ವಾಜಪೇಯಿ ಅವರ ನೇತೃತ್ವದಲ್ಲಿ ಮೊದಲ NDA ಸರಕಾರವು ಸ್ಥಳೀಯ ಕೈಗಾರಿಕಾ ಸಂಶೋಧನೆಗೆ ಉತ್ತೇಜಿಸಲು ಒಂದು ಉತ್ತಮ ಯೋಜನೆಯನ್ನು ರೂಪಿಸಿತು. ಆದಾಗಿಯೂ ಅವರ ಸರ್ಕಾರದ ನಂತರ ಬಂದ ಸರ್ಕಾರಗಳು ಆ ಯೋಜನೆಯಲ್ಲಿ ಯಾವುದೇ ಮುನ್ನಡೆ ಸಾಧಿಸುವಲ್ಲಿ ವಿಫಲವಾಗಿದ್ದವು.
ಭಾರತದಲ್ಲಿ ಸ್ಥಳೀಯ ಕೈಗಾರಿಕಾ ಸಂಶೋಧನೆಗಾಗಿಯೇ ಅತ್ಯಂತ ಪ್ರಮುಖವಾದ ನೀತಿಯೊಂದನ್ನು ಮೊದಲ ಬಾರಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜಾರಿಗೊಳಿಸಿದ್ದರು. ಅವರ ಅವಧಿಯಲ್ಲಿ I-T ಕಾಯಿದೆಯ ಅಡಿಯಲ್ಲಿ ಸೆಕ್ಷನ್ 80-IB (8A) 2002ನ್ನು ಪರಿಚಯಿಸಲಾಯಿತು. ಇದು ಬೌದ್ಧಿಕ ಆಸ್ತಿ (IP)ಗಳನ್ನು ಮಾತ್ರ ಮಾರಾಟ ಮಾಡುವ ಕಂಪನಿಗಳಿಗೆ ಹತ್ತು ವರ್ಷಗಳ ಕಾಲ ಆದಾಯ ತೆರಿಗೆ ವಿನಾಯಿತಿಯನ್ನು ಒದಗಿಸಿತು. ನಂತರ 2007 ರಲ್ಲಿ ಈ ಯೋಜನೆಯು ಹಿಂತೆಗೆದುಕೊಳ್ಳಲ್ಪಟ್ಟಿತಾದರೂ ಕೆಲವು ಕಂಪನಿಗಳು 2017 ರವರೆಗೂ ಅದರ ಪ್ರಯೋಜನಗಳನ್ನು ಪಡೆಯುತ್ತಲೇ ಇದ್ದವು.
ಇದು ಮಾರುಕಟ್ಟೆಯಲ್ಲಿ ಕ್ರಾಂತಿಯನ್ನೇ ಉಂಟುಮಾಡಬಲ್ಲ ಸ್ಥಳೀಯ ತಂತ್ರಜ್ಞಾನಗಳನ್ನು ತರುವಲ್ಲಿ ಸಹಕಾರಿಯಾಯಿತು.ನಂತರ ಇದರ ಪರವಾನಗಿಯನ್ನು ತಯಾರಕರುಗಳಿಗೂ ನೀಡಲಾಯಿತು.ಉದಾಹರಣೆಗೆ ಒಂದು ಔಷಧ ತಯಾರಿಕೆ, ಪ್ರೊಸೆಸರ್ ವಿನ್ಯಾಸಗಳು, ಎಂಜಿನ್ ವಿನ್ಯಾಸಗಳು, ಕೃಷಿಗಾಗಿ ಉತ್ತಮ ಇಳುವರಿ ಕೊಡಬಲ್ಲ ಬಿತ್ತನೆ ಬೀಜಗಳು,ಸ್ವಿಚ್ಗಳು ಇತ್ಯಾದಿಗಳು. ಈ ಬೌದ್ಧಿಕ ಆಸ್ತಿಗಳ ಮಾರಾಟಗಳು ಸೇವಾ ಕಂಪೆನಿಗಳಾಗಲೀ ಅಥವಾ ಇತರ ಉತ್ಪಾದಕ ವಲಯದ ಕಂಪೆನಿಗಳಾಗಲೀ ಅಲ್ಲದಿದ್ದರೂ ಸೇವಾ ವಲಯ ಹಾಗೂ ಉತ್ಪಾದಕ ವಲಯಗಳ ಕಂಪನಿಗಳಿಗೆ ದೊಡ್ಡ ಕೊಡುಗೆಯನ್ನೇ ನೀಡಿದವು.
