ಕರ್ನಾಟಕ-ಮಹಾರಾಷ್ಟ್ರ ಗಡಿಯಿಂದ 6 ಕಿಲೋಮೀಟರ್ ದೂರದಲ್ಲಿ ಲಾತೂರ್ ಜಿಲ್ಲೆಯಲ್ಲಿ ಹಲ್ಗರ ಎಂಬ ಸಣ್ಣ ಹಳ್ಳಿಯಿದೆ. ಇದೇ ಹಳ್ಳಿಯನ್ನು ಯುಎಸ್ ಮೂಲದ ಎಂಜಿನಿಯರ್ ದತ್ತ ಪಾಟಿಲ್ ತನ್ನ ತವರು ಎಂದು ಕರೆಯುವುದು.
ಅವರು ಕ್ಯಾಫೋರ್ನಿಯಾದ ನಿವಾಸಿಯಾದರೂ, ಯಾಹೂ ಯುಎಸ್ಎನ ಲಕ್ಷಾಂತರ ಹಣ ಸಂಪಾದಿಸುವ ಎಂಜಿನಿಯರ್ ಆದರೂ. ಹಲ್ಗರ ಅವರ ಹೃದಯಕ್ಕೆ ತೀರಾ ಹತ್ತಿರವಾಗಿದೆ. ಯಾಕೆಂದರೆ ಅದು ಅವರ ಮೂಲ ಗ್ರಾಮ. ಇವರ ಪ್ರಯತ್ನದಿಂದಲೇ ಈ ಹಳ್ಳಿ ಬರದಿಂದ ಮೂರು ವರ್ಷಗಳ ಹಿಂದೆಯೇ ಮುಕ್ತವಾಗಿದೆ.
ದಿಟ್ಟಾ ಶಾರುಖ್ ಖಾನ್ ಅಭಿನಯದ ಸ್ವದೇಶ್ ಸಿನಿಮಾದಂತೆ, ಪಾಟಿಲ್ ಅವರು ಈ ಹಳ್ಳಿಯಲ್ಲಿ ಕಡಿಮೆ ವೆಚ್ಚದ ಗಬಿಯನ್ ಚೆಕ್ ಡ್ಯಾಂನ್ನು ನಿರ್ಮಾಣ ಮಾಡಿದ್ದಾರೆ. ಮೂರು ವರ್ಷಗಳಿಂದ ಈ ಗ್ರಾಮದ ಅಂತರ್ಜಲವನ್ನು ಮತ್ತೆ ಪುನಃಶ್ಚೇತನಗೊಳಿಸುವ ಕಾರ್ಯ ಮಾಡಿದ್ದಾರೆ. ಹಲ್ಗರವನ್ನು ಮಾದರಿ ಗ್ರಾಮದ ಭೂಪಟ್ಟಕ್ಕೆ ಸೇರಿಸಿದ್ದಾರೆ.
ಹಲ್ಗಾರದ ರೈತಾಪಿ ತಂದೆ ತಾಯಿ ಮೂರು ಮಕ್ಕಳಲ್ಲಿ ಒಬ್ಬರು ಪಾಟಿಲ್. ಇವರ ಪೋಷಕರು ತಮ್ಮ ಭೂಮಿಯಲ್ಲಿ ದುಡಿಯುವುದು ಮಾತ್ರವಲ್ಲ, ಮಕ್ಕಳನ್ನು ಸಾಕುವುದಕ್ಕಾಗಿ ಇತರರ ಹೊಲಕ್ಕೆ ಹೋಗಿಯೂ ಹಲವಾರು ಗಂಟೆಗಳ ಕಾಲ ದುಡಿಯುತ್ತಿದ್ದರು.
‘ನನ್ನ ತಾಯಿಗೆ ಸರಿಯಾಗಿ ಓದಲು ಬರೆಯಲು ಬರುತ್ತಿರಲಿಲ್ಲ ಆದರೆ ಆಕೆ ನನ್ನನ್ನು ಉತ್ತಮ ಓದುಗಾರನಾಗುವಂತೆ ಮಾಡಿದಳು. ಹೊಲದಲ್ಲಿ ದುಡಿಯಲು ಮಕ್ಕಳು ಶಾಲೆ ತಪ್ಪಿಸದಂತೆ ನೊಡಿಕೊಳ್ಳುತ್ತಿದ್ದಳು. ಸಬಲೀಕರಣಕ್ಕೆ ಶಿಕ್ಷಣವೊಂದೇ ಮಾರ್ಗ ಎಂದು ಆಕೆಗೆ ತಿಳಿದಿತ್ತು’ ಎಂದು ಪಾಟಿಲ್ ಹೇಳುತ್ತಾರೆ.
