ಲಂಡನ್: ನಮ್ಮ ದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬ ಗೊಂದಲ ಇನ್ನೂ ಇದೆ. ಆದರೆ ಯುರೋಪಿಯನ್ ನಗರಗಳು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದ್ದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿ ಪಾರ್ಕ್ಗಳನ್ನೇ ನಿರ್ಮಾಣ ಮಾಡುತ್ತಿದೆ.
ಹೌದು, ನೆದರ್ಲ್ಯಾಂಡ್ನ ರೊಟರ್ಡ್ಯಾಂನಲ್ಲಿ ತೇಲುವ ಪಾರ್ಕ್ವೊಂದು ನಿರ್ಮಾಣವಾಗಿದೆ, ಇದನ್ನು ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ ಮಾಡಿ ನಿರ್ಮಾಣ ಮಾಡಲಾಗಿದೆ. ನೀಯು ಮಾಸ್ ನದಿ ಮೇಲೆ ಇದು ತೇಲುತ್ತಿದೆ.
ವಿಶೇಷವೆಂದರೆ, ಈ ಪಾರ್ಕ್ ತೇಲುತ್ತಿರುವ ನೀಯು ಮಾಸ್ ನದಿಯಿಂದ ತೆಗೆಯಲಾದ ಪ್ಲಾಸ್ಟಿಕ್ ತ್ಯಾಜ್ಯದಿಂದಲೇ ಈ ಪಾರ್ಕ್ನ್ನು ನಿರ್ಮಾಣ ಮಾಡಲಾಗಿದೆ. ಜನರು ಬಂದು ಈ ಪಾರ್ಕ್ನ್ನು ವೀಕ್ಷಿಸುವ ಅವಕಾಶವಿದೆ. ಅಷ್ಟೇ ಈ ಪಾರ್ಕ್ ಪ್ಲಾಸ್ಟಿಕ್ ಕಸ ನದಿಗೆ ಬೀಳದಂತೆ ನೋಡಿಕೊಳ್ಳುತ್ತದೆ. ಜಲಚರಗಳಿಗೆ ವಾಸಿಸಲು ಬೇಕಾದ ಅನುಕೂಲತೆಗಳನ್ನೂ ಈ ಪಾರ್ಕ್ನಲ್ಲಿ ಮಾಡಲಾಗಿದೆ.
ಐದು ವರ್ಷಗಳ ಸತತ ಪರಿಶ್ರಮದೊಂದಿಗೆ ರಿಸೈಕಲ್ಡ್ ಐಸ್ಲ್ಯಾಂಡ್ ಫೌಂಡೇಶನ್ ಈ ಪಾರ್ಕ್ನ್ನು ನಿರ್ಮಾಣ ಮಾಡಿದ್ದು, ಕಳೆದ ಜುಲೈನಲ್ಲಿ ಉದ್ಘಾಟನೆಗೊಂಡಿದೆ.
source: newsbharati
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.