ಸಾಮಾನ್ಯವಾಗಿ ನಾವು ನಮ್ಮ ಸಂಸಾರದ ದೋಣಿಯನ್ನು ನಡೆಸುವ ಸಂದರ್ಭದಲ್ಲಿ ಆರ್ಥಿಕವಾಗಿ ಯಾವುದೋ ತೊಂದರೆಗೆ ಸಿಲುಕಿದಾಗ ಮೊದಲು ಮಾಡುವ ಕೆಲಸವೆಂದರೆ ಮನೆಯಲ್ಲಿರುವ ಯಾ ಮನೆಮಂದಿ ಬಳಿಯಿರುವ ಚಿನ್ನ ದುಡ್ಡು ಚಿಲ್ಲರೆ ಎಲ್ಲವನ್ನೂ ಕೂಡಿ ಹಾಕಿ ಲೆಕ್ಕ ಮಾಡುವುದು. ನಂತರ ಒಟ್ಟಾರೆಯಾಗಿ ನಮ್ಮಲ್ಲಿರುವ ದುಡ್ಡಿನ ಪರಿಸ್ಥಿತಿಯಲ್ಲಿ ನಾವು ಮುಂದಿನ ಜೀವನಕ್ಕೆ ಏನೂ ಮಾಡಬಹುದು ಎಂದು plan ಮಾಡುವುದು. ಅದಕ್ಕೆ ತಕ್ಕಂತೆ ಮುಂದಿನ ಅಗತ್ಯದ ನಡೆಗಳನ್ನು ಇಡುತ್ತಾ ಸಾಗುವುದು ತಾನೆ? ಅದನ್ನೇ ಈಗಿನ ನಮ್ಮ ಕೇಂದ್ರದ ಮೋದಿ ಸರಕಾರ ಮಾಡುತ್ತಾ ಬರುತ್ತಿರುವುದು ಎಂದು ನನ್ನ ಅನಿಸಿಕೆ.
ಹಲವು ವರ್ಷಗಳಿಂದಲೂ ಗೊತ್ತುಗುರಿಯಿಲ್ಲದೇ ಸಾಗುತ್ತಿದ್ದ ನಮ್ಮ ದೇಶದ ಅರ್ಥ ವ್ಯವಸ್ಥೆ ಯಾವ ಸ್ಥಿತಿಯಲ್ಲಿದೆ ಎಂಬುದೇ ಅರ್ಥೈಸಿಕೊಳ್ಳಲು ಕಷ್ಟವೆಂಬ ಸ್ಥಿತಿಯಲ್ಲಿತ್ತು. ಆ ಸ್ಥಿತಿಯಲ್ಲಿ ಯಾವ ತರಹದ ಬಜೆಟ್ ಮಾಡಿದರೂ ಅದು ತಲುಪಬೇಕಾದಲ್ಲಿಗೆ ತಲುಪುವ ಸ್ಥಿತಿ ಇರಲಿಲ್ಲ. ದೇಶದಲ್ಲಿ ಸರಕಾರಿ ವ್ಯವಸ್ಥೆಯ ಜೊತೆ ಜೊತೆಯಾಗಿ ಪ್ರತ್ಯೇಕ parallel ವ್ಯವಸ್ಥೆಯೇ ನಡೆಯುತ್ತಿತ್ತು. ಆ ಪರಿಸ್ಥಿತಿಯಲ್ಲಿ ಒಟ್ಟಾರೆಯಾಗಿ ದೇಶದೊಳಗೆ ಹಣವಿದೆಯೆಂಬುದೇ ಅಂದಾಜಿಸುವುದು ಕಷ್ಟವಾಗಿತ್ತು.
