ಆರು ದಶಕಗಳ ಕಾಲ ಕಾಂಗ್ರೆಸ್ ವಿಳಂಬ ಸಂಸ್ಕೃತಿಯ ಸರ್ಕಾರವನ್ನು ನಡೆಸಿದೆ. ಆಡಳಿತಶಾಹಿಯ ಜಡತ್ವ, ಭ್ರಷ್ಟಾಚಾರ ಮುಂತಾದ ಕಾರಣಗಳಿಂದಾಗಿ ಒಂದು ಯೋಜನೆ ಅನುಷ್ಠಾನಕ್ಕೆ ಬರಲು ವರ್ಷಾನುಗಟ್ಟಲೆ ಕಾಯಬೇಕಾಗುತ್ತಿತ್ತು. ಆದರೆ 2014ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಶ್ರಮಿಸುತ್ತಿದೆ. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಆರ್ಥಿಕ ಸುಧಾರಣೆಗಳು, ನಿಯಮಗಳು, ಮೂಲಸೌಕರ್ಯ ಯೋಜನೆಗಳು ಎನ್ಡಿಎ ಸರ್ಕಾರದ ನಾಲ್ಕೂವರೆ ವರ್ಷದಲ್ಲಿ ಕಾರ್ಯಗತಗೊಂಡಿದೆ.
ಮೋದಿ ಸರ್ಕಾರದಲ್ಲಿ ತ್ವರಿತವಾಗಿ ಅನುಷ್ಠಾನಗೊಂಡ ಕೆಲವೊಂದು ಸುಧಾರಣೆಗಳು, ಯೋಜನೆಗಳು, ನೀತಿ ನಿಯಮಗಳು ಕೆಳಗಿನಂತಿವೆ
ಒನ್ ರ್ಯಾಂಕ್ ಒನ್ ಪೆನ್ಶನ್( OROP), ಶಸ್ತ್ರಾಸ್ತ್ರ ಪಡೆಗಳಿಗಾಗಿ ಯೋಜನೆ ಇಂದಿರಾ ಗಾಂಧಿ ಕಾಲದಿಂದಲೂ ಅನುಷ್ಠಾನಕ್ಕಾಗಿ ಕಾಯುತ್ತಿತ್ತು. ನಿವೃತ್ತ ಸೇನಾಧಿಕಾರಿಗಳಿಗೆ ಅವರ ನಿವೃತ್ತಿ ದಿನಾಂಕವನ್ನು ಪರಿಗಣಿಸದೆ ಸಮಾನ ಪಿಂಚಣಿಯನ್ನು ನೀಡುವ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಇಂದಿರಾ ಗಾಂಧಿ ಸರ್ಕಾರದ ಬಳಿಕ ಬಂದ ಕಾಂಗ್ರೆಸ್ ಸರ್ಕಾರಗಳು ವಿಫಲವಾಗಿದ್ದವು. ಈ ಯೋಜನೆಯ ಅನ್ವಯ, 1999 ರಲ್ಲಿ ನಿವೃತ್ತರಾದ ಸೇನಾಧಿಕಾರಿಯೂ, 2017ರಲ್ಲಿ ನಿವೃತ್ತರಾದ ಸೇನಾಧಿಕಾರಿಯೂ ಸಮಾನ ಪಿಂಚಣಿಯನ್ನು ಪಡೆಯುತ್ತಾರೆ. ಮೋದಿ ಸರ್ಕಾರ ಈ ಯೋಜನೆಗಾಗಿ ಬಜೆಟ್ನಲ್ಲಿ 83,000 ಕೋಟಿಗಳನ್ನು ಘೋಷಣೆ ಮಾಡಿತು. ಎಲ್ಲರೂ ಇದನ್ನು ಶ್ಲಾಘಿಸಿದರು.
