ಮೊದಲಿನಿಂದಲೂ ಭಾರತೀಯ ಜನತಾ ಪಕ್ಷವೆಂದರೆ ಅಲ್ಪಸಂಖ್ಯಾತ ವಿರೋಧಿ ಎಂದು ಬಿಂಬಿಸಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರು ಸುರಕ್ಷಿತರಾಗಿರಲು ಸಾಧ್ಯವಿಲ್ಲ ಎಂದು ಭಯ ಹುಟ್ಟಿಸಲಾಗಿದೆ. ಅಲ್ಪಸಂಖ್ಯಾತರಲ್ಲಿ ನಿರಂತರವಾಗಿ ಅಂತಹದ್ದೊಂದು ಭಯ ಹುಟ್ಟಿಸುವ ಮೂಲಕವೇ ಕೆಲವು ಪಕ್ಷಗಳು ಇನ್ನೂ ಜೀವಂತವಾಗಿ ಉಳಿದಿವೆ. ಆದರೆ ವಾಸ್ತವ ಬೇರೆಯೇ ಇದೆ.
ಇತ್ತೀಚಿಗೆ RTI ಮೂಲಕ ಬಹಿರಂಗಗೊಂಡ ಅಂಕಿ ಅಂಶಗಳ ಪ್ರಕಾರ ಅಲ್ಪ ಸಂಖ್ಯಾತರ ಹಿತೈಷಿ ಎಂದೇ ಬಿಂಬಿಸಿಕೊಂಡುಬಂದಿರುವ ಕಾಂಗ್ರೆಸ್ ನೇತೃತ್ವದ ಆ 10 ವರ್ಷಗಳ ಯುಪಿಎ ಆಡಳಿತಾವಧಿಗೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರದ ಅವಧಿಯಲ್ಲೇ ಅಲ್ಪಸಂಖ್ಯಾತರು ಹೆಚ್ಚು ಸುರಕ್ಷಿತರಾಗಿದ್ದಾರೆ!
ಹೌದು. RTI ಮಾಹಿತಿಗಳ ಪ್ರಕಾರ 2004 ರಿಂದ 2017ರ ವರೆಗೆ ದೇಶದಲ್ಲಿ ಒಟ್ಟು 10399 ಕೋಮುಗಲಭೆಗಳು ಸಂಭವಿಸಿದ್ದು 30723 ಮಂದಿ ಗಾಯಗೊಂಡು 1605 ಮಂದಿ ಮೃತಪಟ್ಟಿದ್ದಾರೆ. ಆ ಪೈಕಿ ಯುಪಿಎ ಅಧಿಕಾರದಲ್ಲಿದ್ದ 2004 ರಿಂದ 2008ರ ವರೆಗಿನ ಮೊದಲ ಅವಧಿಯಲ್ಲಿ 3858 ಘಟನೆಗಳು ಸಂಭವಿಸಿದ್ದರೆ, ಯುಪಿಎ ಎರಡನೇ ಅವಧಿಯಾದ 2009 ರಿಂದ 2013ರ ವರೆಗೆ 3621 ಗಲಭೆಗಳು ಸಂಭವಿಸಿವೆ. 10 ವರ್ಷಗಳ ಯುಪಿಎ ಅವಧಿಯಲ್ಲಿ ಕೋಮುಗಲಭೆಗಳಿಂದ 1216 ಮಂದಿ ಸಾವನ್ನಪ್ಪಿದ್ದರೆ , ಮೋದಿ ಆಡಳಿತಾವಧಿಯಲ್ಲಿ 389 ಮಂದಿ ಮೃತ ಪಟ್ಟಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ದೇಶದಲ್ಲಿ ಮೋದಿ ಅವಧಿಯಲ್ಲೇ ಅಲ್ಪ ಸಂಖ್ಯಾತರು ಹೆಚ್ಚು ಸುರಕ್ಷಿತರಾಗಿದ್ದಾರೆ ಎನ್ನುವುದು ಇದೀಗ ಆಕಾಶದಲ್ಲಿರುವ ಸೂರ್ಯನಷ್ಟೇ ಸ್ಪಷ್ಟವಾಗಿ ಗೋಚರವಾಗುತ್ತಿದೆ.
ಆದರೆ ಈಗಲೂ ಕೆಲ ಸ್ವ ಘೋಷಿತ ಜಾತ್ಯತೀತ ಪಕ್ಷಗಳು ತಾವು ಮಾತ್ರ ಅಲ್ಪಸಂಖ್ಯಾತರ ರಕ್ಷಕರು ಹಾಗೂ ತಾವು ಅಧಿಕಾರದಲ್ಲಿದ್ದರೆ ಮಾತ್ರ ದೇಶದಲ್ಲಿ ಅಲ್ಪ ಸಂಖ್ಯಾತರು ಸುರಕ್ಷಿತರಾಗಿರಬಹುದು ಎಂದು ನಂಬಿಸುತ್ತಾ, ಆ ಮೂಲಕ ಅಲ್ಪಸಂಖ್ಯಾತರನ್ನು ತಮ್ಮ ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಲೇ ಇದ್ದಾರೆ. ಅಂತಹಾ ಸುಳ್ಳುಗಳನ್ನೇ ನಂಬುತ್ತಾ ಅಲ್ಪ ಸಂಖ್ಯಾತರು ಮತ್ತೆ ಮತ್ತೆ ತಮ್ಮನ್ನು ತಾವು ಅಪಾಯಕ್ಕೊಡ್ಡಿಕೊಳ್ಳುತ್ತಲೇ ಇದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.