ಶ್ರೀನಗರ: ಸದಾ ಗುಂಡಿನ ಚಕಮಕಿ, ಕಲ್ಲು ತೂರಾಟ, ಹಿಂಸೆಗಳಿಗೆ ಸುದ್ದಿಯಾಗುವ ಜಮ್ಮು ಕಾಶ್ಮೀರದಲ್ಲಿ ಆಶಾದಾಯಕ ಬೆಳವಣಿಗೆಗಳೂ ನಡೆಯುತ್ತವೆ. ಆದರೆ ನಮ್ಮ ಮಾಧ್ಯಮಗಳು ಅವುಗಳತ್ತ ಗಮನಹರಿಸುವುದು ಕಡಿಮೆಯಾದ ಕಾರಣ ಜನರಿಗೆ ಅಲ್ಲಿನ ಸಕಾರಾತ್ಮಕ ಬೆಳವಣಿಗೆಗಳ ಬಗ್ಗೆ ತಿಳಿಯುತ್ತಿಲ್ಲ.
ಮಹಿಳೆಯರು ಮನೆಯಿಂದ ಹೊರಗೆ ಬರುವುದೇ ಕಡಿಮೆ ಎಂದು ಜಮ್ಮು ಕಾಶ್ಮೀರದ ಬಗ್ಗೆ ನಾವಂದುಕೊಂಡಿದ್ದೇವೆ, ಆದರೆ ನಾದಿಯಾ ನಿಘತ್ ಎಂಬ ಯುವತಿ ಈಗ ಫುಟ್ಬಾಲ್ ಕೋಚ್ ಆಗಿ ನೇಮಕವಾಗಿದ್ದಾಳೆ. ಕಣಿವೆ ರಾಜ್ಯದ ಮೊದಲ ಮಹಿಳಾ ಕೋಚ್ ಎಂಬ ಹೆಗ್ಗಳಿಕೆಗೆ ಆಕೆ ಪಾತ್ರಳಾಗಿದ್ದಾಳೆ.
ರೂಢಿಗತ ಪರಂಪರೆಯನ್ನು ಮುರಿದು ಫುಟ್ಬಾಲ್ ಕ್ಷೇತ್ರದಲ್ಲಿ ಅನನ್ಯ ಸಾಧನೆಯನ್ನು ಮಾಡಿರುವ 20 ವರ್ಷದ ನಾದಿಯಾಗೆ ಹಲವಾರು ಟೀಕೆಗಳು ಎದುರಾಗಿವೆ, ಆದರೆ ಆ ಬಗ್ಗೆ ಎಂದೂ ಆಕೆ ತಲೆಕೆಡಿಸಿಕೊಂಡಿಲ್ಲ.
ಕಾಲೇಜಿನಲ್ಲಿ 40-50 ಪುರುಷ ಫುಟ್ಬಾಲ್ ಆಟಗಾರರ ಪೈಕಿ ಈಕೆಯೊಬ್ಬಳೇ ಮಹಿಳೆ. ಇದಕ್ಕಾಗಿ ಹಲವಾರು ಮಂದಿಯಿಂದ ವಿರೋಧ ವ್ಯಕ್ತವಾಗಿತ್ತು. ಮನೆಯವರೂ ಈಕೆಯ ನಿರ್ಧಾರವನ್ನು ವಿರೋಧಿಸಿದ್ದರು. ಆದರೆ ಇಂದು ಅವರೇ ಆಕೆಯ ಬೆಂಬಲಕ್ಕೆ ನಿಂತಿದ್ದಾರೆ.
ಮಹಾರಾಷ್ಟ್ರದ ಶಾಲೆಯೊಂದರಲ್ಲಿ ಫುಟ್ಬಾಲ್ ತರಬೇತುದಾರಳಾಗಿರುವ ಈ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಆಟಗಾರ್ತಿ, ಫುಟ್ಬಾಲ್ ಕೇವಲ ಪುರುಷರ ಆಟ ಎಂದು ಪರಿಗಣಿಸಬೇಡಿ ಎಂದು ಮನವಿ ಮಾಡುತ್ತಾಳೆ.
source: ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.