ಇಂದಿನ ಮಕ್ಕಳು ಎದುರಿಸುವ ಅತೀದೊಡ್ಡ ಸವಾಲು ಎಂದರೆ ಪುಸ್ತಕಗಳನ್ನು ತುಂಬಿದ್ದ ಭಾರೀ ಗಾತ್ರದ ಬ್ಯಾಗ್ನ್ನು ಹೊತ್ತುಕೊಂಡು ಶಾಲೆಗೆ ಹೋಗುವುದು. ಸರ್ಕಾರ ಶಾಲಾ ಮಕ್ಕಳ ಬ್ಯಾಗ್ ಇಂತಿಷ್ಟೇ ಭಾರ ಇರಬೇಕು ಎಂದು ನಿಗದಿಪಡಿಸಿದ್ದರೂ, ಮಕ್ಕಳಿಗೆ ಮಾತ್ರ ಭಾರ ಹೊರುವ ಶಿಕ್ಷ ಇನ್ನೂ ಕಮ್ಮಿಯಾಗಲಿಲ್ಲ. ಇದರಿಂದ ಮಕ್ಕಳ ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಮಕ್ಕಳ ಶಾಲಾ ಬ್ಯಾಗ್ ಸಮಸ್ಯೆಗೆ ಕಡಿವಾಣ ಹಾಕಲು ಗುಜರಾತಿನ ಶಾಲಾ ಪ್ರಾಂಶುಪಾಲರೊಬ್ಬರು ನಾವೀನ್ಯ ಪರಿಹಾರವೊಂದನ್ನು ಹುಡಕಿದ್ದಾರೆ. ಅವರು ಕಂಡುಕೊಂಡಿರುವ ಪರಿಹಾರ ಪೋಷಕರು ಮತ್ತು ಮಕ್ಕಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ.
ಅಹ್ಮದಬಾದ್ನ ಭಗದ್ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 41 ವರ್ಷದ ಅನಂದ್ ಕುಮಾರ್ ಖಲಸ್ ಅವರು, ಸಿಲಿಬಸ್ಗಳ ಪುಟಗಳನ್ನು ತೆಗೆದು 10 ಪುಸ್ತಕಗಳಾಗಿ ವಿಂಗಡಿಸಿದ್ದಾರೆ. ಪ್ರತಿ ಪುಸ್ತಕ ಒಂದೊಂದು ತಿಂಗಳ ಪಠ್ಯವನ್ನು ಮಾತ್ರ ಒಳಗೊಂಡಿದೆ. 10 ತಿಂಗಳ ಪಠ್ಯ 10 ಪುಸ್ತಕದಲ್ಲಿದೆ. ಇದರಿಂದಾಗಿ ಮಕ್ಕಳು ಆಯಾ ತಿಂಗಳಲ್ಲಿ ಕಲಿಸುವ ಪಠ್ಯದ ಪುಸ್ತಕವನ್ನು ಮಾತ್ರ ಬ್ಯಾಗ್ನಲ್ಲಿಟ್ಟುಕೊಂಡು ಶಾಲೆಗೆ ಬಂದರೆ ಸಾಕು.
ತನ್ನ ಮಗಳನ್ನು ನಿತ್ಯ ಶಾಲೆಗೆಂದು ಬಸ್ ಸ್ಟಾಪ್ವರೆಗೆ ಬಿಟ್ಟು ಬರುತ್ತಿದ್ದ ಆನಂದ್ ಕುಮಾರ್ ಅವರಿಗೆ, ಆ ಬ್ಯಾಗ್ನ ಭಾರ ಎಷ್ಟಿದೆ ಎಂಬುದು ಅರಿವಾಗಿತ್ತು. ಇದೇ ಅವರನ್ನು ಬ್ಯಾಗ್ ತೂಕ ಇಳಿಸುವ ಮಾರ್ಗೋಪಾಯದ ಬಗ್ಗೆ ಚಿಂತನೆ ನಡೆಸುವಂತೆ ಪ್ರೇರೇಪಿಸಿತು.
ತನಗೆ ಹೊಳೆದ ಐಡಿಯಾವನ್ನು ತನ್ನ ಶಾಲೆಯ ಇತರ ಶಿಕ್ಷಕರೊಂದಿಗೆ ಹಂಚಿಕೊಂಡ ಆನಂದ್ ಅವರಿಗೆ ಅವರ ಬೆಂಬಲವೂ ಸಿಕ್ಕಿತು. ತಕ್ಷಣವೇ ಮಕ್ಕಳ ಪಠ್ಯಪುಸ್ತಕಗಳ ಪುಟಗಳನ್ನು ಅತ್ಯಂತ ಜಾಗೃತೆಯಿಂದ ಹರಿದು, ತಿಂಗಳಿಗೆ ಕಲಿಸಬೇಕಾದ ವಿಧಾನದಲ್ಲಿ ವಿಂಗಡಿಸಿದ್ದಾರೆ. ಬಳಿಕ ಅದನ್ನು ಜೋಡಿಸಿ ಪುಸ್ತಕವನ್ನಾಗಿ ಪರಿವರ್ತಿಸಿದ್ದಾರೆ. ಅಲ್ಲದೇ, ಆಯಾ ತಿಂಗಳು ಆಯಾ ಪುಸ್ತಕ ಮಾತ್ರ ತರುವಂತೆ ಮಕ್ಕಳಿಗೆ ಸೂಚಿಸಿದ್ದಾರೆ. ಇದರಿಂದಾಗಿ ಅವರ ಶಾಲೆಯ ಮಕ್ಕಳ ಬ್ಯಾಗ್ಗಳ ತೂಕ ಅರ್ಧದಷ್ಟು ಇಳಿಕೆಯಾಗಿದೆ.
ಇತರ ಶಾಲೆಗಳು ಕೂಡ ತಮ್ಮ ವಿಧಾನವನ್ನೇ ಅನುಸರಿಸುತ್ತವೆ ಎಂಬ ನಂಬಿಕೆಯಲ್ಲಿದ್ದಾರೆ ಆನಂದ್ ಕುಮಾರ್.
source: betterindia.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.