ಹೀಗಿರುವಾಗ ಸರಕಾರ ವ್ಯವಸ್ಥೆಯನ್ನು ಸರಿ ಮಾಡುವ ದಿಶೆಯಲ್ಲಿ ತೆಗೆದುಕೊಂಡ ಮೊದಲ ಹೆಜ್ಜೆಯೇ ಜನ್ ಧನ್ ಯೋಜನೆ. ಆ ಮೂಲಕ ಸಾಮಾನ್ಯರ ನಡುವೆ ಮಾತ್ರ ಕೈಯಿಂದ ಕೈಗೆ ಮಾತ್ರ ಓಡಾಡುತ್ತಾ ಬ್ಯಾಂಕ್ ವ್ಯವಸ್ಥೆಯೊಳಗೇ ಬಾರದೇ ಲೆಕ್ಕದಿಂದ ಹೊರಗಿದ್ದ ಹಣವನ್ನು ಕೂಡಿಹಾಕಲು ಯಶಸ್ವಿಯಾಯಿತು. ತದ ನಂತರ “ನೋಟ್ ಬಂಧಿ” ಮಾಡುವ ಮೂಲಕ ಮಧ್ಯಮ ಹಾಗೂ ದೊಡ್ಡವರ ಹಣವನ್ನು ಕೂಡಾ ನೋಟ್ ಬದಲಾವಣೆಗಾಗಿ ಬ್ಯಾಂಕಿಗೆ ತರಿಸುವುದರೊಂದಿಗೆ ಅವುಗಳ ಲೆಕ್ಕವು ಸರಕಾರದ ಕೈ ಸೇರಿತು. ಆ ಸಂದರ್ಭದಲ್ಲಿ ಜನರಲ್ಲಿ cash ನ ಕೊರತೆ ಎದುರಾಗುವುದು ಅರಿವಿದ್ದ ಸರಕಾರ ತಾನು ಮುಂದಿನ ದಿನಗಳಲ್ಲಿ ತರಲಿದ್ದ ಹೊಸ ಅರ್ಥ ವ್ಯವಸ್ಥೆ GST ಕಾರ್ಯರೂಪಕ್ಕೆ ಅಗತ್ಯವಿರುವ digital ವ್ಯವಸ್ಥೆಯನ್ನು ಜನರ ಮುಂದೆ ಇಟ್ಟು ಅದನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿತು. ಅಲ್ಲಿಗೆ ದೇಶದ ಒಂದು ಮಟ್ಟಿನ ಅರ್ಥ ವ್ಯವಸ್ಥೆಯ ಲೆಕ್ಕಾಚಾರ ಸರಕಾರಕ್ಕೆ ಸಿಕ್ಕಿದಂತಾಗುವುದರ ಜೊತೆಗೆ ಆರಂಭದಲ್ಲಿ digital payment ನ ಬಗ್ಗೆ ಆತಂಕ ವ್ಯಕ್ತಪಡಿಸಿದ ಜನರೂ ನಿಧಾನವಾಗಿ ಹೊಸ ರೀತಿಯ ವ್ಯವಹಾರಕ್ಕೆ ಹೊಂದಿಕೊಂಡರು. ಹಂತ ಹಂತವಾಗಿ ಪರಿಸ್ಥಿತಿ ಸಾಮಾನ್ಯವಾಗುತ್ತಿದ್ದಂತೆ ದೇಶದ ಹೊಸ ಅರ್ಥ ವ್ಯವಸ್ಥೆ GST ಯನ್ನು ಜನರಿಗೆ ಹೊರೆಯಾಗದಂತೆ 5 slab ನ ರೀತಿಯಲ್ಲಿ ಜನರ ಮುಂದೆ ಸರಕಾರ ತಂದಿಟ್ಟಿತು. GST ವ್ಯವಸ್ಥೆಯಲ್ಲೂ ಜನರಿಗಾಗುತ್ತಿರುವ ತೊಂದರೆಯ ಬಗ್ಗೆ feedback ಪಡೆಯುತ್ತಿದ್ದ ಸರಕಾರವು ಅದರಲ್ಲೂ ಬಹಳಷ್ಟು ಪರಿವರ್ತನೆ ಮಾಡುತ್ತಾ ಬರುತ್ತಿರುವ ಮೂಲಕ ಜನರು ಹೊಸ ಅರ್ಥ ವ್ಯವಸ್ಥೆಗೆ ಹೊಂದಿಕೊಳ್ಳಲು ಸಹಕರಿಸುತ್ತಾ ಇದೆ.
