ನವದೆಹಲಿ: ಭಾರತದ ಹೆಮ್ಮೆಯ ವಾಯುಸೇನೆ ಇಂದು ತನ್ನ 86ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಸಂಭ್ರಮವನ್ನು ಆಚರಿಸುವುದಕ್ಕಾಗಿ ಘಾಜಿಯಾಬಾದ್ನ ಹಿಂಡೋನ್ ಏರ್ಪೋರ್ಸ್ ಸ್ಟೇಶನ್ನಲ್ಲಿ ಅದ್ಧೂರಿ ಪೆರೇಡ್ನ್ನು ಆಯೋಜನೆಗೊಳಿಸಲಾಗಿದೆ.
ಏರ್ ವಾರಿಯರ್ ಡ್ರಿಲ್ ಟೀಮ್ ತನ್ನ ಅದ್ಭುತ ಶಸ್ತ್ರಾಸ್ತ್ರ ನಿರ್ವಹಣಾ ಕೌಶಲ್ಯವನ್ನು ಪ್ರದರ್ಶಿಸುವ ಮೂಲಕ ಪೆರೇಡ್ ಆರಂಭಗೊಳ್ಳಲಿದೆ.
ಬಳಿಕ ವಿವಿಧ ಏರ್ಕ್ರಾಫ್ಟ್ಗಳ ಮೂಲಕ ಏರ್ ಶೋ ಜರುಗಲಿದೆ. ಪ್ರಮುಖವಾಗಿ ವಿಂಟೇಜ್ ಏರ್ಕ್ರಾಫ್ಟ್, ಮಾಡರ್ನ್ ಟ್ರಾನ್ಸ್ಪೋರ್ಟ್ ಏರ್ಕ್ರಾಫ್ಟ್, ಫ್ರಾಂಟ್ಲೈನ್ ಏರ್ಕ್ರಾಫ್ಟ್ಗಳ ಏರ್ ಶೋ ಜರುಗಲಿದೆ. ಖ್ಯಾತ ಆಕಾಶ್ ಗಂಗಾ ತಂಡದಿಂದ ಏರ್ಕ್ರಾಫ್ಟ್ ಮೂಲಕ ಸ್ಕೈ ಡೈವಿಂಗ್ ನಡೆಯಲಿದೆ.
ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ವಾಯುಸೇನಾ ದಿನದ ಅಂಗವಾಗಿ ಟ್ವಿಟರ್ನಲ್ಲಿ ಶುಭಾಶಯಗಳನ್ನು ಕೋರಿದ್ದಾರೆ. ಮೋದಿ ವಾಯುಸೇನೆಯ ಹಿರಿಮೆಗೆ ಸಂಬಂಧಿಸಿದ ವೀಡಿಯೋವನ್ನೂ ಹಂಚಿಕೊಂಡಿದ್ದಾರೆ.
A grateful nation salutes our valorous air warriors and their families on Air Force Day. They keep our skies safe and are at the forefront of serving humanity in times of disasters. Proud of the Indian Air Force! pic.twitter.com/7zpdzotATS
— Narendra Modi (@narendramodi) October 8, 2018
On Air Force Day, we proudly honour our air warriors, veterans, and families of the Indian Air Force. They safeguard our skies with courage and commitment. The resilience, tenacity and zeal of our valiant air warriors is a source of pride for every Indian #PresidentKovind
— President of India (@rashtrapatibhvn) October 8, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.