ಚುನಾವಣೆಗಳು ಹತ್ತಿರ ಬರುತ್ತಿರುವಂತೆ ಎಲ್ಲರೂ ಚುನಾವಣಾ ಪಂಡಿತರಾಗುತ್ತಿದ್ದಾರೆ. ಪತ್ರಕರ್ತರು ಆಯ್ದ ಅಂಕಿ-ಅಂಶಗಳನ್ನು ಜನರ ಮುಂದಿಡುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ, ಪತ್ರಕರ್ತರಾದವರು ಜನರ ನಾಡಿಮಿಡಿತ ಅರಿತಿರಬೇಕು, ವಿಷಯದ ಆಳ ಜ್ಞಾನ ಹೊಂದಿರಬೇಕು, ವಿಶಾಲ ಅರ್ಥೈಸುವಿಕೆ ಹೊಂದಿರಬೇಕು ಎಂದು ಹೇಳಲಾಗುತ್ತಿತ್ತು. ಆದರೀಗ ತಮ್ಮ ಜ್ಞಾನ ಮಿತಿಯನ್ನು ಅರಿಯದೆ ಎಲ್ಲರೂ ತಜ್ಞರು ಎನಿಸಿಕೊಳ್ಳುತ್ತಿದ್ದಾರೆ. ಸರ್ಕಾರದ ನೀತಿ, ನಿಯಮ, ಆಡಳಿತ, ಆರ್ಥಿಕತೆಯ ಬಗ್ಗೆ ತಿಳಿಯದೆಯೇ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾರೆ.
ಮೋದಿ ಸರ್ಕಾರದಲ್ಲಿ ಅತ್ಯಂತ ಯಶಸ್ಸು ಕಂಡಿರುವ ‘ಬೇಟಿ ಬಚಾವೋ ಬೇಟಿ ಪಡಾವೋ’ ದೇಶದಲ್ಲಿ ಲಿಂಗ ಸಮಾನತೆಯನ್ನು ತರುವ ಅತೀ ಪ್ರಮುಖವಾದ ಯೋಜನೆ. ಭಾರತದ ಶಾಲೆಗಳ ದಾಖಲಾತಿಯಲ್ಲಿ ಲಿಂಗ ಅಂತರ ಬಹಳಷ್ಟಿರುವುದು ಎಲ್ಲರಿಗೂ ತಿಳಿದ ವಿಷಯ. ಹೆಣ್ಣು ಮಕ್ಕಳನ್ನು ನಾನಾ ಕಾರಣಗಳಿಗಾಗಿ ಪೋಷಕರು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಾರೆ. ಅದರಲ್ಲಿ ಟಾಯ್ಲೆಟ್ ಸಮಸ್ಯೆಯೂ ಒಂದು. ಗುಜರಾತಿನಲ್ಲಿದ್ದಾಗಲೇ ಪ್ರಧಾನಿ ನರೇಂದ್ರ ಮೋದಿ ಈ ಸಮಸ್ಯೆಯನ್ನು ಅರ್ಥಮಾಡಿಕೊಂಡಿದ್ದರು. ಹೀಗಾಗಿ ಅಲ್ಲಿ ಹೆಣ್ಣು ಮಕ್ಕಳಿಗಾಗಿ ಶಾಲೆಯಲ್ಲಿ ಶೌಚಾಲಯಗಳ ನಿರ್ಮಾಣ ಮಾಡುವ ಹೊಣೆ ಹೊತ್ತುಕೊಂಡಿದ್ದರು. ಅಂದು ಮುಖ್ಯಮಂತ್ರಿಯಾಗಿದ್ದ ಮೋದಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದು ಮಾತ್ರವಲ್ಲ, ಈ ಬಗೆಗಿನ ಕಾರ್ಯಗಳನ್ನು ಖುದ್ದಾಗಿ ಪರಿಶೀಲನೆಯೂ ಮಾಡುತ್ತಿದ್ದರು.
ಹೀಗಾಗಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ಕೆಲವೇ ಅವಧಿಯಲ್ಲಿ ಅವರು ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆಯನ್ನು ಜಾರಿಗೊಳಿಸಿದ್ದು ಆಶ್ಚರ್ಯದ ಸಂಗತಿಯೇನೂ ಅಲ್ಲ. 2014ರ ಆ.15ರಂದು ಕೆಂಪು ಕೋಟೆಯ ಮೇಲೆ ನಿಂತು ಭಾರತದ ಶೌಚಾಲಯ ಸಮಸ್ಯೆ ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಧೈರ್ಯವನ್ನು ಅವರು ಮಾಡಿದರು. ಈ ಸಮಸ್ಯೆಗಳತ್ತ ಗಮನ ಹರಿಸುವ ಅನಿವಾರ್ಯತೆ ಭಾರತಕ್ಕೆ ಇದೆ ಎಂದು ಪ್ರತಿಪಾದಿಸಿದರು.
ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯನ್ನು ಯಶಸ್ವಿಗೊಳಿಸಲು ಮುಖ್ಯಮಂತ್ರಿಯಾದಾಗಿನ ಅನುಭವ ಅವರ ಕೈ ಹಿಡಿಯಿತು. (ಯಾಕೆ ಈ ಯೋಜನೆ ಯಶಸ್ವಿಯಾಯಿತು ಎಂಬುದನ್ನು ತಿಳಿಯಲು ಕೆಳಗಿನ ಅಂಕಿ-ಅಂಶ ಗಮನಿಸಿ, ಮಹಿಳಾ ಮತ್ತು ಪುರುಷರ ದಾಖಲಾತಿ ಅಂತರ ಸಾಕಷ್ಟು ಕುಗ್ಗಿದೆ). ಶೌಚಾಲಯದ ಅವಶ್ಯಕತೆ ಹೆಣ್ಣು ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವ ಒಂದು ಭಾಗವಷ್ಟೇ. ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಜನರ ಮನೋಭಾವ ಬದಲಿಸುವ ಸವಾಲು ಬಹಳಷ್ಟಿದೆ. ಈ ನಿಟ್ಟಿನಲ್ಲಿ ಈ ಯೋಜನೆ ಸಾಕಷ್ಟು ಕೆಲಸ ಮಾಡಿದೆ. ಸರ್ಕಾರ ಕೇಂದ್ರಿತ ಗಮನದಿಂದ ಹೆಣ್ಣು ಮಕ್ಕಳ ದಾಖಲಾತಿಯನ್ನು ಹೆಚ್ಚಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ #ಸೆಲ್ಫಿವಿದ್ಡಾಟರ್ ಕ್ಯಾಂಪೇನನ್ನು ಆರಂಭಿಸಿದ ಮೋದಿಗೆ, ಹಲವಾರು ಬುದ್ಧಿಜೀವಿಗಳು ಇದರಿಂದ ಏನೂ ಪ್ರಯೋಜನವಾಗದು ಎಂದು ಕೊಂಕು ನುಡಿದಿದ್ದರು. ಆದರೆ ಈ ಬುದ್ಧಿಜೀವಿಗಳು ಅಭಿಯಾನದ ಸಾಂಕೇತಿಕ ಪ್ರಭಾವವನ್ನು ಗುರುತಿಸುವಲ್ಲಿ ವಿಫಲಗೊಂಡಿದ್ದಾರೆ. ಪೂರ್ವಾಗ್ರಹಪೀಡಿತ ವರ್ತನೆ, ಬದಲಾಯಿಸಲು ಸಾಧ್ಯವಾಗದಂತಹ ನಡವಳಿಕೆಗಳು ನಮ್ಮ ದೇಶದ ಹಲವಾರು ಪ್ರಮುಖ ಅಭಿಯಾನಗಳು ವಿಫಲಗೊಂಡಿರುವುದರ ಹಿಂದಿನ ಕಾರಣಗಳು. ಭಾರತದಂತಹ ವಿವಿಧತೆಯ ದೇಶದಲ್ಲಿ ಜನರ ವರ್ತನೆ ಬದಲಾಯಿಸಲು ಸುದೀರ್ಘ ಸಮಯ ಮತ್ತು ಹಣದ ಅವಶ್ಯಕತೆ ಇದೆ. ಸಾಮಾಜಿಕ ಜಾಲತಾಣದ ಈ ಯೋಜನೆ ಪ್ರಧಾನಿಗಳು ಆರಂಭಿಸಿದ ಅಭಿಯಾನ, ಕೇಂದ್ರಿತ ನೀತಿಕಾರ್ಯ, ಜನರ ಒಳಗೊಳ್ಳುವಿಕೆಯ ಮೂಲಕ ಭಾರೀ ಯಶಸ್ಸು ಕಂಡಿದೆ.
