ತಿರುವನಂತಪುರಂ: ಕ್ಲಾಸ್ಗೆ ಬಂಕ್ ಹೊಡೆದು ಥಿಯೇಟರಿಗೆ ತೆರಳಿ ಇತ್ತೀಚಿಗಷ್ಟೇ ರಿಲೀಸ್ ಆದ ಮಲಯಾಳಂನ ಬ್ಲಾಕ್ಬಾಸ್ಟರ್ ಸಿನಿಮಾ ‘ಪ್ರೇಮಂ’ ಅನ್ನು ನೋಡುತ್ತಿದ್ದ ವಿದ್ಯಾರ್ಥಿಗಳ ಉತ್ಸಾಹಕ್ಕೆ ಪೊಲೀಸರು ತಣ್ಣಿರೆರೆಚಿದ್ದಾರೆ.
ವಿವಿಧ ಕಾಲೇಜುಗಳ ಸುಮಾರು 60ಕ್ಕೂ ವಿದ್ಯಾರ್ಥಿಗಳು ಸಿನಿಮಾ ಥೆಯೇಟರಿನಲ್ಲಿ ಜಮಾವಣೆಗೊಂಡಿದ್ದರು. ಇವರನ್ನು ಪೊಲೀಸರು ವಾಪಾಸ್ ಕಾಲೇಜಿಗೆ ಕಳುಹಿಸಿದ್ದಾರೆ.
ಈ ವಿದ್ಯಾರ್ಥಿಗಳು ಕ್ಲಾಸಿಗೆ ಬಂಕ್ ಹೊಡೆದು ಸಿನಿಮಾ ನೋಡಲು ಹೋಗುತ್ತಿದ್ದಾರೆ ಎಂಬ ದೂರು ಬಂದ ಹಿನ್ನಲೆಯಲ್ಲಿ ‘ಆಪರೇಶನ್ ಗುರುಕುಲಂ’ ಕಾರ್ಯಾಚರಣೆ ಆರಂಭಿಸಿದೆವು. ಥೆಯೇಟರಿಗೆ ದಾಳಿ ಮಾಡಿದಾಗ ನೂರಾರು ವಿದ್ಯಾರ್ಥಿಗಳು ಅಲ್ಲಿದ್ದರು, ವಿದ್ಯಾರ್ಥಿಗಳು ಅಲ್ಲಿದ್ದ ಬಗ್ಗೆ ಅವರ ಪೋಷಕರಿಗೆ ಮಾಹಿತಿ ನೀಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ನವಿನ್ ಪೌಲಿ ಮತ್ತು ಅನುಪಮ ಪರಮೇಶ್ವರನ್ ನಟಿಸಿರುವ ಪ್ರೇಮಂ ಸಿನಿಮಾ ಭರ್ಜರಿ ಯಶಸ್ಸು ಗಳಿಸಿದ್ದು, ಇದನ್ನು ನೋಡಲು ವಿದ್ಯಾರ್ಥಿಗಳು ಕ್ಲಾಸಿಗೆ ಸಾಮೂಹಿಕವಾಗಿ ಬಂಕ್ ಹೊಡೆಯುತ್ತಿದ್ದರು. ಇದು ಕಾಲೇಜುಗಳ ಆತಂಕಕ್ಕೆ ಕಾರಣವಾಗಿತ್ತು.
ವಿದ್ಯಾರ್ಥಿಗಳ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಅಥವಾ ಅವರಿಗೆ ಕಿರುಕುಳ ನೀಡುವ ಉದ್ದೇಶ ಇದರ ಹಿಂದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.