ಹೈದರಾಬಾದ್: ಉದ್ಯೋಗಸ್ಥ ಮಹಿಳೆಯರಿಗೆ ಆರು ತಿಂಗಳು ತಾಯ್ತನ ರಜೆಯಿದ್ದರೂ, ಮಗುವಿನ ಆರೈಕೆಗೆ ಅದು ಸಾಕಾಗುವುದಿಲ್ಲ. ಜಗತ್ತನ್ನು ಬೆರಗು ಕಂಗಳಿಂದ ನೋಡುವ ಪುಟಾಣಿ ಮಗುವಿಗೆ ಇನ್ನಷ್ಟು ಕಾಲ ತಾಯಿಯ ಬಿಸಿ ಅಪ್ಪುಗೆಯ ಅವಶ್ಯಕತೆ ಇರುತ್ತದೆ. ಮಾತ್ರವಲ್ಲ, ಕರುಳಕುಡಿಯನ್ನು ಬಿಟ್ಟು ಕಛೇರಿಗೆ ತೆರಳುವುದರಿಂದ ತಾಯಿಯ ಮಾನಸಿಕ ಮತ್ತು ದೈಹಿಕ ಆರೋಗ್ಯವೂ ಹದಗೆಡುತ್ತದೆ. ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರು ತುಸು ಹೆಚ್ಚೇ ಮಾನಸಿಕ ಯಾತನೆಯನ್ನು ಅನುಭವಿಸುತ್ತಾರೆ.
ಇದೇ ಕಾರಣಕ್ಕೆ ತೆಲಂಗಾಣದ ಸರೂರ್ನಗರ ಪೊಲೀಸ್ ಸ್ಟೇಶನ್ನಲ್ಲಿ ಶಿಶು ಕೇಂದ್ರವನ್ನು ಆರಂಭಿಸಲಾಗಿದೆ. ಮಹಿಳಾ ಪೊಲೀಸರು ಇಲ್ಲಿ ತಮ್ಮ ಮಕ್ಕಳನ್ನು ಬಿಟ್ಟು ಕರ್ತವ್ಯ ಮಾಡಬಹುದಾಗಿದೆ. ಬಿಡುವಿನ ವೇಳೆಯಲ್ಲಿ ಮಕ್ಕಳೊಂದಿಗೆ ಸಮಯ ಕಳೆಯಬಹುದಾಗಿದೆ. ಈಗಾಗಲೇ ಇಲ್ಲಿ 6 ಮಕ್ಕಳು ನೋಂದಣಿಯಾಗಿದ್ದಾರೆ. ಮಹಿಳಾ ಪೊಲೀಸ್ ಕಾನ್ಸ್ಸ್ಟೇಬಲ್ ಮತ್ತು ಒರ್ವ ಮಹಿಳೆ ಈ ಮಕ್ಕಳ ಆರೈಕೆ ಮಾಡುತ್ತಿದ್ದಾರೆ. ಆಡಳಿತ ವರ್ಗವೇ ಇದರ ಖರ್ಚುವೆಚ್ಚವನ್ನು ನೋಡಿಕೊಳ್ಳುತ್ತದೆ.
ಮೆಟರ್ನಿಟಿ ಬೆನಿಫಿಟ್ ಆಕ್ಟ್ 2017ರ ಪ್ರಕಾರ, ಶೇ.50ರಷ್ಟು ಮಹಿಳಾ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳು ಶಿಶು ಕೇಂದ್ರಗಳನ್ನು ರಚಿಸಬೇಕು ಮತ್ತು ತಾಯಂದಿರಿಗೆ ಕರ್ತವ್ಯದ ವೇಳೆ ಕನಿಷ್ಠ 4 ಬಾರಿ ಮಗುವನ್ನು ಭೇಟಿಯಾಗುವ ಅವಕಾಶ ನೀಡಬೇಕು.
source: newsbharati
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.