ಜಾಹೀರಾತಿಗೆ ಹಣ ಖರ್ಚು ಮಾಡಿದ್ದಕ್ಕೆ ಜನರ ಕೊಂಕು ನುಡಿಯಬಹುದು, ಆದರೆ ಸತ್ಯ ಸುಳ್ಳಾಗಲಾದರು. ಕೇಂದ್ರದ ಯೋಜನೆ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ ಮತ್ತು ಶಾಲಾ ದಾಖಲಾತಿಯಲ್ಲಿನ ಲಿಂಗ ಅಂತರವನ್ನು ಕುಗ್ಗಿಸಿದೆ. ಬೇಟಿ ಬಚಾವೋ ಬೇಟಿ ಪಡಾವೋ ಯಶಸ್ವಿಯಾಗಿದ್ದು, ಭಾರತದಲ್ಲಿನ ಲಿಂಗಾನುಪಾತವನ್ನು ನಿಧಾನಕ್ಕೆ ಚೇತರಿಕೆಯಾಗುವಂತೆ ಮಾಡುತ್ತಿದೆ ಎಂಬುದು ಅಂಕಿ-ಅಂಶದಿಂದ ದೃಢವಾಗುತ್ತದೆ.
ಕೆಲವರು ಜಾಹೀರಾತಿಗೆ ವ್ಯಯಿಸಿದ ವೆಚ್ಚಗಳತ್ತ ಮಾತ್ರ ಗಮನಹರಿಸಬಹುದು, ಆದರೆ ಜನರನ್ನು ತಲುಪಲು ಜಾಹೀರಾತುಗಳು ಅತ್ಯವಶ್ಯಕ ಎಂಬುದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ಸತ್ಯ. ಶೌಚಾಲಯ ನಿರ್ಮಾಣದ ಅರಿವನ್ನು ಮೂಲೆ ಮೂಲೆಯ ಜನರಿಗೆ ತಲುಪಿಸಲು ಜಾಹೀರಾತಿನಂತಹ ಪ್ರಬಲ ಅಸ್ತ್ರಗಳು ಮುಖ್ಯವಾಗುತ್ತವೆ.
