ನವದೆಹಲಿ: ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿರುವ ತ್ರಿವಳಿ ತಲಾಖ್ ಕಾಯ್ದೆ, ಇಂದು ರಾಜ್ಯಸಭೆಯಲ್ಲಿ ಅಗ್ನಿಪರೀಕ್ಷೆಯನ್ನು ಎದುರಿಸುತ್ತಿದೆ. ತ್ರಿವಳಿ ತಲಾಖ್ ಪದ್ಧತಿಯನ್ನು ಅಪರಾಧವನ್ನಾಗಿಸುವ ಮಸೂದೆ ಇದಾಗಿದ್ದು, ಅಪರಾಧಿಗಳಿಗೆ 3 ವರ್ಷ ಸಜೆಯನ್ನು ಪ್ರತಿಪಾದಿಸುತ್ತದೆ.
ರಾಜ್ಯಸಭೆಯಲ್ಲಿ ಬಹುಮತವಿಲ್ಲದ ಎನ್ಡಿಎಗೆ ಇದನ್ನು ಅಂಗೀಕಾರಗೊಳಿಸುವುದು ಅತೀದೊಡ್ಡ ಸವಾಲೇ ಆಗಿದೆ. ಈ ಮಸೂದೆ ಮುಸ್ಲಿಮರನ್ನು ಟಾರ್ಗೆಟ್ ಮಾಡುತ್ತಿದೆ. ಸಂಸತ್ತಿನ ಜಂಟಿ ಸಮಿತಿಗೆ ಇದನ್ನು ವರ್ಗಾಯಿಸಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದು ಕುಳಿತಿವೆ.
ಪ್ರಸ್ತುತ ಇರುವ ವಿಧಾನದಲ್ಲಿ ಮಸೂದೆಯನ್ನು ಅಂಗೀಕಾರಗೊಳಿಸಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಈಗಾಗಲೇ ಹೇಳಿದೆ. ಇದಕ್ಕಾಗಿ ತನ್ನೆಲ್ಲಾ ಸದಸ್ಯರನ್ನೂ ರಾಜ್ಯಸಭೆಯಲ್ಲಿ ಹಾಜರಿರುವಂತೆ ತಿಳಿಸಿದೆ.
ಬೆಳಗಿನಿಂದಲೂ ರಾಜ್ಯಸಭೆಯಲ್ಲಿ ಮಸೂದೆಗೆ ಸಂಬಂಧಿಸಿದಂತೆ ಚರ್ಚೆ, ವಾಗ್ವಾದಗಳು ನಡೆಯುತ್ತಿದ್ದು, ತೀವ್ರ ಗದ್ದಲವುಂಟಾದ ಹಿನ್ನಲೆಯಲ್ಲಿ ಕಲಾಪವನ್ನು ಸಭಾಪತಿಗಳು ಮಧ್ಯಾಹ್ನ 2 ಗಂಟೆಗೆ ಮುಂದೂಡಿದ್ದಾರೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.