News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 27th November 2024


×
Home About Us Advertise With s Contact Us

ಸಿಬಿಐಯನ್ನು ಬಳಸಿ ನಾಲ್ವರು ಅಧಿಕಾರಿಗಳನ್ನು ಪೀಡಿಸಿದ್ದ ಇಂದಿರಾಗಾಂಧಿ

ತನ್ನ ಅಧಿಕಾರಾವಧಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಸಿಬಿಐಯನ್ನು ಯಾವ ರೀತಿ ದುರ್ಬಳಕೆ ಮಾಡಿಕೊಂಡರು ಎಂಬುದು ಷಾ ಕಮಿಷನ್ ವರದಿಯಿಂದ ತಿಳಿದು ಬರುತ್ತದೆ. ತುರ್ತು ಪರಿಸ್ಥಿತಿಯಲ್ಲಿ ನಡೆದ ದುರಾಡಳಿತದ ಬಗ್ಗೆ ತನಿಖೆ ನಡೆಸಲು ರಚನೆ ಮಾಡಿದ ಷಾ ಕಮಿಷನ್ ವರದಿಯ ಪುಟಗಳನ್ನು ನೋಡಿದರೆ, ಸಿಬಿಐಯನ್ನು ಬಳಸಿಕೊಂಡು ಇಂದಿರಾ ಗಾಂಧಿ ಅವರು ಸರ್ಕಾರದ ನಾಲ್ವರು ಹಿರಿಯ ಅಧಿಕಾರಿಗಳಿಗೆ ಯಾವ ರೀತಿ ಕಿರುಕುಳ ನೀಡಿದರು, ಅವಮಾನಿಸಿದರು ಎಂಬುದು ಸಾಬೀತಾಗುತ್ತದೆ.

1975ರಲ್ಲಿ ಸಂಸತ್ತ್ ಸದಸ್ಯ ಜ್ಯೋತಿರ್ಮಯ್ ಬಸು ಅವರು, ಮಾರುತಿ ಸಂಸ್ಥೆಗೆ ಬಿಡಿಭಾಗಗಳನ್ನು ಆಮದು ಮಾಡಿಕೊಂಡದ್ದಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ್ದರು. ಇವರು ಕೇಳಿ ಪ್ರಶ್ನೆಗೆ ಉತ್ತರ ನೀಡಲು, ನಾಲ್ವರು ಸರ್ಕಾರಿ ಅಧಿಕಾರಿಗಳಾದ ಕೃಷ್ಣ ಸ್ವಾಮಿ( ಬೃಹತ್ ಕೈಗಾರಿಕೆ ಉಪ ಕಾರ್ಯದರ್ಶಿ), ಎ.ಎಸ್ ರಾಜನ್ (ಡಿಜಿಟಿಡಿ ಡೆವಲಪ್‌ಮೆಂಟ್ ಆಫೀಸರ್), ಎಲ್.ಆರ್ ಕವೆಲೆ( ಪಿಇಸಿ, ಮುಖ್ಯ ಮಾರ್ಕೆಟಿಂಗ್ ಮ್ಯಾನೇಜರ್), ಪಿ.ಎಸ್ ಭಟ್ನಾಗರ್( ಪಿಇಸಿ ಡೆಪ್ಯೂಟಿ ಮಾರ್ಕೆಟಿಂಗ್ ಮ್ಯಾನೇಜರ್) ಅವರು ಮಾಹಿತಿಯನ್ನು ಒಟ್ಟುಗೂಡಿಸುತ್ತಿದ್ದರು.

