ಜಾನ್ಸಿ: ಕುಟುಂಬ ಮತತು ಕೆಲಸವನ್ನು ಸಮದೂಗಿಸಿಕೊಂಡು ಹೋಗುವುದು ಪ್ರತಿ ಉದ್ಯೋಗಸ್ಥ ಮಹಿಳೆಗೆ ದೊಡ್ಡ ಸವಾಲಾಗಿರುತ್ತದೆ. ಅದರಲ್ಲೂ ಹೊಸ ತಾಯಂದಿರು ಮಗು ಮತ್ತು ಕೆಲಸದ ನಡುವೆ ಸಿಲುಕಿ ಒತ್ತಡವನ್ನು ಅನುಭವಿಸುತ್ತಾರೆ. ಜಾನ್ಸಿ ಕೊಟ್ವಾಲಿ ಪೊಲೀಸ್ ಸ್ಟೇಶನ್ನ ಕಾನ್ಸ್ಸ್ಟೇಬಲ್ವೊಬ್ಬರು ತಮ್ಮ ಮಗುವನ್ನು ಕಛೇರಿಗೆಯೇ ಕರೆದುಕೊಂಡು ಬಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಾರೆ.
ಕಾನ್ಸ್ಸ್ಟೇಬಲ್ ಅರ್ಚನಾ ಸಿಂಗ್ ತಮ್ಮ ಟೇಬಲ್ ಮೇಲೆ ಮಗುವನ್ನು ಮಲಗಿಸಿ ತಾವು ಕಛೇರಿ ಕಾರ್ಯದಲ್ಲಿ ಮಗ್ನರಾಗಿರುವ ಫೋಟೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಕೆಯ ಹಿರಿಯ ಅಧಿಕಾರಿಗಳು ಈ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಆಗ್ರಾದವರಾದ ಅರ್ಚನಾ 2015ರಿಂದ ಜಾನ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಪತಿ ಗೋರೆಗಾವ್ನಲ್ಲಿ ಕೆಲಸ ಮಾಡುತ್ತಿರುವುದರಿಂದ, ಬೇರೆ ಆಯ್ಕೆ ಇಲ್ಲದೆ 6 ತಿಂಗಳ ಮಗುವನ್ನು ಕಛೇರಿಗೆ ಕರೆದುಕೊಂಡು ಬರುತ್ತಿದ್ದಾರೆ. ಹಿರಿಯ ಮಗಳನ್ನು ಕಾನ್ಪುರದಲ್ಲಿ ತಂದೆ ತಾಯಿಯ ಬಳಿ ಬಿಟ್ಟಿದ್ದಾರೆ. ಪೊಲೀಸ್ ಸ್ಟೇಶನ್ನಲ್ಲಿ ರಿಸೆಪ್ಶನ್ ಕಾರ್ಯವನ್ನು ನೋಡಿಕೊಳ್ಳುತ್ತಿದ್ದಾರೆ.
ಯುಪಿ ಪೊಲೀಸ್ ಇನ್ಸ್ಪೆಕ್ಟರ್ ಈ ಫೋಟೋವನ್ನು ಹಂಚಿಕೊಂಡು, ’ಇನ್ಕ್ರೆಡಿಬಲ್-ಯಾವುದೇ ಕ್ಯಾಪಕ್ಷನ್ ನಿಡಬೇಕಾದ ಅಗತ್ಯವಿಲ್ಲ’ ಎಂದಿದ್ದಾರೆ.
ಹೆಣ್ಣೊಬ್ಬಳು ತನ್ನ ವೃತ್ತಿ ಬದುಕು ಮತ್ತು ತಾಯ್ತನವನ್ನು ಹೇಗೆ ನಿಭಾಯಿಸುತ್ತಾಳೆ ಎಂಬುದಕ್ಕೆ ಈ ಫೋಟೋ ಅದ್ಭುತ ಉದಾಹರಣೆಯಾಗಿದೆ.
source: timesofindia
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.