ನವದೆಹಲಿ: ಫೇಸ್ಬುಕ್, ಗೂಗಲ್, ಮೈಕ್ರೋಸಾಫ್ಟ್ನಂತಹ ಇಂಟರ್ನೆಟ್ ದಿಗ್ಗಜ ಸಂಸ್ಥೆಗಳು, ವೆಬ್ಸೈಟ್ಗಳಲ್ಲಿರುವ ಅಶ್ಲೀಲ ವಿಷಯಗಳನ್ನು ತೆಗೆದು ಹಾಕುವ ಕಾರ್ಯದಲ್ಲಿ ಕೇಂದ್ರದೊಂದಿಗೆ ಕೈಜೋಡಿಸಲಿದೆ.
ರೇಪ್, ಮಕ್ಕಳ ನೀಲಿಚಿತ್ರ, ಅಕ್ಷೇಪಾರ್ಹ ವಿಷಯಗಳನ್ನು ಇಂಟೆರ್ನೆಟ್ನಿಂದ ತೆಗೆದು ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಚಿಸಿರುವ ಸಲಹೆಗಳನ್ನು ಅನುಷ್ಠಾನಕ್ಕೆ ತರಲು, ಇಂಟೆರ್ನೆಟ್ ದಿಗ್ಗಜ ಸಂಸ್ಥೆಗಳು ಪ್ರಸ್ತಾಪಿತ ಅಥವಾ ಕರಡು ಪ್ರಮಾಣಿತ ಕಾರ್ಯ ವಿಧಾನಗಳನ್ನು ನೀಡಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಆಕ್ಷೇಪಾರ್ಹ ವಿಷಯಗಳ ಸ್ವಯಂ ಅಳಿಸುವಿಕೆಗೆ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆಧಾರಿತ ಟೂಲ್ಸ್ಗಳ ಬಳಕೆ, ಸೇರಿದಂತೆ ಭಾರತ ಸರ್ಕಾರ ಸೂಚಿಸಿರುವ ಇತರ ವಿಧಾನಗಳ ಬಗ್ಗೆ ವಿವಿಧ ಸಂಸ್ಥೆಗಳು ವಿವಿಧ ಅಭಿಪ್ರಾಯವನ್ನು ಹೊಂದಿವೆ ಎಂದು ನ್ಯಾ.ಮದನ್ ಬಿ ಲೊಕುರ್, ಯುಯು ಲಲಿತ್ ನೇತೃತ್ವದ ನ್ಯಾಯಪೀಠ ಹೇಳಿದೆ.
ಇಂತಹ ಎಲ್ಲಾ ಸಂಸ್ಥೆಗಳು ಕೇಂದ್ರದ ಸಲಹೆಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಸ್ತಾಪಿತ ಅಥವಾ ಕರಡು ಪ್ರಮಾಣಿತ ಕಾರ್ಯ ವಿಧಾನಗಳನ್ನು ನೀಡುವಂತೆ ನ್ಯಾಯಪೀಠ ತಿಳಿಸಿದೆ.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.