1975ರ ಎಪ್ರಿಲ್ 9 ಮತ್ತು 14ರ ಮಧ್ಯದಲ್ಲಿ ಕೃಷ್ಣ ಸ್ವಾಮಿ, ರಾಜನ್ ಮತ್ತು ಭಟ್ನಾಗರ್ ಅವರು, ಮಾರುತಿ, ಬಾಟ್ಲಿಬೋಯ್ ಮತ್ತು ಕಂಪನಿಯನ್ನು ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆಗಾಗಿ ಸಂಪರ್ಕಿಸಿದರು. ಮಾರುತಿ ಇವರು ಕೇಳಿದ ಮಾಹಿತಿಯನ್ನು ಒದಗಿಸಲಿಲ್ಲ. ಆದರೆ ಈ ಅಧಿಕಾರಿಗಳು ಸಾಕ್ಷಿ ಸಂಗ್ರಹಿಸುವ ನೆಪದಲ್ಲಿ ಅಧಿಕಾರದ ದರ್ಪ, ಕಿರುಕುಳ ನೀಡಿದರು ಎಂಬ ಸುಳ್ಳು ಸುದ್ದಿಯನ್ನು ಹರಡಿಸಿತು. ಆದರೆ ಅಧಿಕಾರಿಗಳು ಯಾವ ತಪ್ಪನ್ನೂ ಮಾಡಿರಲಿಲ್ಲ.

1975ರ ಎಪ್ರಿಲ್ 14ರಂದು, ಬೃಹತ್ ಕೈಗಾರಿಕ ಸಚಿವ ಟಿ.ಎ ಪೈ ಅವರು, ಪ್ರಧಾನಿ ಇಂದಿರಾ ಗಾಂಧಿ ಅವರ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಆರ್.ಕೆ ಧವನ್ ಅವರನ್ನು ಭೇಟಿಯಾದರು ಮತ್ತು ಬಾಟ್ಲಿಬೋಯ್‌ನಿಂದ ಮಾಹಿತಿ ಸಂಗ್ರಹಿಸುತ್ತಿರುವ ಅಧಿಕಾರಿಗಳ ವಿರುದ್ಧ ದೂರು ನೀಡಿದರು. ಬಳಿಕ ಧವನ್ ಅವರು, ರಾಜನ್ ಮತ್ತು ಭಟ್ನಗರ್ ಅವರನ್ನು ಕರೆಯಿಸಿ, ಈ ವಿಷಯದ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯ ನಿಲ್ಲಿಸುವಂತೆ ಸೂಚಿಸಿದರು. ವಾಣಿಜ್ಯ ಸಚಿವರ ವಿಶೇಷ ಅಸಿಸ್ಟೆಂಟ್ ಎನ್.ಕೆ ಸಿಂಗ್ ಅವರೂ ಅಧಿಕಾರಿ ಕವಲೆ ಅವರನ್ನು ಕರೆಯಿಸಿ, ಮಾರುತಿಗೆ ಬಿಡಿಭಾಗ ಖರೀದಿಸಿದ ಪ್ರಶ್ನೆ ಹುಟ್ಟಲು ಕಾರಣಗಳ ಬಗ್ಗೆ ತಿಳಿಯಲು ಸೂಚಿಸಿದರು.

ಬಳಿಕ ಪೈ ಅವರಿಗೆ ತಮ್ಮ ನಿವಾಸಕ್ಕೆ ಆಗಮಿಸುವಂತೆ ಇಂದಿರಾ ಗಾಂಧಿ ಸಮನ್ಸ್ ನೀಡಿದರು. ಪೈ ಪ್ರಕಾರ, ಆಕೆ ತೀವ್ರ ಬೇಸರ ಮತ್ತು ಕೋಪದಲ್ಲಿದ್ದರು. ಬಾಟ್ಲಿಬೋಯ್ ಆಡಳಿತ ಮಂಡಳಿಗೆ ಪೈ ಅವರ ಸಚಿವಾಲಯದಿಂದ ಕಿರುಕುಳ ಆಗಿದೆ ಎಂದು ಆಕೆ ಆರೋಪಿಸಿದರು. ಬಳಿಕ ಆಕೆ, ಧವನ್ ಅವರಿಗೆ ಸಿಬಿಐ ನಿರ್ದೇಶಕ ಡಿ.ಸೇನ್ ಅವರನ್ನು ಭೇಟಿಯಾಗುವಂತೆ ಸೂಚಿಸಿದರು ಮತ್ತು ಈ ಅಧಿಕಾರಿಗಳ ವರ್ತನೆಯ ಬಗ್ಗೆ ತನಿಖೆ ನಡೆಸುವಂತೆ ನಿರ್ದೇಶಿಸಲು ಸೂಚಿಸಿದರು. ಕೆಲವರಿಗೆ ಭಟ್ನಾಗರ್ ಕಿರುಕುಳ ನೀಡಿದ ಬಗ್ಗೆ ತನಿಖೆ ನಡೆಸುವಂತೆ ವಾಣಿಜ್ಯ ಸಚಿವ ಡಿ.ಪಿ ಚಟ್ಟೋಪಧ್ಯಾಯ ಅವರಿಗೂ ಸೂಚಿಸಿದರು.