ಪಾಟಿಲ್ ಜಾಣ ವಿದ್ಯಾರ್ಥಿ. ಸರ್ಕಾರಿ ಶಾಲೆಯಲ್ಲೇ ಓದಿದರು. 12 ತರಗತಿಯಲ್ಲಿ ವಿಜ್ಞಾನ ವಿಭಾಗದಲ್ಲಿ 3ನೇ ರ್ಯಾಂಕ್ ಬಂದಿದ್ದರು. ಬಳಿಕ ಎನ್ಐಟಿ ಸುರತ್ಕಲ್ನಲ್ಲಿ ಎಂಜಿನಿಯರಿಂಗ್ ಪೂರೈಸಿದರು. ಬಳಿಕ ಎಂಜಿನಿಯರ್ ಆಗಿ ಅಮೆರಿಕಾ ಸೇರಿದರು. ಈ ಯಾಹೂ ಸಂಸ್ಥೆಯಲ್ಲಿ ದುಡಿಯುತ್ತಿದ್ದಾರೆ. ಆದರೆ ತನ್ನ ಬೇರನ್ನು ಮರೆಯದ ಅವರು, ತನ್ನ ಹುಟ್ಟೂರು ಹಲ್ಗಾರವನ್ನು ಬರ ಮುಕ್ತಗೊಳಿಸಿದ್ದಾರೆ.
2016ರಲ್ಲಿ ಹುಟ್ಟೂರಿಗೆ ಬಂದ ಅವರಿಗೆ ಲಾತೂರ್ ಜಿಲ್ಲೆ ಸಂಪೂರ್ಣ ಬರದಿಂದ ತತ್ತರಿಸಿ ಹೋಗಿತ್ತು. ಜನರು ನೀರಿಗಾಗಿ ಪರದಾಡುತ್ತಿದ್ದರು. ಇದಕ್ಕೆ ಕಾರಣ ಏನು, ತಾನಿರುವ ಅಮೆರಿಕಾದ ಪ್ರದೇಶಕ್ಕಿಂತಲೂ ಇಲ್ಲಿ ಹೆಚ್ಚು ಮಳೆ ಬಂದಿದೆ ಆದರೂ ಜನರು ನೀರಿಗಾಗಿ ಪರದಾಡುತ್ತಿದ್ದಾರೆ ಯಾಕೆ ಎಂಬ ಬಗ್ಗೆ ಅವರು ಆಳವಾದ ಅಧ್ಯಯನ ನಡೆಸಿದರು. ಅಂತರ್ಜಲ ಬರಿದಾದುದು ಅವರ ಗಮನಕ್ಕೆ ಬಂದಿತ್ತು.
ಹಲ್ಗರದ ಬಗ್ಗೆ ಪ್ರಾಜೆಕ್ಟ್ ತಯಾರಿಸಿ ಅದನ್ನು ಯಾಹೂ ಯುಎಸ್ಗೂ ನೀಡಿದರು. ನದಿಯ ನೀರುಗಳು ಉಪಯೋಗಕ್ಕೆ ಬರುವ ಬದಲು ನದಿಗೆ ಸೇರುತ್ತಿವೆ ಎಂಬ ಸತ್ಯ ಅವರಿಗೆ ಅರಿವಾಗಿತ್ತು. ತನ್ನ ಸ್ನೇಹಿತರು, ಕುಟುಂಬದವರ ತಂಡವನ್ನು ಕಟ್ಟಿಕೊಂಡು ಇವರು ಡ್ಯಾಂ ರಚನೆ ಮಾಡಿದರು. ನದಿಯ ನೀರನ್ನು ಇಲ್ಲಿ ಸಂಗ್ರಹಿಸಿದರು. 20 ಕಿಮೀ ಉದ್ದದ ಡಿಸಿಲ್ಟಿಂಗ್ ಕ್ಯಾನಲ್ಗಳನ್ನು ನಿರ್ಮಾಣ ಮಾಡಿದರು. ಇದರಿಂದ ಅಂತರ್ಜಲ ವೃದ್ಧಿಯಾಯಿತು ನೀರಿನ ಕೊರತೆ ನೀಗಿತು.
ಗ್ರಾಮಕ್ಕೆ ಬೀಳುವ ಪ್ರತಿ ಮಳೆ ಹನಿಯನ್ನೂ ಸಂರಕ್ಷಣೆ ಮಾಡಬೇಕು ಎಂಬ ಸರಳ ಯೋಜನೆ ಇವರದ್ದಾಗಿದೆ. ಅದಕ್ಕಾಗಿ ಅವರು ಕೈಗೊಂಡ ಹತ್ತು ಹಲವು ಯೋಜನೆ ಇದು ಹಲ್ಗಾರದ ಇಡೀ ಚಿತ್ರಣವನ್ನೇ ಬದಲಾಯಿಸಿದೆ. ಇಂದು ಈ ಗ್ರಾಮದ 200 ಕೋಟಿ ಲೀಟರ್ ಸಂರಕ್ಷಣೆಯಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.