ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡುತ್ತಿರುವ #5yearchallengeನಂತೆ ಬಿಜೆಪಿ #5ಇಯರ್ಚಾಲೆಂಜ್ನ್ನು ಹರಿಬಿಟ್ಟಿದ್ದು, ತನ್ನ 5 ವರ್ಷಗಳ ಸಾಧನೆಗಳನ್ನು ಪ್ರದರ್ಶಿಸಿದೆ. ಈ ಮೂಲಕ ಹಿಂದಿನ ಯುಪಿಎ ಸರ್ಕಾರಕ್ಕೆ ಟಾಂಗ್ ನೀಡಿದೆ.
#5yearchallenge ಶುಕ್ರವಾರ ಬೆಳಿಗ್ಗೆ ಟಾಪ್ ಟ್ರೆಂಡ್ನಲ್ಲಿರುವ ಹ್ಯಾಶ್ಟ್ಯಾಗ್ ಆಗಿತ್ತು.
5 ವರ್ಷದಲ್ಲಿ ಭಾರತದ ಆರ್ಥಿಕ ವಲಯದಲ್ಲಾದ ಬದಲಾವಣೆಗಳನ್ನು ಇಲ್ಲಿ ಬಿಜೆಪಿ ತೋರಿಸಿದೆ. ಮಾತ್ರವಲ್ಲ ವಿವಿಧ ಮೂಲಸೌಕರ್ಯ ಯೋಜನೆಗಳು ಫೋಟೋಗಳನ್ನು, ಅಭಿವೃದ್ಧಿ ಕಂಡ ಪ್ರದೇಶಗಳನ್ನು, ಅದು ಹಿಂದೆ ಇದ್ದ ಸ್ವರೂಪವನ್ನು ಪೋಟೋ ಸಹಿತ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ರಬಿ ಮತ್ತು ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಕೆ, ರಸ್ತೆ ಸಂಪರ್ಕ, ಗ್ರಾಮೀಣ ವಿದ್ಯುತ್, ವಿದೇಶಿ ನೇರ ಬಂಡವಾಳ ಹರಿಯುವಿಕೆ, ಹೆಚ್ಚಿದ ಅನಿಲ ಸಂಪರ್ಕ ಹೀಗೆ ಹತ್ತು ಅಭಿವೃದ್ಧಿಗಳನ್ನು #5yearchallengeನಲ್ಲಿ ಬಿಜೆಪಿ ನೀಡಿದೆ.
ವಿವಿಧ ಬಿಜೆಪಿ ನಾಯಕರು ತಮ್ಮ ಪಕ್ಷದ ಈ ಸಾಮಾಜಿಕ ಜಾಲತಾಣ ಅಭಿಯಾನಕ್ಕೆ ಬೆಂಬಲ ನೀಡಿದ್ದು, ಇನ್ನುಷ್ಟು ಫೋಟೋ, ವರದಿಗಳನ್ನು ಹಂಚಿಕೊಂಡಿದ್ದಾರೆ.
The long overdue completion of a crucial project like the Bogibeel Bridge, along with transformational policies like Ayushman Bharat and Ujjwala Yojana symbolise the 360 degree makeover India has seen since 2014 #5YearChallenge pic.twitter.com/sHbHvpqFTD
— Piyush Goyal (@PiyushGoyal) January 18, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.