ಚಟ್ಟೋಪಾಧ್ಯಾಯ ಅವರು ಭಟ್ನಾಗರ್ ಅವರ ವಿರುದ್ಧ ಶಿಸ್ತುಕ್ರಮ ಜರಗಿಸಲು ಆದೇಶಿಸಿದರು. ಎಪ್ರಿಲ್ ೧೫ರಂದು ಭಟ್ನಗರ್ ಅವರನ್ನು ವಜಾಗೊಳಿಸಲಾಗಿತ್ತು. ಆದರೆ ಅವರಿಗೆ ಆ ಬಗ್ಗೆ ರಾತ್ರಿ 10 ಗಂಟೆಗೆ ತಿಳಿಸಲಾಗಿತ್ತು. ಇಂದಿರಾ ಗಾಂಧಿ ಮಾತನ್ನು ಅಕ್ಷರಶಃ ಪಾಲಿಸಲು, ಆಕೆಗೆ ವಿಷಯದ ಬಗ್ಗೆ ಸಂಪೂರ್ಣ ತಿಳಿದಿದೆ ಎಂದು ಅಮದುಕೊಂಡು, ತನಗೆ ಸಿಕ್ಕ ಮಾಹಿತಿಯನ್ನೂ ಲೆಕ್ಕಿಸದೆ ಶಿಸ್ತುಕ್ರಮ ಜರುಗಿಸಿದ್ದಾಗಿ ಬಳಿಕ ಚಟ್ಟೋಪಧ್ಯಾಯ ಷಾ ಕಮಿಷನ್ ಮುಂದೆ ಹೇಳಿಕೊಂಡಿದ್ದರು.

ಇನ್ನೊಂದೆಡೆ ಪೈ ಅವರು, ಅಧಿಕಾರಿಗಳನ್ನು ಮನೆಗೆ ಕರೆಯಿಸಿಕೊಂಡು, ಅವರೊಂದಿಗೆ ಚರ್ಚೆ ನಡೆಸಿದರು. ಬಾಟ್ಲಿಬೋಯ್ ಆಡಳಿತದೊಂದಿಗೂ ಮಾತುಕತೆ ನಡೆಸಿದರು, ಉಭಯ ಪಕ್ಷಗಳ ನಡುವೆ ಮಾತುಕತೆ ನಡೆಸಿದ ಅವರಿಗೆ, ಅಧಿಕಾರಿಗಳ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ ಎಂಬುದು ಮನವರಿಕೆಯಾಗಿತ್ತು.

ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಮೂಲಕ ಪ್ರಧಾನ ಮಂತ್ರಿಯ ಸೂಚನೆಗಳನ್ನು ಪಡೆದ ಸಿಬಿಐನ ನಿರ್ದೇಶಕ ಸೇನ್ ಅವರು, ಏಪ್ರಿಲ್ 15 ರಂದು ಇಂಟಲಿಜೆನ್ಸ್ ಸೆಲ್‌ನ ಡೆಪ್ಯುಟಿ ಡೈರೆಕ್ಟರ್ ರಾಜ್‌ಪಾಲ್‌ರನ್ನು ಸಂಪರ್ಕಿಸಿ, ಕೃಷ್ಣಸ್ವಾಮಿ, ರಾಜನ್ ಮತ್ತು ಭಟ್ನಾಗರ್ ವಿರುದ್ಧದ ಮಾಹಿತಿಯನ್ನು ಪರಿಶೀಲಿಸುವಂತೆ ಸೂಚಿಸಿದರು. ಈ ಅಧಿಕಾರಿಗಳು ಭ್ರಷ್ಟರಾಗಿದ್ದಾರೆ ಮತ್ತು ಅವರ ಆದಾಯಕ್ಕೆ ಮೀರಿದ ಆಸ್ತಿಯನ್ನು ಸಂಗ್ರಹಿಸಿದ್ದಾರೆ ಎಂದು ಸೇನ್ ರಾಜ್‌ಪಾಲ್ ಅವರಿಗೆ ಹೇಳಿದ್ದರು. ಅಲ್ಲದೇ, ಐದು ದಿನಗಳೊಳಗೆ ತಮ್ಮ ವರದಿಯನ್ನು ಸಲ್ಲಿಕೆ ಮಾಡುವಂತೆ ಅವರಿಗೆ ಸೂಚನೆ ನೀಡಿದರು. ಹೀಗಾಗಿ ರಾಜ್‌ಪಾಲ್ ತನ್ನ ಅಧೀನದಲ್ಲಿ ಅಧಿಕಾರಿಗಳಿಗೆ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಕಣ್ಗಾವಲು ಪ್ರಾರಂಭಿಸಲು ಆದೇಶಿಸಿದರು. ಏಪ್ರಿಲ್ 17 ರಂದು ಭ್ರಷ್ಟಾಚಾರ ತಡೆ ಕಾಯಿದೆಯಡ್ಲಿ ಭಟ್ನಾಗರ್ ಮತ್ತು ರಾಜನ್ ವಿರುದ್ಧ ಪ್ರಕರಣಗಳನ್ನು ಔಪಚಾರಿಕವಾಗಿ ನೋಂದಣಿ ಮಾಡಲಾಯಿತು. ಒಂದು ದಿನದ ನಂತರ, ಸಿಬಿಐ ಅಧಿಕಾರಿಗಳು ಇವರು ಮನೆಗಳಿಗೆ ದಾಳಿ ನಡೆಸಿದರು.

ಕವೆಲೆ ಅವರನ್ನು ದೆಹಲಿಯಿಂದ ಚೆನೈ ವರ್ಗಾಯಿಸಲಾಯಿತು. ಅವರು ಅವಮಾನದಿಂದ ನೋವು ಅನುಭವಿಸಬಾರದು ಎಂದು ನಿರ್ಧರಿಸಿದ್ದರು ಎಂದೆನಿಸುತ್ತದೆ. ಬ್ಯೂರೋ ಆಫ್ ಪಬ್ಲಿಕ್ ಎಂಟರ್ಪ್ರೈಸಸ್‌ನ ಪ್ರಧಾನ ನಿರ್ದೇಶಕ ಪಿ.ಜೆ.ಫರ್ನಾಂಡಿಸ್ ಈ ವಿಷಯವನ್ನು ಎಸ್‌ಟಿಸಿ ಅಧ್ಯಕ್ಷರೊಂದಿಗೆ ಚರ್ಚಿಸಿದರು. ಆದರೆ ಅಧ್ಯಕ್ಷರು ನಾನು ಅಸಹಾಯಕ, ಕೇವಲ ಮೇಲಧಿಕಾರಿಗಳ ಸೂಚನೆಗಳನ್ನು ಅನುಸರಿಸುತ್ತಿದ್ದೇನೆ ಎಂದರು. ಮತ್ತಷ್ಟು ತೊಡಕುಗಳನ್ನು ಮತ್ತು ಸಂಭವನೀಯ ಕಿರುಕುಳನ್ನು ತಪ್ಪಿಸಲು ವರ್ಗಾವಣೆಯ ಕ್ರಮವನ್ನು ಸ್ವೀಕರಿಸುವಂತೆ ಅಧ್ಯಕ್ಷರು ಕವೆಲೆ ಅವರಿಗೆ ಸಲಹೆಯನ್ನು ನೀಡಿದರು. ಎಪ್ರಿಲ್ 21 ರಂದು, ಸಿಬಿಐ ಇವರ ಪರಿಶೀಲನೆ ಆರಂಭಿಸಿತು ಮತ್ತು ಅವರನ್ನು ಕಣ್ಗಾವಲಿನಲ್ಲಿ ಇಡಲಾಯಿತು. ಆದರೆ ಇವರ ವಿರುದ್ಧದ ವಿಚಾರಣೆ ಏನನ್ನೂ ಬಹಿರಂಗಪಡಿಸದಿದ್ದರೂ, ಆರು ದಿನಗಳ ನಂತರ, ಸಿಬಿಐನ ನಿರ್ದೇಶಕರು ಇವರ ವಿರುದ್ಧ ಪ್ರಾಥಮಿಕ ತನಿಖೆಯನ್ನು ದಾಖಲಿಸುವಂತೆ ಆದೇಶಿಸಿದರು.

