ನವದೆಹಲಿ: ದೇಶದಲ್ಲಿ ನವರಾತ್ರಿ ಸಂಭ್ರಮ ಆರಂಭಗೊಂಡಿದ್ದು, ದುರ್ಗಾಮಾತೆಯ ನವ ಅವತಾರಗಳನ್ನು ಪೂಜಿಸಿ, ಭಜಿಸಿ ಪುನೀತರಾಗುವ ಸುಸಂದರ್ಭ ಇದಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ ಮೂಲಕ ನವರಾತ್ರಿಯ ಶುಭಾಶಯಗಳನ್ನು ಕೋರಿದ್ದು, ‘ಶಕ್ತಿಯ ಅಧಿದೇವತೆ ದುರ್ಗಾಮಾತೆ ಎಲ್ಲರ ಜೀವನದಲ್ಲೂ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲಿ. ಜೈ ಮಾ ಜಗದಂಬಾ’ ಎಂದು ಟ್ವಿಟ್ ಮಾಡಿದ್ದಾರೆ.
ಮತ್ತೊಂದು ಟ್ವಿಟ್ನಲ್ಲಿ ಅವರು, ಮೊದಲ ದಿನ ಆರಾಧಿಸಲ್ಪಡುವ ಶೈಲಪುತ್ರಿಗೆ ನಮಸ್ಕರಿಸಿದ್ದಾರೆ ಮತ್ತು ಅದಕ್ಕೆ ಸಂಬಂಧಿಸಿದ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
‘ಪರ್ವತ ರಾಜ ಪುತ್ರಿ ಶೈಲಪುತ್ರಿಗೆ ತಲೆ ಬಾಗಿ ನಮಿಸುತ್ತೇನೆ, ಆಕೆ ಪ್ರಕೃತಿಯೊಂದಿಗೆ ಬೆಸೆದಿದ್ದಾಳೆ ಮತ್ತು ಆಕೆ ಸರಳತೆಯ ಸಾಕಾರಮೂರ್ತಿ’ ಎಂದಿದ್ದಾರೆ.
वन्दे वाञ्छितलाभाय चन्द्रार्ध कृतशेखराम् ।
वृषारूढाम् शूलधराम् शैलपुत्रीम् यशस्विनीम् ॥
We bow today, to the daughter of the mountains, Maa Shailaputri.
An Avatar of Maa Durga, she is also closely associated with nature. She personifies simplicity. https://t.co/Jrretwcrqz
— Narendra Modi (@narendramodi) October 10, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.