ಒಂದು ಒಳನೋಟ
2002ರ ವರೆಗೂ ಭಾರತದಲ್ಲಿ ಕೇವಲ ಕೆಲವೇ ಕೆಲವು ಕಂಪನಿಗಳು ಮಾತ್ರ ಸಂಶೋಧನಾಧಾರಿತ ತಂತ್ರಜ್ಞಾನ (IP)ಗಳನ್ನು ಮಾರಾಟ ಮಾಡುವ ಕಂಪೆನಿಗಳಾಗಿ ಗುರುತಿಸಿಕೊಂಡಿದ್ದವು.ಆದರೆ NDA ಸರ್ಕಾರ ರೂಪಿಸಿದ ಹೊಸ ನೀತಿಯಿಂದಾಗಿ ಆ ನಂತರ ಭಾರತದಲ್ಲಿ ಬಯೋಕಾನ್ ಲಿಮಿಟೆಡ್ (ಬಯೋಟೆಕ್ನಾಲಜಿ IP ಕಂಪೆನಿ)ನಂತಹಾ ಸುಮಾರು ನಲವತ್ತು ಸಮರ್ಥ ಕಂಪನಿಗಳು ರೂಪುಗೊಂಡವು.
ನಮ್ಮ ಪ್ರಧಾನಿಗಳಾಗಿದ್ದ ವಾಜಪೇಯಿ ಅವರು ಸಂಶೋಧನಾಧಾರಿತ ತಂತ್ರಜ್ಞಾನ (IP) ಮಾರಾಟ ಎನ್ನುವುದನ್ನು ಪ್ರಪಂಚದ ಅತ್ಯಂತ ಸವಾಲಿನ ಉದ್ಯಮಗಳಲ್ಲೊಂದು ಸೂಕ್ಷ್ಮವಾಗಿ ಗುರುತಿಸಿದವರಾಗಿದ್ದರು. ಆ ಉದ್ಯಮದಲ್ಲಿ ವೈಫಲ್ಯದ ಸಾಧ್ಯತೆಗಳು ಅತೀ ಹೆಚ್ಚಿರುತ್ತವೆ,ಮೊದಲ ಪ್ರಯೋಗಗಳು ವಿಫಲಗೊಳ್ಳಬಹುದು ಮತ್ತು ಪದೇ ಪದೇ ಪುನರಾವರ್ತಿತ ಪ್ರಯೋಗಗಳ ಮೂಲಕ ಸಂಪೂರ್ಣ ಸುಧಾರಣೆಗೊಂಡು ಅದು ಯಶಸ್ವಿಯಾಗುವವರೆಗೆ ಅಪಾರ ಸಮಯ ಮತ್ತು ಹಣವನ್ನು ಕಳೆದುಕೊಳ್ಳುತ್ತಾ ಇರಬೇಕಾಗಬಹುದು.ಸೂಕ್ತ ಸಮಯದಲ್ಲಿ ಅಂತಹಾ ಕಂಪನಿಗಳಿಗೆ ಸೂಕ್ತ ಸಹಕಾರ ದೊರೆಯದೆ ಹೋದರೆ ಅಂದುಕೊಂಡ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬಹುದಾದ ಎಲ್ಲಾ ಅವಕಾಶಗಳೂ ಕೈತಪ್ಪಿ ಹೋಗಬಹುದಾದ ಸಂದರ್ಭವಿರುತ್ತದೆ. ಇದೇ ಕಾರಣಕ್ಕಾಗಿ ಭಾರತವು ವೈಜ್ಞಾನಿಕ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚು ಸಂಶೋಧನಾ ಕಂಪನಿಗಳನ್ನು ರೂಪಿಸುವಲ್ಲಿ ವಿಫಲವಾಗಿತ್ತು.ಆದ್ದರಿಂದಲೇ ನಾವು ಬಹುತೇಕ ಎಲ್ಲದಕ್ಕೂ ಆಮದು ಉತ್ಪನ್ನಗಳಿಗೆ ಮೊರೆ ಹೋಗಬೇಕಾಯಿತು.
ನಮ್ಮ ಪ್ರಧಾನಿಯವರಾಗಿದ್ದ ವಾಜಪೇಯಿಯವರು ನಮ್ಮ ದೇಶದ ಕೈಗಾರಿಕಾ ಸಂಶೋಧನೆಗಳ ಕೊರತೆಯ ನಡುವೆಯೂ ಭಾರತವನ್ನು ಒಂದು ದೊಡ್ಡ ಮಾರುಕಟ್ಟೆಯನ್ನಾಗಿ ಮತ್ತು ಅಗಾಧ ಕಾರ್ಮಿಕ ಶಕ್ತಿಯನ್ನಾಗಿ ಗುರುತಿಸಿದ್ದರು. ನಮ್ಮ ದೇಶದ ದೀರ್ಘಕಾಲೀನ ಸಮಸ್ಯೆಗಳನ್ನು,ಅದರಲ್ಲೂ ಆಯಕಟ್ಟಿನ ಕ್ಷೇತ್ರಗಳಲ್ಲಿನ ನಮ್ಮ ಕೊರತೆಗಳನ್ನು ಹೊರಗಿನವರಿಂದ ಪರಿಹರಿಸಲು ಸಾಧ್ಯವಿಲ್ಲ ಎನ್ನುವುದನ್ನು ಅವರು ಮನದಟ್ಟು ಮಾಡಿಕೊಂಡಿದ್ದರು.
ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ GPS ತಂತ್ರಜ್ಞಾನವನ್ನು ನಿರಾಕರಿಸಿದ್ದಾಗಿರಬಹುದು ಅಥವಾ ಪರಮಾಣು ಪರೀಕ್ಷೆಯ ನಂತರ ತಂತ್ರಜ್ಞಾನಗಳ ವರ್ಗಾವಣೆಯ ನಿಷೇಧ ಹೇರಲಾಗಿದ್ದಿರಬಹುದು, ಇದಕ್ಕೆಲ್ಲಾ ಒಂದೇ ಪರಿಹಾರವೆಂದರೆ ನಮ್ಮದೇ ಆದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಎನ್ನುವುದನ್ನು ಅರಿತಿದ್ದ ಅವರು, ಅದಕ್ಕಾಗಿಯೇ ಸ್ವತಃ ನಾಯಕನ ಸ್ಥಾನದಲ್ಲಿ ನಿಂತು ಅಗತ್ಯ ಪ್ರೋತ್ಸಾಹ ಒದಗಿಸಿದರು.
ಈ ಕಂಪೆನಿಗಳಿಗೆ ಯಾವುದೇ ರಾಜಕೀಯ ಪ್ರಭಾವವಿಲ್ಲ ಮತ್ತು ಯಾವುದೇ ಲಾಬಿ ಮಾಡುವ ಸಾಮರ್ಥ್ಯವಿಲ್ಲ ಎನ್ನುವುದನ್ನರಿತಿದ್ದ ಅಂದಿನ ಪ್ರಧಾನಿ ವಾಜಪೇಯಿಯವರು, ಇವುಗಳೇ ಈ ದೇಶದ ಸಮಸ್ಯೆಗಳಿಗೆ ತಮ್ಮ ನವೀನ ತಂತ್ರಜ್ಞಾನಗಳ ಮೂಲಕ ಪರಿಹಾರಗಳನ್ನೊದಗಿಸಿ ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸುವ ಸಾಧನಗಳಾಗಿ ಕಾಣಿಸಿದವು.
ಒಮ್ಮೆ ಇವು ಆರ್ಥಿಕವಾಗಿ ಸಧೃಢಗೊಂಡರೆ ದೇಶದ ತೆರಿಗೆ ಆದಾಯಕ್ಕೂ ತಮ್ಮದೇ ಆದ ಕೊಡುಗೆ ನೀಡಬಲ್ಲವು ಹಾಗೂ ಅಪಾರ ಉದ್ಯೋಗ ಸೃಷ್ಟಿಗೂ ಕಾರಣವಾಗಲಿವೆ, ಆಮದಾಗುವ ಅದೇ ಶ್ರೇಣಿಯ ಉತ್ಪನ್ನಗಳಿಗೆ ಸರಿಸಮನಾದ ಉತ್ಪನ್ನಗಳು ನಮ್ಮದೇ ದೇಶದಲ್ಲಿ ತಯಾರಾಗುವ ಮೂಲಕ ಸ್ಪರ್ಧಾತ್ಮಕ ದರದಲ್ಲಿ ಅವು ದೊರೆಯಲಿವೆ,ಆಮದು ಪ್ರಮಾಣದಲ್ಲಿ ಇಳಿಕೆಯಾಗಲಿದೆ,ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಸಶಕ್ತಗೊಳಿಸಲಿದೆ ಮತ್ತು ಭಾರತವನ್ನು ಒಂದು ಸಮರ್ಥ ದೇಶವನ್ನಾಗಿ ಕಟ್ಟಲು ಇದು ಸಹಕಾರಿಯಾಗಲಿದೆ ಎನ್ನುವುದು ಇದರ ಹಿಂದಿನ ಪರಿಕಲ್ಪನೆಯಾಗಿತ್ತು.
ನೀತಿ ಆಯೋಗ(NITI Ayog) 2016 ರ ಅಕ್ಟೊಬರ್ ನಲ್ಲಿ ಇದೇ ವಿಷಯವಾಗಿ ಚರ್ಚೆ ನಡೆಸಿ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80-IB (8A)ಯನ್ನು ಮರುಪರಿಚಯಿಸಲು ಶಿಫಾರಸು ಮಾಡಿದೆ. ಆ ಶಿಫಾರಸಿನ ಮೇರೆಗೆ ಈಗಾಗಲೇ ಕಾರ್ಯಗಳು ಪ್ರಗತಿಯಲ್ಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.