ಪೊಲೀಸ್ ವರಿಷ್ಠಾಧಿಕಾರಿ ಕೆ. ವಿಜಯನ್ ಅವರ ಪ್ರಕಾರ, ಜಂಟಿ ನಿರ್ದೇಶಕ ಎ.ಬಿ. ಚೌವೇರಿ ಅವರು ಕವೆಲ್ ಮನೆಯಲ್ಲಿ ಹುಡುಕಾಟ ನಡೆಸುವಂತೆ ಸೂಚಿಸುವಂತೆ ಟಿಪ್ಪಣಿ ಬರೆಯಲು ಅವರ ಮೇಲೆ ಒತ್ತಡ ಹಾಕಿದ್ದರು. ಹೀಗಾಗಿ ವಿಜಯನ್ ಅವರು, ಟಿಪ್ಪಣಿಯನ್ನು ದಾಖಲಿಸಿದರು ಮತ್ತು ಈ ಟಿಪ್ಪಣಿಯ ಆಧಾರದ ಮೇಲೆ, ಕವೆಲೆ ಅವರ ನಿವಾಸವನ್ನು ಮೇ 3 ರಂದು ಹುಡುಕಾಡಲಾಯಿತು ಮತ್ತು ಭ್ರಷ್ಟಾಚಾರ ತಡೆಗಟ್ಟುವಿಕೆ ಕಾಯಿದೆಯಡಿ ತನಿಖೆ ನಡೆಸುವಂತೆ ಅವರ ವಿರುದ್ಧ ಪ್ರಕರಣ ವನ್ನು ದಾಖಲಿಸಲಾಯಿತು. ಅಂತಿಮವಾಗಿ, ಅವರ ರಾಜೀನಾಮೆಯನ್ನು ಕೇಳಲಾಯಿತು, ಇದರಿಂದ ಕವೆಲ್ ಅವರು ಒತ್ತಡದಲ್ಲಿ ತುತ್ತಾದರು ಮತ್ತು ರಾಜೀನಾಮೆಯನ್ನು ನೀಡಿದರು.