ಇದೆಲ್ಲವನ್ನೂ ನೋಡಿದರೆ ಪ್ರಸ್ತುತ ಸರಕಾರ ಸರಿಯಾದ ಅಗತ್ಯದ ಹೆಜ್ಜೆಗಳನ್ನೇ ಜಾಗರೂಕತೆಯಿಂದ ಇಡುತ್ತಾ ಬಂತೆಂದು ನನ್ನ ಭಾವನೆ. ಆದರೆ ನಾವು ಸರಕಾರದ ಪ್ರತಿಯೊಂದು ನಡೆಗಳನ್ನು ಅಂದರೆ ಜನಧನ್ , ನೋಟ್ ಬಂಧಿ , digital transaction ಗಳ ನಡೆಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ನೋಡುತ್ತಾ ಅದು success ಇದು failure ಎಂದು ಇಂದಿಗೂ ಚರ್ಚೆ ಮಾಡುತ್ತಾ ಇದ್ದೇವೆ. ಆದರೆ ಸರಕಾರವು ತನ್ನ ಯೋಜನೆಯಂತೆ ಪ್ರತಿ ಹಂತಗಳನ್ನು ದಾಟಿ ನಮ್ಮ ದೇಶದ ಅರ್ಥ ವ್ಯವಸ್ಥೆಯನ್ನು ಶಿಸ್ತು ಬದ್ಧವಾಗಿ ಮಾಡುವತ್ತ ತಂದು ನಿಲ್ಲಿಸಿದೆಯೆಂದೇ ಹೇಳಬಹುದು.
ಇಲ್ಲವಾದರೆ ನೀವೇ ನೋಡಿ ಜನಧನ್ ಮತ್ತು ನೋಟ್ ಬಂಧಿ ಮಾಡದೇ ಇರುತ್ತಿದ್ದರೆ ಸರಕಾರಕ್ಕೆ ನಮ್ಮ ದೇಶದಲ್ಲಿರುವ ಒಟ್ಟು ಕರೆನ್ಸಿ ಎಷ್ಟಿದೆಯೆಂಬುದರ ಚಿತ್ರ ಸಿಗುತ್ತಿತ್ತೇ ? ನೋಟ್ ಬಂಧಿ ಮಾಡದೇ ಇರುತ್ತಿದ್ದರೆ ಒಂದೇ ಕ್ಷಣದಲ್ಲಿ ಚಲಾವಣೆಯಲ್ಲಿದ್ದ Fake ನೋಟ್ಗಳು ತನ್ನ ಬೆಲೆ ಕಳೆದುಕೊಳ್ಳುತ್ತಿದ್ದವೇ? ನೋಟ್ ಬಂಧಿಯಲ್ಲದಿದ್ದರೆ ಜನ digital currency ಮತ್ತು payment ನತ್ತ ಸಾಗುತ್ತಿದ್ದರೆ? ದೇಶದಲ್ಲಿ digital ವ್ಯವಹಾರ ಆರಂಭವಾಗದೇ ಇದ್ದಲ್ಲಿ GST ಜಾರಿಗೆ ತರಲು ಸಾಧ್ಯವಿತ್ತೇ ?
ಮೋದಿ ಸರಕಾರವು ಪ್ರತಿಯೊಂದನ್ನು ವ್ಯವಸ್ಥಿತವಾಗಿ ಭಾರೀ ಜಾಗರೂಕತೆಯಿಂದ ಮಾಡಿಕೊಂಡಿದ್ದರ ಫಲವೇ ಇಂದು ಇಷ್ಟೆಲ್ಲಾ ಏರುಪೇರಿನ ಮೇಲೂ ನಮ್ಮ ದೇಶವು ವಿಶ್ವ ಮಟ್ಟದಲ್ಲಿ ಆರ್ಥಿಕವಾಗಿ ಬಲಿಷ್ಟವಾಗುತ್ತಲೇ ಸಾಗುತ್ತಲಿದೆ ಸ್ನೇಹಿತರೇ.
ಆದರೆ ಮೋದಿ ವಿರೋಧಿಗಳು ಇಂದಿಗೂ ಪ್ರತಿಯೊಂದರಲ್ಲೂ ತಪ್ಪು ಹುಡುಕುತ್ತಾ ಜನರನ್ನು ದಾರಿ ತಪ್ಪಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದರೆ, ನಾವು ಕೂಡ ಸ್ವಾರ್ಥಿಗಳಾಗುತ್ತಾ ಸಾಗುತ್ತಿದ್ದೇವೆಯೇ ಹೊರತು ಈ ದೇಶದ ಭವ್ಯ ಭವಿಷ್ಯದತ್ತ ಯೋಚಿಸದೇ ಇರುವುದು ನಿಜಕ್ಕೂ ಬೇಸರದ ವಿಷಯವೇ ಸರಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.