ಜನವರಿ 8 ಮತ್ತು 9ರಂದು ಹಲವು ವಿಭಾಗಗಳ ಕಾರ್ಮಿಕರು ಹಲವು ಬೇಡಿಕೆಗಳೊಂದಿಗೆ ಒಟ್ಟಾಗಿ ಕೇಂದ್ರ ಸರ್ಕಾರದ ವಿರುದ್ದ ದೇಶದಾದ್ಯಂತ ಬಂದ್ ಹಮ್ಮಿಕೊಂಡಿರುವುದನ್ನು ಗಮನಿಸುತ್ತಿದ್ದರೆ, 2019 ರ ಚುನಾವಣೆಗೆ ಈ ದೇಶದ ಜನರ ಮನಸ್ಥಿತಿಯನ್ನ “ವ್ಯವಸ್ಥಿತ”ವಾಗಿ ನರೇಂದ್ರ ಮೋದಿ ಸರಕಾರದ ವಿರುದ್ದ ಎತ್ತಿಕಟ್ಟುವ ಕೆಲಸವಾಗುತ್ತಿರುವುದು ಸ್ಪಷ್ಟವಾಗುತ್ತಿದೆ.
ಕರ್ನಾಟಕದಲ್ಲಿ ನಾಳೆ ನಾಡಿದ್ದಿನ ಬಂದ್ಗೆ ಸರಕಾರದ ಕಡೆಯಿಂದ ದಿನೇಶ್ ಗುಂಡೂರಾವ್ ಮತ್ತು ದೇವೆಗೌಡರು ಬೆಂಬಲ ಸೂಚಿಸಿದ್ದಾರೆಂಬ ಸುದ್ದಿಯು ಕೂಡ ಸುದ್ದಿ ಮಾದ್ಯಮಗಳಲ್ಲಿ ಕೇಳಿ ಬರುತ್ತಿವೆ…!! ವಿಚಿತ್ರ ನೋಡಿ ಎರಡು ತಿಂಗಳ ಹಿಂದೆ ಇಂಧನ ಬೆಲೆ ಏರಿಕೆ ಎಂದು ಕೇಂದ್ರ ಸರ್ಕಾರದ ವಿರುದ್ದ ರಾಜ್ಯ ಬಂದ್ ಮಾಡಿಸಿದ ರಾಜ್ಯ ಸರಕಾರ ಇದೀಗ ತಾನೇ ಇಂಧನದ ಬೆಲೆಯೆರಿಕೆ ಮಾಡಿದ್ದರೂ, ಬೇರೆ ಬೇರೆ ವಿಷಯಗಳನ್ನು ಹಿಡಿದುಕೊಂಡು ಮತ್ತೆ ಕೇಂದ್ರ ಸರ್ಕಾರದ ವಿರುದ್ದನೇ ಬಂದ್ಗೆ ಬೆಂಬಲ ನೀಡಿದೆ. ಈ ಮೂಲಕ ತಾನು ಮಾಡಿರುವ ಬೆಲೆಯೆರಿಕೆಯನ್ನು ವ್ಯವಸ್ಥಿತವಾಗಿ ಜನರಿಂದ ಮರೆಮಾಚಲು ಯಶಸ್ವಿಯಾಗುವುದು ಅದರ ಉದ್ದೇಶವಾಗಿರಬಹುದು!
ಕೇಂದ್ರದಲ್ಲಿ ಕಾಂಗ್ರೆಸ್ಗೆ ಇರುವುದು 48 ಸ್ಥಾನಗಳಾಗಿದ್ದರೂ, ಮೋದಿ ಸರಕಾರ ಮತ್ತೆ ಅಧಿಕಾರಕ್ಕೆ ಬಾರದಂತೆ ನೋಡಿಕೊಳ್ಳಲು ಅದು ತಾನು ಅನುಭವದಿಂದ ಪಡೆದುಕೊಂಡಿರುವ ಪ್ರತಿ ರಾಜಕೀಯ ದಾಳಗಳನ್ನು ಉರುಳಿಸಿ ನಿರಂತರವಾಗಿ ಮೋದಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿರುವುದನ್ನು ನೋಡುತ್ತಿದ್ದರೆ ಯಾರಿಗಾದರೂ ದಂಗಾಗದೇ ಇರದು..!!
ಆದರೆ ಇತ್ತ ಬಿಜೆಪಿ ಹಾಗೂ ಬಿಜೆಪಿ ಬೆಂಬಲಿಗರನ್ನು ನೋಡುತ್ತಿದ್ದರೆ ಕೇಂದ್ರದಲ್ಲಿ ಒಂದಿಷ್ಟು ಸಂಘಟಿತ ಹೋರಾಟ ಪ್ರತಿರೋಧ ಮಾಡುತ್ತಿರುವುದು ಕಾಣುತ್ತಿದೆ. ಆದರೆ ರಾಜ್ಯ ಮಟ್ಟಕ್ಕೆ ಬಂದರೆ ಎಲ್ಲೆಲ್ಲೂ ಅಸಂಘಟಿತ ಹೋರಾಟವನ್ನಷ್ಟೇ ನಾವಿಂದು ಕಾಣುತ್ತಿದ್ದೇವೆ…
ಇನ್ನು ಪಕ್ಷಗಳ ಬೆಂಬಲಿಗರ ವಿಚಾರಕ್ಕೆ ಬಂದರೆ, ಅತ್ತ ಕಾಂಗ್ರೆಸ್ ಬೆಂಬಲಿಗರು ಇಷ್ಟು ವರುಷಗಳ ಆಡಳಿತದ ನಂತರವೂ ತಮ್ಮ ಕೈ ಬರಿದಾಗಿದ್ದರೂ ಸಹ ಕಾಂಗ್ರೆಸ್ನ್ನು ಸೋಲಿಸಲು ತಯಾರಿಲ್ಲ…!! ಆದರೆ ಬಿಜೆಪಿಯ ಕೆಲ ಬೆಂಬಲಿಗರು ಮೋದಿ ಸರಕಾರ ದೇಶದಾದ್ಯಂತ ಹಿಂದೆಂದೂ ನೋಡಿರದ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರೂ ಸಹ, ಮಂದಿರ, ಗೋ ರಕ್ಷಣೆ, ಭಾಷೆ, ಜಾತಿ ಕತೆ ಹೇಳಿಕೊಂಡು ಮೋದಿಯನ್ನು ಅಧಿಕಾರದಿಂದ ಇಳಿಸುತ್ತೇವೆ ಎನ್ನುತ್ತಿರುವುದು ನಿಜಕ್ಕೂ ದುರಂತವೇ ಸರಿ..!!!
ನಮ್ಮ ದೇಶದ ಅಭಿವೃದ್ಧಿ ಕುಂಠಿತವಾಗಲು ನೆಹರು ಕುಟುಂಬದ ಕಾಂಗ್ರೆಸ್ ಆಡಳಿತದತ್ತ ಕೈ ತೋರಿಸುತ್ತನೇ ಜೀವನ ಕಳೆದ ಜನ, ಇಂದು ಉತ್ತಮ ನಾಯಕತ್ವವನ್ನು ತಮ್ಮ ತಮ್ಮ ಸ್ವಾರ್ಥ ಸಾಧನೆಗಾಗಿ ಕೈ ಚೆಲ್ಲಲು ತಯಾರಾಗಿ ನಿಂತಿದ್ದಾರೆ..!!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.