ಅದೇ ರೀತಿಯ ವಿಧಿ ಕೃಷ್ಣಸ್ವಾಮಿಯರನ್ನೂ ಕಾಯುತ್ತಿದ್ದವು. ಇವರ ಪ್ರಕರಣದಲ್ಲಿ, ಇವರ ಹೆಂಡತಿ ಮತ್ತು ಹೆತ್ತವರನ್ನೂ ಪ್ರಕರಣಕ್ಕೆ ಎಳೆದು ತರಲಾಯಿತು.. ಸಾಕಷ್ಟು ಪುರಾವೆಗಳಿಲ್ಲದಿದ್ದರೂ, ಸೇನ್ ಅವರು ಏಪ್ರಿಲ್ 27 ರಂದು ಅವರ ವಿರುದ್ಧ ಪ್ರಾಥಮಿಕ ತನಿಖೆಯನ್ನು ದಾಖಲಿಸಿದರು. ಮೇ 3 ರಂದು, ಅವರ ನಿವಾಸವನ್ನು ಹುಡುಕಾಡಲಾಯಿತು. ಕೃಷ್ಣಸ್ವಾಮಿಗೆ ಉತ್ತಮ ಘನತೆ ಹೊಂದಿದ್ದಾರೆ, ಉತ್ತಮ ಕುಟುಂಬದಿಂದ ಬಂದಿದ್ದಾರೆ ಎಂದು ಇಂಟಲಿಜೆನ್ಸ್‌ನ ಉಪ ನಿರ್ದೇಶಕ ರಾಜ್‌ಪಾಲ್ ಅವರು ಸೇನ್‌ಗೆ ಪದೇ ಪದೇ ತಿಳಿಸಿದರೂ, ಮಾತು ಕೇಳಲಿಲ್ಲ. ಕೃಷ್ಣಸ್ವಾಮಿ ಅವರಿಗೆ ಅಂತಿಮವಾಗಿ ಅರ್ಧ ವೇತನದ 4 ತಿಂಗಳ ರಜೆ ನೀಡಲಾಯಿತು. ಬಳಿಕ ಅಂತಿಮವಾಗಿ ರೈಲ್ವೇಸ್‌ಗೆ ವರ್ಗಾವಣೆ ಮಾಡಲಾಯಿತು.

ಅಷ್ಟೇ ಅಲ್ಲದೇ, ಅನುಮತಿ ಮಿತಿಯನ್ನು ಮೀರಿ ಮದ್ಯ ಸಂಗ್ರಹಿಸಿದ ಆರೋಪದ ಮೇರೆಗೆ ಎಕ್ಸೈಸ್ ಆಕ್ಟ್ ಅಡಿಯಲ್ಲಿ ಸಿಬಿಐ ಆದೇಶದ ಮೇರೆಗೆ ದೆಹಲಿ ಪೊಲೀಸರು ಅವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿದರು. ಆದರೆ ಅಂತಿಮವಾಗಿ, ವಿಚಾರಣಾಧೀನ ನ್ಯಾಯಾಲಯ, ಅವರು ಯಾವುದೇ ಉಲ್ಲಂಘ ಮಾಡಿದ ಸಾಕ್ಷಿಯಿಲ್ಲ ಎಂದಿತ್ತು ಮತ್ತು ಅವರನ್ನು ಮಾರ್ಚ್ 4, 1977 ರಂದು ಖುಲಾಸೆಗೊಳಿಸಿತು.

ಷಾ ಕಮಿಷನ್ ತೀರ್ಮಾನಗಳು

ಆಯೋಗವು ಕೆಲವು ಬಹಳ ಮಹತ್ವದ ತೀರ್ಮಾನಕ್ಕೆ ಬಂದಿತ್ತು. ಬ್ಯಾಟ್ಲಿಬಾಯ್ ಸಂಸ್ಥೆಗೆ ಅಧಿಕಾರಿಗಳು ಯಾವುದೇ ಕಿರುಕುಳ ನೀಡಲಿಲ್ಲ ಎಂದು ತೀರ್ಮಾನಕ್ಕೆ ಬಂದಿತು. ಅಧಿಕಾರಿಗಳು ಅವಮಾನಿಸಿದ್ದಾರೆ ಎಂಬ ಆರೋಪವನ್ನು ಸಂಸ್ಥೆಯ ಇಬ್ಬರು ಪ್ರತಿನಿಧಿಗಳು ನಿರಾಕರಿಸಿದ್ದಾರೆ ಮತ್ತು ಇದರ ಬಗ್ಗೆ ಯಾರಿಗೂ ಅವರು ದೂರು ನೀಡಿರಲಿಲ್ಲ ಎಂದು ಪ್ರತಿಪಾದಿಸಿದ್ದರು.

