ಬೆಳ್ತಂಗಡಿ: ಮಾನಸಿಕ ರೋಗದ ಬಗ್ಗೆ ಇರುವ ಮೂಢನಂಬಿಕೆಯನ್ನು ತೊಡೆದುಹಾಕಿ, ಆರಂಭದಲ್ಲಿಯೇ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆಯನ್ನು ಕೊಡಿಸಬೇಕು. ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಮಾನಸಿಕ ಆರೋಗ್ಯ ಅತೀ ಮುಖ್ಯ. ಮಾನಸಿಕ ಆರೋಗ್ಯ ಸಾಧಿಸುವಲ್ಲಿ ಜನಜಾಗೃತಿ ಅತೀ ಅಗತ್ಯ ಎಂದು ಮಂಗಳೂರಿನ ಖ್ಯಾತ ಮನೋವೈದ್ಯ ಡಾ.ಅನಿಲ್ ಕಾಕುಂಜೆ ಅವರು ತಿಳಿಸಿದರು.
ಅವರು ಗಂಡಿಬಾಗಿಲಿನ ಸಿಯೋನ್ ಆಶ್ರಮ ಹಾಗೂ ಬೆಳ್ತಂಗಡಿ ರೋಟರಿ ಕ್ಲಬ್ ಉಜಿರೆಯ ರಾಮಕೃಷ್ಣ ಸಭಾಗೃಹದಲ್ಲಿ ಆಯೋಜಿಸಿದ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಹಾಗೂ ಜಾಗೃತಿ ಶಿಬಿರದಲ್ಲಿ ಮಾತನಾಡುತ್ತಿದ್ದರು.
ರೊ.ಡಿ.ಎಂ.ಗೌಡ ಅವರು ಮಾನಸಿಕ ಆರೋಗ್ಯ ಶಿಬಿರಕ್ಕೆ ಬೆಳ್ತಂಗಡಿ ರೋಟರಿಯ ದೇಣಿಗೆಯನ್ನು ಹಸ್ತಾಂತರಿಸಿದರು. ಶಿಬಿರದಲ್ಲಿ 147 ಜನರ ಆರೋಗ್ಯ ತಪಾಸಣೆ ನಡೆಸಿ ಒಂದು ತಿಂಗಳ ಅಗತ್ಯ ಔಷಧಿಗಳನ್ನು ಉಚಿತವಾಗಿ ನೀಡಲಾಯಿತು. ಬೆಳ್ತಂಗಡಿ ರೋಟರಿ ಕಾರ್ಯದರ್ಶಿ ಎಂ.ವೈಕುಂಠ ಪ್ರಭು ಕಾರ್ಯಕ್ರಮ ನಿರ್ವಹಿಸಿದರು. ರೋಟರಿ ಸದಸ್ಯ ಶ್ರೀಧರ್, ಸಿಯೋನ್ ಆಶ್ರಮದ ಸಿಬ್ಬಂದಿ ದೀಪಕ್, ಬಿಂದು ಹಾಗೂ ಜಿಸ್ಮಿ ಶಿಬಿರದಲ್ಲಿ ಸಹಕರಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.