆ ಜನರು ಸಂತುಷ್ಟರಾಗಿದ್ದಾರೆ ಎಂಬುದನ್ನು ಸಮೀಕ್ಷೆ ತೋರಿಸಿದೆ.
ಕಡಿಮೆ ಅವಧಿಯಲ್ಲಿ ಅಂದರೆ ಎರಡು ಮೂರು ವರ್ಷ ಜಿಎಸ್ಟಿ ಹಾನಿಕಾರಕವಾಗಿ ಪರಿಣಮಿಸಬಹುದು ಎಂಬ ನಿರೀಕ್ಷೆ ಇತ್ತು, ಆದರೆ ಮೋದಿ ಸರ್ಕಾರ ಅಂದುಕೊಂಡದ್ದಕ್ಕಿಂತ ಕಡಿಮೆ ಹಾನಿ ಮಾಡಿದೆ. ಭಾರತದ ತೆರಿಗೆ ಮೂಲವನ್ನು ವಿಸ್ತರಿಸುವಲ್ಲಿ ಜಿಎಸ್ಟಿ ಪರಿಣಾಮಕಾರಿ ಅಸ್ತ್ರವಾಗಿದೆ, ದೇಶದ ನೇರ ಮತ್ತು ಪರೋಕ್ಷ ತೆರಿಗೆ ಆದಾಯವನ್ನು ವೃದ್ಧಿಸಲು ಸಹಾಯ ಮಾಡಿದೆ. 2017-18ರ ಹಣಕಾಸು ವರ್ಷದಲ್ಲಿ ತೆರಿಗೆ ಪಾವತಿದಾರರ ಸಂಖ್ಯೆ 6 ಮಿಲಿಯನ್ನಿಂದ 10.6 ಮಿಲಿಯನ್ಗೆ ಏರಿಕೆಯಾಗಿದೆ. ಇದು ಜಿಎಸ್ಟಿ ಪ್ರಭಾವ.
ಇದೇ ರೀತಿ, ಬಹುತೇಕರು ನೋಟ್ ಬ್ಯಾನ್ ಕೂಡ ಯಶಸ್ವಿಯಾಗಿದೆ ಎಂದು ಅಭಿಪ್ರಾಯಿಸಿದ್ದಾರೆ. ಸಮೀಕ್ಷೆಯಲ್ಲಿ ಭಾಗಿಯಾದ ಶೇ. 64 ರಷ್ಟು ಮಂದಿ ನೋಟ್ ಬ್ಯಾನ್ ಪೂರ್ಣ ಅಥವಾ ಅರ್ಧ ಯಶಸ್ಸು ಕಂಡಿದೆ ಎಂದು ಅಭಿಪ್ರಾಯಿಸಿದ್ದಾರೆ. ಶೇ.32ರಷ್ಟು ಮಂದಿ ಟೀಕಿಸಿದ್ದಾರೆ. ಶೇ.5ರಷ್ಟು ಮಂದಿ ಅನಿಶ್ಚಿತತೆಯಲ್ಲಿದ್ದಾರೆ. ಒಟ್ಟು 10,506 ಮಂದಿ ಆನ್ಲೈನ್ ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ.
ಮುಖ್ಯವಾಗಿ ಎಕನಾಮಿಕ್ ಸರ್ವೇ 2018 ಪ್ರಕಾರ, ನೋಟ್ ಬ್ಯಾನ್ ಬಳಿಕದ ವರ್ಷಗಳಲ್ಲಿ (ನವೆಂಬರ್ 2016-ನವೆಂಬರ್ 2017) 10.1 ಮಿಲಿಯನ್ ಜನರು ಆದಾಯ ತೆರಿಗೆಯನ್ನು ಪಾವತಿ ಮಾಡಿದ್ದಾರೆ. ಅದರ ಹಿಂದಿನ ಆರು ವರ್ಷಗಳಲ್ಲಿ 6.2 ಮಿಲಿಯನ್ ಜನ ಸಾಮಾನ್ಯವಾಗಿ ತೆರಿಗೆ ಪಾವತಿ ಮಾಡುತ್ತಿದ್ದರು. ಆದರೆ ನೋಟ್ ಬ್ಯಾನ್ ಬಳಿಕ 1.5 ಪಟ್ಟು ತೆರಿಗೆದಾರರ ಸಂಖ್ಯೆ ಹೆಚ್ಚಾಗಿದೆ.
ದೂರದೃಷ್ಟಿತ್ವವುಳ್ಳ ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಸಂಬಂಧಿಸಿದಂತೆ, ಸಮೀಕ್ಷೆಗೊಳಪಟ್ಟ ಶೇ. 18 ರಷ್ಟು ಮಂದಿ ಇದು ಯಶಸ್ಸು ಕಂಡಿದೆ ಎಂದಿದ್ದಾರೆ. ಶೇ. 59 ರಷ್ಟು ಜನ ಇದು ಸಾಮಾನ್ಯ ಪ್ರಭಾವ ಬೀರಿದೆ ಎಂದಿದ್ದಾರೆ, ಶೇ. 18 ರಷ್ಟು ಮಂದಿ ವಿಫಲವಾಗಿದೆ ಎಂದಿದ್ದಾರೆ. ‘ಮೇಕ್ ಇನ್ ಇಂಡಿಯಾ’ ಎಂಬುದು ಮೋದಿ ಸರ್ಕಾರದ ಅತೀ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸರ್ಕಾರ ದೇಶದ ಉತ್ಪಾದನಾ ವಲಯವನ್ನು ಉತ್ತೇಜಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದೆ.
ಎಕನಾಮಿಕ್ ಟೈಮ್ಸ್ ಮಾಧ್ಯಮ ನಡೆಸಿದ ಈ ಸಮೀಕ್ಷೆ ಅಪಪ್ರಚಾರ ಮಾಡುವ, ಮೋದಿ ಸರ್ಕಾರದ ಒಳ್ಳೆಯ ಕಾರ್ಯಗಳನ್ನು ಟೀಕಿಸುವ ಗ್ಯಾಂಗ್ಗಳಿಗೆ ದುಃಸ್ವಪ್ನವಾಗಿ ಕಾಡುವುದರಲ್ಲಿ ಅನಮಾನವಿಲ್ಲ. ಕ್ರಾಂತಿಕಾರಿ ಹೆಜ್ಜೆಗಳಾದ ನೋಟ್ ಬ್ಯಾನ್, ಜಿಎಸ್ಟಿ, ಮೇಕ್ ಇನ್ ಇಂಡಿಯಾ ಯೋಜನೆಗಳು ಕೇವಲ ಯಶಸ್ವಿಯಾಗಿದ್ದು ಮಾತ್ರವಲ್ಲ, ಜನರೂ ಇವುಗಳನ್ನು ಅತ್ಯಂತ ಸಂತೋಷದಿಂದ ಸ್ವಾಗತಿಸಿದ್ದಾರೆ ಎಂಬುದನ್ನು ಸಮೀಕ್ಷೆ ದೃಢಪಡಿಸಿದೆ.
Source : Rightlog
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.