ಚೆನ್ನೈ: ರಸ್ತೆಯಲ್ಲಿ ನಿಂತು ಟ್ರಾಫಿಕ್ ನಿಯಂತ್ರಣ ಮಾಡುವ ಪೊಲೀಸರು ಅನುಭವಿಸುವ ಸಂಕಷ್ಟ ಒಂದೆರಡಲ್ಲ. ವಾಹನಗಳ ಹೊಗೆ ನುಂಗುತ್ತಾ ಅವುಗಳ ಓಡಾಟವನ್ನು ನಿಯಂತ್ರಿಸುವ ಇವರು, ಶೌಚಾಲಯಕ್ಕೆ ಹೋಗುವುದಕ್ಕೂ ಪರದಾಟ ನಡೆಸಬೇಕಾಗುತ್ತದೆ. ಮಹಿಳಾ ಪೊಲೀಸರನ್ನು ಈ ಸಮಸ್ಯೆ ಅತಿಯಾಗಿ ಕಾಡುತ್ತದೆ.
ಆದರೆ ತಮಿಳುನಾಡಿನ ಕೊಯಂಬತ್ತೂರು ಸಾರಿಗೆ ಪೊಲೀಸರಿಗೆ ಇನ್ನು ಮುಂದೆ ಶೌಚಾಲಯದ ಸಮಸ್ಯೆ ಕಾಡಲಾರದು. ಯಾಕೆಂದರೆ ಅಲ್ಲಿ ಪೊಲೀಸ್ ಬೂತ್ಗಳಿಗೆ ಅಟ್ಯಾಚ್ ಆಗಿ ಬಯೋ ಟಾಯ್ಲೆಟ್ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಭಾರತದಲ್ಲೇ ಮೊದಲು ಎಂಬಂತೆ ಕೊಯಂಬತ್ತೂರು ಮೆಡಿಕಲ್ ಕಾಲೇಜು ಟ್ರಾಫಿಕ್ ಸಿಗ್ನಲ್ ಬಳಿಯ ಪೊಲೀಸ್ ಬೂತ್ನಲ್ಲಿ ಬಯೋ ಟಾಯ್ಲೆಟ್ ನಿರ್ಮಾಣವಾಗಿದೆ. ಇನ್ನಡೆರಡು ದಿನದಲ್ಲಿ ಇದಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಮುಂದಿನ ವಾರದಿಂದಲೇ ಇದು ಬಳಕೆಗೆ ಯೋಗ್ಯವಾಗಲಿದೆ.
ಅಷ್ಟೇ ಅಲ್ಲದೇ ಈ ಬೂತ್ನಲ್ಲಿ ಫ್ಯಾನ್, ಎಮರ್ಜೆನ್ಸಿ ಬಟನ್, ಎಲ್ಇಡಿ ಲೈಟ್, ಮೊಬೈಲ್ ಚಾರ್ಜರ್ ಮುಂತಾದ ವ್ಯವಸ್ಥೆಯನ್ನೂ ಒದಗಿಸಲಾಗಿದೆ.
source: timesnownews.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.