ಇಂದಿರಾ ಗಾಂಧಿಯವರು ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರಿಗಳ ನಿಂದನೆಯನ್ನು ಮಾಡಿದ್ದಾರೆ ಎಂದು ಕಮಿಷನ್ ತೀರ್ಮಾನಕ್ಕೆ ಬಂದಿದೆ. ಅಲ್ಲದೇ, ಆಕೆ ಅಧಿಕಾರಿಗಳಿಗೆ ಕಿರುಕುಳ ನೀಡುವಂತೆ ಸಿಬಿಐನ ನಿರ್ದೇಶಕರಿಗೆ ಒತ್ತಡವನ್ನು ಹಾಕಿದ್ದಾರೆ ಎಂದಿದೆ.

ಅಧಿಕಾರಿಗಳು ಮತ್ತು ಅವರ ವಿರುದ್ಧ ಅವಮಾನಕಾರಿ ಸುಳ್ಳು ಪ್ರಕರಣಗಳನ್ನು ಸಲ್ಲಿಸಲು ಇಂದಿರಾ ಗಾಂಧಿಯವರು ನೇರವಾಗಿ ಜವಾಬ್ದಾರಿ ಎಂದು ಕಮಿಷನ್ ಹೇಳಿದೆ. ಈ ಅಧಿಕಾರಿಗಳು ಸಂಗ್ರಹಿಸಿದ ಮಾಹಿತಿಯು ಮಾರುತಿ ಸಂಸ್ಥೆಗೆ ಹಾನಿಕಾರಕವಾಗಬಹುದು ಎಂದುಕೊಂಡು ಆಕೆ ಈ ರೀತಿ ಮಾಡಿದರು ಎಂದು ವರದಿ ಹೇಳಿದೆ. ’ಕೇವಲ ಅವರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಜವಾಬ್ದಾರರಾಗಿದ್ದರು, ಇದು ಮಾರುತಿ ಲಿಮಿಟೆಡ್ ಹಿತಾಸಕ್ತಿಗಳಿಗೆ ಪೂರ್ವಭಾವಿಯಾಗಿತ್ತು, ಇಂದಿರಾ ಗಾಂಧಿ ಮಗ ಸಂಜಯ್ ಗಾಂಧಿ, ಅವರ ಮಗನಿಗೆ ಬಹಳ ಆಸಕ್ತಿಯಿತ್ತು’ ಎಂದು ವರದಿ ಹೇಳಿದೆ.

“ಈ ಅಧಿಕಾರಿಗಳ ವಿರುದ್ಧ ಪ್ರಧಾನಿಗಳ ಒತ್ತಡದ ಮೇರೆಗೆ ಸಂಸತ್ ಸದಸ್ಯರು ಸಿಬಿಐ ನಿರ್ದೇಶಕ ಧವನ್ ಅವರಿಗೆ ನೀಡಿದ ಅಸ್ಪಷ್ಟ ದೂರುಗಳ ಹೊರತಾಗಿ ಬೇರೆ ಏನೂ ಇಲ್ಲ. ಸಿಬಿಐ ಈ ಅಧಿಕಾರಿಗಳನ್ನು ಸಾಮಾಜಿಕವಾಗಿ, ದೈಹಿಕವಾಗಿ ಮತ್ತು ನೈತಿಕವಾಗಿ ನಾಶಪಡಿಸಿದೆ” ಎಂದು ಷಾ ಕಮಿಷನ್ ವರದಿಯನ್ನು ಮುಕ್ತಾಯಮಾಡಿದೆ.