ರಾಹುಲ್ ಗಾಂಧಿಯವರು ಮಾಹಿತಿಗಾಗಿ ಎಡಪಂಥೀಯರ ಮಾಧ್ಯಮಕ್ಕಷ್ಟೇ ಅವಲಂಬಿತವಾಗಿದ್ದಾರೆ. ಅವರು ತಮ್ಮ ಮೂಗಿನ ನೇರಕ್ಕೆ ವಿಷಯ ಮಂಡನೆಗೊಳಿಸುವ ಅಭ್ಯಾಸವುಳ್ಳವರು. ಜಾಹೀರಾತಿಗೇ ಹೆಚ್ಚು ಹಣವನ್ನು ವ್ಯಯಿಸಿದ್ದಾರೆ, ಈ ಕಾರಣದಿಂದಾಗಿ ಬೇಟಿ ಬಚಾವೋ ಬೇಟಿ ಪಡಾವೋ ವಿಫಲವಾಗಿದೆ ಎಂಬುದು ಇವರ ವಾದ. ಆದರೆ ವಾಸ್ತವದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯೇ ಒಂದು ಜಾಗೃತಿ ಕಾರ್ಯಕ್ರಮ. ಜನಜಾಗೃತಿ ಮೂಡಿಸಲು ಬಳಸುವ ದೊಡ್ಡ ಅಸ್ತ್ರವೇ ಜಾಹೀರಾತು. ಬೇಟಿ ಬಚಾವೋ ಬೇಟಿ ಪಡಾವೋ ಒಂದು ದೊಡ್ಡ ರಾಷ್ಟ್ರವ್ಯಾಪಿ ಅರಿವು ಯೋಜನೆ, ಹೀಗಾಗಿ ಪ್ರಚಾರಕ್ಕೆ ಹಣ ವ್ಯಯಿಸಲೇಬೇಕು. ಆದರೆ ಯಾರು ಏನೇ ಹೇಳಿದರು ಎಡ ಮಾಧ್ಯಮ ಮತ್ತು ರಾಹುಲ್ ಗಾಂಧಿ ಸತ್ಯವನ್ನು ಎಂದಿಗೂ ಒಪ್ಪಿಕೊಳ್ಳಲಾರದು.
ಆಸಕ್ತಿದಾಯಕ ವಿಷಯವೆಂದರೆ, 1947ರಿಂದ ದೇಶದ ಬಹು ಭಾಗಗಳನ್ನು ಕಾಂಗ್ರೆಸ್ ಸರ್ಕಾರವೇ ಆಳಿದೆ. ಆದರೆ ಕಾಂಗ್ರೆಸ್ ಪಕ್ಷದ ಕೇಂದ್ರ ಕಛೇರಿಯಲ್ಲಿ ಮಹಿಳೆಯರಿಗಾಗಿ ಒಂದೇ ಒಂದು ಶೌಚಾಲಯವಿಲ್ಲ. ಇದು ಆ ಪಕ್ಷದ ಮಹಿಳಾ ಸಬಲೀಕರಣದ ಕಡೆಗಿನ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಇಂದಿರಾ ಗಾಂಧಿ, ಸೋನಿಯಾ ಗಾಂಧಿಯಂತಹ ನಾಯಕರಿದ್ದರೂ ಆ ಪಕ್ಷದ ಈ ಧೋರಣೆ ಅಚ್ಚರಿ ಎನಿಸುತ್ತದೆ.
ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಜಾಹೀರಾತಿಗೆ ವ್ಯಯಿಸಲಾದ ಹಣದ ಬಗ್ಗೆ ಪ್ರಶ್ನೆ ಮಾಡುವವರು, ಕಾಂಗ್ರೆಸ್ ಕೇಂದ್ರ ಕಛೇರಿಯಲ್ಲಿ ಮಹಿಳೆಯರಿಗೆ ಯಾಕೆ ಶೌಚಾಲಯ ಇಲ್ಲ ಎಂದು ಪ್ರಶ್ನಿಸುವರೇ? ದೇಶದ ಇಡೀ ಗ್ರಾಮಕ್ಕೆ ವಿದ್ಯುತ್ ಪೂರೈಸಲು ಮೋದಿ ಬರಬೇಕು ಎನ್ನುವ ಹಾಗೆ ಕಾಂಗ್ರೆಸ್ ಕೇಂದ್ರ ಕಛೇರಿಯಲ್ಲಿಯೂ ಮಹಿಳೆಯರಿಗೆ ಶೌಚಾಲಯವನ್ನು ಮೋದಿಯೇ ನಿರ್ಮಿಸಿಕೊಡಬೇಕೆಂದು ರಾಹುಲ್ ಕಾಯುತ್ತಿದ್ದಾರೆಯೇ?
ಮೂಲ ಲೇಖನ : ಗುಂಜಾ ಕಪೂರ್ ; ಕೃಪೆ : opindia.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.