ದುಬೈ: ಒಬ್ಬ ವ್ಯಕ್ತಿ 10 ನಿಮಿಷಗಳ ಕಾಲ ಶೀರ್ಷಾಸನ ಮಾಡುವುದನ್ನು ನಾವು ಕಂಡಿದ್ದೇವೆ. ಆದರೆ ಜೂ. 21ರ ಅಂತಾರಾಷ್ಟ್ರೀಯ ಯೋಗ ದಿನದಂದು ಯುಎಇ ಮೂಲದ ಯೋಗ ಶಿಕ್ಷಕರೊಬ್ಬರು ದಾಖಲೆ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ.
ಇಲ್ಲಿನ ಯೋಗ ಶಿಕ್ಷಕರಾದ 40 ವರ್ಷದ ಇವಾನ್ ಸ್ಟ್ಯಾನ್ಲಿ ಅವರು ಈ ಹಿಂದೆ 34 ನಿಮಿಷಗಳ ಶೀರ್ಷಾಸನ ಮಾಡಿರುವ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ. ದೇಹದ ಸಂಪೂರ್ಣ ಭಾರವನ್ನು ತಲೆಯ ಮೇಲೆ ಹೊತ್ತು 1 ಗಂಟೆಗಳ ಕಾಲ ಶೀರ್ಷಾಸನ ಮಾಡಲು ಇವರು ಸಜ್ಜಾಗುತ್ತಿದ್ದಾರೆ.
ಬಿಹಾರ್ ಸ್ಕೂಲ್ ಆಫ್ ಯೋಗ ಮತ್ತು ಮೈಸೂರ್ ಸ್ಕೂಲ್ ಆಫ್ ಯೋಗದಲ್ಲಿ ಯೋಗ ಅಧ್ಯಯನ ಮಾಡಿದ್ದಾರೆ. ಇವರು ಯೋಗ ಶಿಕ್ಷಣಾ ಪ್ರಮಾಣ ಪತ್ರವನ್ನೂ ಹೊಂದಿದ್ದಾರೆ.
ಯುಎಇಯಲ್ಲಿ ಜಾಹೀರಾತು ಸಂಸ್ಥೆಯೊಂದರ ಜಾಹೀರಾತು ಕಾಪಿರೈಟರ್ ಆಗಿರುವ ಇವರು ೧೫ ವರ್ಷಗಳ ಯೋಗ ಅನುಭವ ಹೊಂದಿದ್ದಾರೆ. ಇವರು ಸರಸ್ವತಿ ಜೋಯಿಸ್, ಬಾಬಾ ಬಾಲಕ್ ದಾಸ್, ಬಿಕೆಎಸ್ ಅಯ್ಯಂಗಾರ್ ಅವರಿಂದ ಯೋಗಾಭ್ಯಾಸವನ್ನು ಕಲಿತಿರುವರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.