ಭಾರತ ಮತ್ತು ಬಾಂಗ್ಲಾದೇಶದ ತುಂಡು ಭೂಮಿಗಳು ಪರಸ್ಪರರ ಅಧೀನದಲ್ಲಿದ್ದವು. ಸ್ವಾತಂತ್ರ್ಯ ಬಂದಾಗಿನಿಂದಲೂ ಗಡಿ ಸಮಸ್ಯೆಯನ್ನು ಸರಳಗೊಳಿಸಿ ಈ ವಿವಾದವನ್ನು ನಿವಾರಿಸಲು ಉಭಯ ದೇಶಗಳು ಪ್ರಯತ್ನಿಸಿದ್ದವು. ಆದರೆ ಮೋದಿ ಸರ್ಕಾರ ಬರುವವರೆಗೂ ಇದು ಸಾಧ್ಯವಾಗಿರಲಿಲ್ಲ. 2015ರ ಮೇನಲ್ಲಿ ಮೋದಿ ಸರ್ಕಾರ ಸಂಸತ್ತಿನಲ್ಲಿ 100ನೇ ತಿದ್ದುಪಡಿಯನ್ನು ತಂದು ಸಮಸ್ಯೆ ನಿವಾರಿಸಿತು. ಇದರಡಿ ಬಾಂಗ್ಲಾದ 51 ಭೂಮಿ ಭಾರತಕ್ಕೆ, ಭಾರತದ 111 ಭೂಮಿ ಬಾಂಗ್ಲಾಗೆ ಹೋಯಿತು. ಸಮಸ್ಯೆ ನಿವಾರಣೆಯಾಯಿತು.
ವೆಸ್ಟರ್ನ್ ಪೆರಿಫಿರಲ್ ಎಕ್ಸ್ಪ್ರೆಸ್ವೇ(WPE)ಯನ್ನು ಕಳೆದ ನವೆಂಬರ್ನಲ್ಲಿ ಮೋದಿ ಉದ್ಘಾಟನೆಗೊಳಿಸಿದರು. 1984ರಲ್ಲಿ ದೆಹಲಿಯ ನಿಬಿಡತೆಯನ್ನು ಕುಗ್ಗಿಸಲು ಸುಪ್ರೀಂಕೋರ್ಟ್ ಈಸ್ಟರ್ನ್ ಮತ್ತು ವೆಸ್ಟರ್ನ್ ಪೆರಿಫಿರಲ್ ಎಕ್ಸ್ಪ್ರೆಸ್ವೇ ನಿರ್ಮಿಸುವಂತೆ ಆದೇಶಿಸಿತ್ತು. ವೆಸ್ಟರ್ನ್ ಪೆರಿಫಿರಲ್ ಎಕ್ಸ್ಪ್ರೆಸ್ವೇಯ ಕಾಮಗಾರಿಯನ್ನು 2006ರಲ್ಲಿ ಕೆಎಂಪಿಗೆ ವಹಿಸಲಾಗಿತ್ತು. 2009ರಲ್ಲಿ ಇದು ಪೂರ್ಣಗೊಳ್ಳಬೇಕಾಗಿತ್ತು. ಆದರೆ 2104ರವರೆಗೂ ಕಂಪನಿ ಕಾಮಗಾರಿ ಪೂರ್ಣಗೊಂಡಿಲ್ಲ. ಯುಪಿಎಯ ಜಡತ್ವಕ್ಕೆ ಇದು ಉತ್ತಮ ಉದಾಹರಣೆ. 2015ರಲ್ಲಿ ಸುಪ್ರೀಂಕೋರ್ಟ್ ಈ ಕಂಪನಿಯ ಗುತ್ತಿಗೆಯನ್ನು ರದ್ದುಗೊಳಿಸಿ, ಹೊಸ ಕಂಪನಿಗೆ ಕಾರ್ಯ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತು. ಮನೆಸರ್-ಪಲ್ವಾಲ್ ಸೆಕ್ಷನ್ನನ್ನು ಕೆಸಿಸಿ ಬಿಲ್ಡ್ಕಾನ್ ಪ್ರೈ ಲಿಗೆ ವಹಿಸಲಾಯಿತು. ಕಾಮಗರಿ ಕೇವಲ 500 ದಿನಗಳಲ್ಲಿ ಪೂರ್ಣಗೊಂಡಿತು. ಕುಂಡ್ಲಿ-ಮನೆಸರ್ ಸೆಕ್ಷನ್ ಕಾಮಗಾರಿಯನ್ನು ಎಸ್ಸೆಲ್ ಇನ್ ಫ್ರಾ ಪ್ರೈ.ಲಿಗೆ ವಹಿಸಲಾಯಿತು, ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡಿತು.