ವರ್ತನೆಯ ವಿಧಾನ

ಬಹಿರಂಗಗೊಂಡ ಈ ಪ್ರಕರಣದಿಂದ, ಗಾಂಧೀ ಕುಟುಂಬ ತಮ್ಮದೇ ಆದ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಪ್ರಾಮಾಣಿಕ ಅಧಿಕಾರಿಗಳು ಮತ್ತು ಅವರ ಸಮಗ್ರತೆಯ ಜೀವನವನ್ನು ನಾಶಮಾಡಿ, ದೇಶದ ಪ್ರತಿಯೊಂದು ಆಡಳಿತ ಯಂತ್ರವನ್ನೂ ಆಟಿಕೆ ಮಾಡಿದೆ ಎಂದು ಸ್ಪಷ್ಟವಾಗುತ್ತದೆ. ಗಾಂಧಿ ಪರಿವಾರದ ಕುಡಿ ರಾಹುಲ್ ಗಾಂಧಿಯವರು, ಈಗ ಎನ್‌ಡಿಎ ಸರಕಾರ ಸರ್ಕಾರಿ ಏಜೆನ್ಸಿಗಳನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸುತ್ತಿರುವುದು ವ್ಯಂಗ್ಯವಾಗಿ ಕಾಣುತ್ತದೆ. ರಾಹುಲ್ ಗಾಂಧಿ ಅವರು ತಮ್ಮ ಕುಟುಂಬದ ಇತಿಹಾಸದ ಬಗ್ಗೆ ತಿಳಿದಿದ್ದಾರೆ ಮತ್ತು ಆದ್ದರಿಂದಲೇ ತನ್ನ ಕುಟುಂಬವು ನಡೆದುಕೊಂಡ ವಿಧಾನದಲ್ಲೇ ಅಧಿಕಾರದಲ್ಲಿರುವ ಜನರು ನಡೆದುಕೊಳ್ಳುತ್ತಾರೆ ಎಂದು ಸ್ವಾಭಾವಿಕವಾಗಿ ಊಹಿಸಿದ್ದಾರೆ ಎಂದೆನಿಸುತ್ತದೆ.

ಇಂದಿರಾ ಗಾಂಧಿಯವರ ಆಳ್ವಿಕೆಯಲ್ಲಿನ ಭ್ರಷ್ಟಾಚಾರಗಳು ಅಮೆರಿಕಾ ದೂತಾವಾಸ ಮತ್ತು ಇತರ ಜಾಗತಿಕ ಸಂಸ್ಥೆಗಳನ್ನೂ ಆಘಾತಕ್ಕೊಳಗಾಗುವಂತೆ ಮಾಡಿದೆ. ಆಕೆಯ ಆಡಳಿತದಲ್ಲಿ ಭ್ರಷ್ಟಾಚಾರ ಎಗ್ಗಿಲ್ಲದೆ ನಡೆದಿತ್ತು, ಯಾವುದೇ ಪ್ರಮುಖ ವ್ಯಕ್ತಿಯ ವಿರುದ್ಧ ಆಕೆಯ ಅನುಮತಿಯಿಲ್ಲದೆ ಕ್ರಮ ಜರಗಿಸಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಆಕೆ ತನ್ನ ರಾಜಕೀಯ ಎದುರಾಳಿಗಳ ವಿರುದ್ಧ ಕಠಿಣವಾಗಿ ನಡೆದುಕೊಳ್ಳುತ್ತಿದ್ದರು, ಅದೇ ತನ್ನ ಆಪ್ತರನ್ನು ಭ್ರಷ್ಟಾಚಾರ ಪ್ರಕರಣಗಳಿಂದಲೂ ರಕ್ಷಣೆ ಮಾಡುತ್ತಿದ್ದರು, ಲಂಚದ ಮೂಲಕ ಗಳಿಸಿದ ಹಣವನ್ನು ಪಕ್ಷದ ನಿಧಿಯಲ್ಲಿ ಸಂಗ್ರಹಿಸುತ್ತಿದ್ದರು ಎಂದು ವಿಕಿಲೀಕ್ಸ್ ಕೇಬಲ್ ಬಹಿರಂಗಪಡಿಸಿದೆ.

ಇಂದಿರಾ ಗಾಂಧಿಯವರ ಯುಗವು ನಿಜಕ್ಕೂ ಅಂಧಕಾರದಲ್ಲಿತ್ತು ಮತ್ತು ತುರ್ತು ಪರಿಸ್ಥಿತಿಯಷ್ಟೇ, ಭ್ರಷ್ಟಾಚಾರವೂ ಈ ಅಂಧಕಾರಕ್ಕೆ ಕೊಡುಗೆ ನೀಡಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top