ತನ್ನ ನಾಲ್ಕು ವರ್ಷದ ಆಡಳಿತದಲ್ಲಿ ಮೋದಿ ಸರ್ಕಾರ ಬ್ರಹ್ಮಪುತ್ರ ನದಿಯ ಮೇಲೆ ಎರಡು ಬ್ರಿಡ್ಜ್ ಲೋಕಾರ್ಪಣೆಗೊಳಿಸಿದೆ. ಸರೈಘಾಟ್ ಬ್ರಿಡ್ಜನ್ನು 2017ರಲ್ಲಿ ನಿತಿನ್ ಗಡ್ಕರಿ ಉದ್ಘಾಟಿಸಿದ್ದಾರೆ. 2018ರಲ್ಲಿ ಧೋಲ ಸಾದಿಯಾ ಬ್ರಿಡ್ಜನ್ನು ಮೋದಿ ಉದ್ಘಾಟಿಸಿದ್ದಾರೆ. ಧೋಲ ಸಾದಿಯಾ ಬ್ರಿಡ್ಜ್ ಅಸ್ಸಾಂ ಮತ್ತು ಅರುಣಾಚಲಪ್ರದೇಶವನ್ನು ಸಂಪರ್ಕಿಸುತ್ತದೆ. 9.15 ಕಿಮೀ ಉದ್ದದ ಬ್ರಿಡ್ಜ್ ದೇಶದ ಅತೀ ಉದ್ದದ ಬ್ರಿಡ್ಜ್. ಶಸ್ತ್ರಾಸ್ತ್ರ ಪಡೆಗಳ ಮತ್ತು ನಾಗರಿಕರ ಪ್ರಯಾಣಕ್ಕೆ ಇದು ಅನುವು ಮಾಡಿಕೊಡುವುದರಿಂದ, ಚೀನಾ ಗಡಿ ಸಮೀಪದಲ್ಲಿರುವುದರಿಂದ ಕಾರ್ಯತಾಂತ್ರಿಕವಾಗಿ ಅತ್ಯಂತ ಮಹತ್ವದ ಬ್ರಿಡ್ಜ್. ಕಾಂಗ್ರೆಸ್ ಸರ್ಕಾರ ಈಶಾನ್ಯ ಭಾಗವನ್ನು ಹಲವು ವರ್ಷಗಳ ಕಾಲ ಆಳಿದರೂ ಅಲ್ಲಿನ ಸಂಪರ್ಕವನ್ನು ವೃದ್ಧಿಸುವ ಪ್ರಯತ್ನ ಮಾಡಿರಲಿಲ್ಲ.
ದಶಕಗಳ ಕಾಲ ಈಶಾನ್ಯ ರಾಜ್ಯಗಳು ಕೇಂದ್ರ ಸರ್ಕಾರದಿಂದ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದ್ದವು. ಮಿಜೋರಾಂ, ಮೇಘಾಲಯ, ಮಣಿಪುರ, ಸಿಕ್ಕಿಂ, ನಾಗಾಲ್ಯಾಂಡ್ಗಳು ರೈಲ್ವೇ ಸಂಪರ್ಕವನ್ನೂ ಹೊಂದಿರಲಿಲ್ಲ, ಕೇವಲ ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ರೈಲ್ವೇ ಸಂಪರ್ಕ ಹೊಂದಿತ್ತು. ಮೋದಿ ಸರ್ಕಾರ ಬ್ರಿಡ್ಜ್ ಕಾಮಗಾರಿಯನ್ನು ತ್ವರಿತಗೊಳಿಸಿತು, ಇತರ ಮೂಲಸೌಕರ್ಯ ಕಾಮಗಾರಿಗಳನ್ನು ತ್ವರಿತಗೊಳಿಸಿತು. ರೈಲ್ವೇ, ವಾಯುಯಾನವನ್ನೂ ಇಲ್ಲಿ ಆರಂಭಿಸಿತು.
ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್(NRC) ಅಸ್ಸಾಂನಲ್ಲಿ ಅನುಷ್ಠಾನಕ್ಕೆ ಬರಲು ರಾಜೀವ್ ಗಾಂಧಿ ಆಡಳಿತದಿಂದಲೂ ಕಾಯುತ್ತಿತ್ತು. ಗೋಗಯ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಲ್ಲಿ ಒಂದೂವರೆ ದಶಕಗಳ ಕಾಲ ಆಡಳಿತ ನಡೆಸಿತ್ತು. ಆದರೆ ಮುಸ್ಲಿಂ ವಲಸಿಗರು ಈ ಪಕ್ಷದ ವೋಟ್ ಬ್ಯಾಂಕ್ ಆಗಿದ್ದ ಕಾರಣ ಮಸೂದೆಯನ್ನು ಅನುಷ್ಠಾನಕ್ಕೆ ತರಲೇ ಇಲ್ಲ. ಅಂತಿಮವಾಗಿ, ಸೋನಾವಾಲ್ ನೇತೃತ್ವದ ಬಿಜೆಪಿ ಸರ್ಕಾರ ಎನ್ಆರ್ಸಿಯನ್ನು ಅನುಷ್ಠಾನಕ್ಕೆ ತಂದಿತು.
ಸರಕು ಮತ್ತು ಸೇವಾ ತೆರಿಗೆ(GST) ದೇಶ ದಶಕಗಳಿಂದ ಬಹುವಾಗಿ ಕಾಯುತ್ತಿದ್ದ ತೆರಿಗೆ ಸುಧಾರಣಾ ಕ್ರಮವಾಗಿತ್ತು. ಆದರೆ ಇದನ್ನು ಜಾರಿಗೆ ತಂದಿದ್ದು ಮೋದಿ ಸರ್ಕಾರ 2017ರಲ್ಲಿ. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಜಿಎಸ್ಟಿ ಅನುಷ್ಠಾನಗೊಳಿಸಲು ರಾಜ್ಯಗಳ ಮನವೊಲಿಕೆಗೆ ವಿಫಲವಾಗಿತ್ತು. ಮೋದಿ ಸರ್ಕಾರ ರಾಜ್ಯಗಳಿಗೆ 5 ವರ್ಷಗಳ ಕಾಲ ಜಿಎಸ್ಟಿ ಪರಿಹಾರ ನೀಡುವುದಾಗಿ ಭರವಸೆ ನೀಡಿತು ಮತ್ತು ಇನ್ನೂ ಮೂರು ವರ್ಷಗಳ ಕಾಲ ವಿಸ್ತರಿಸುವುದಾಗಿ ತಿಳಿಸಿತು. ಅಂತಿಮವಾಗಿ, ಮೋದಿ ಸರ್ಕಾರ ಜಿಎಸ್ಟಿಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿತು.
ಮೋದಿ ಸರ್ಕಾರ ವಿಳಂಬ ಸಂಸ್ಕೃತಿಗೆ ಪೂರ್ಣವಿರಾಮ ಹಾಕಿದೆ. ಅಧಿಕಾರಿಗಳಿಗೆ ಕಾರ್ಪೋರೇಟ್ ಮಾದರಿ ಕಾರ್ಯ ನೈತಿಕತೆಯನ್ನು ವಿಧಿಸಿದೆ. ’ಮಾಡಿ ಇಲ್ಲವೇ ಮಡಿ’ ಮಂತ್ರವನ್ನು ಅವರಿಗೆ ಪಠಿಸಿದೆ. ಬಡ್ತಿ, ವೇತನ ಹೆಚ್ಚಳವನ್ನೂ ಅವರ ಕಾರ್ಯ ದಕ್ಷತೆಯನ್ನು ನೋಡಿ ನೀಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.