ಕಳೆದ ವರ್ಷದ ಆಗಸ್ಟ್ ನಲ್ಲಿ ಗೃಹ ಖಾತೆಯ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಸರ್ಕಾರವು ಸುಮಾರು ನಲವತ್ತು ಸಾವಿರ ನುಸುಳುಕೋರ ರೋಹಿಂಗ್ಯಾಗಳನ್ನು ಗುರುತಿಸಿ ಅವರನ್ನು ದೇಶದಿಂದ ಹೊರ ಹಾಕುವುದಾಗಿ ಹೇಳಿಕೆ ನೀಡಿದ್ದರು. ದೇಶದ ಕಾನೂನಿಗಿಂತಲೂ ಮಾನವೀಯತೆಗೆ ಹೆಚ್ಚು ಬೆಲೆ ಕೊಟ್ಟು ಅವರನ್ನು ಭಾರತದಲ್ಲಿಯೇ ಉಳಿಸಿಕೊಳ್ಳಬೇಕು ಎನ್ನುವ ಅಂತಾರಾಷ್ಟ್ರೀಯ ಒತ್ತಡ ಹಾಗೂ ದೇಶದ ಮಾನವ ಹಕ್ಕು ಸಂಘಟನೆಗಳ ಒತ್ತಡದಿಂದಾಗಿ ಕೇಂದ್ರ ಸರ್ಕಾರಕ್ಕೆ ಆ ಕೆಲಸವನ್ನು ಮಾಡಲಾಗಿರಲಿಲ್ಲ.
ಆದರೆ ಇದೀಗ ಭಾರೀ ಪ್ರಮಾಣದಲ್ಲಿ ರೋಹಿಂಗ್ಯಾಗಳು ದಕ್ಷಿಣ ಭಾರತದತ್ತ ನುಗ್ಗಿ ಬರುತ್ತಿದ್ದಾರೆ ಎನ್ನುವ ವರದಿಗಳು ದಕ್ಷಿಣ ಭಾರತೀಯರ ನಿದ್ದೆಗೆಡಿಸಿವೆ. ಈಗಾಗಲೇ ರೈಲ್ವೆ ಮಂಡಳಿ ಗುಪ್ತಚರ ಮಾಹಿತಿಗಳನ್ನು ಆಧರಿಸಿ ಈಶಾನ್ಯ ರಾಜ್ಯಗಳಿಂದ ಭಾರೀ ಪ್ರಮಾಣದಲ್ಲಿ ಕೇರಳಕ್ಕೆ ಪ್ರಯಾಣಿಕರ ಸೋಗಿನಲ್ಲಿ ಬರುತ್ತಿರುವ ರೋಹಿಂಗ್ಯಾ ಗಳ ಚಲನವಲನಗಳ ಮೇಲೆ ಕಣ್ಣಿರಿಸುವಂತೆ ದಕ್ಷಿಣ ರೈಲ್ವೆ ತನ್ನ ವ್ಯಾಪ್ತಿಯ RPF ನ ಎಲ್ಲಾ ಘಟಕಗಳಿಗೆ ನಿರ್ದೇಶಿಸಿದೆ.
ತೀವ್ರ ಭದ್ರತಾ ಅಪಾಯವಿರುವ ಬಗ್ಗೆ ಈಗಾಗಲೇ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿರುವ ದಕ್ಷಿಣ ರೈಲ್ವೆಯ ಮುಖ್ಯ ಭದ್ರತಾ ಆಯುಕ್ತರು ಎಲ್ಲಾ ವಿಭಾಗೀಯ ಭದ್ರತಾ ಆಯುಕ್ತರಿಗೆ ಪತ್ರ ಬರೆದು, ಪಶ್ಚಿಮ ಬಂಗಾಳ,ಅಸ್ಸಾಮ್ ರಾಜ್ಯಗಳಿಂದ ಕೇರಳ ಮತ್ತು ತಮಿಳು ನಾಡು ರಾಜ್ಯಗಳಿಗೆ ಬರುವ 14 ರೈಲುಗಳ ಪಟ್ಟಿಯನ್ನು ನೀಡಿದ್ದಾರೆ. ಗುಪ್ತಚರ ಮಾಹಿತಿಗಳನ್ನು ಆಧರಿಸಿ ಈಶಾನ್ಯ ರಾಜ್ಯಗಳಿಂದ ಭಾರೀ ಪ್ರಮಾಣದಲ್ಲಿ ದಕ್ಷಿಣ ರಾಜ್ಯಗಳಿಗೆ, ಅದರಲ್ಲೂ ಪ್ರಮುಖವಾಗಿ ಕೇರಳಕ್ಕೆ ತಮ್ಮ ಕುಟುಂಬದವರ ಸಮೇತ ಗುಂಪು ಗುಂಪಾಗಿ ಪ್ರಯಾಣಿಕರ ಸೋಗಿನಲ್ಲಿ ಬರುತ್ತಿರುವ ರೋಹಿಂಗ್ಯಾಗಳ ಚಲನವಲನಗಳ ಮೇಲೆ ಕಣ್ಣಿರಿಸಿ ಅನುಮಾನ ಕಂಡುಬಂದರೆ ಕೂಡಲೇ ಅವರನ್ನು ಪೊಲೀಸರಿಗೆ ಹಸ್ತಾಂತರಿಸುವಂತೆ ನಿರ್ದೇಶಿಸಲಾಗಿದೆ.
ಸಂತ್ರಗಾಚಿ -ಚನ್ನೈ ಸೆಂಟ್ರಲ್ ಅಂತ್ಯೋದಯ ಎಕ್ಸ್ಪ್ರೆಸ್, ಹೌರಾ -ಕನ್ಯಾಕುಮಾರಿ ಎಕ್ಸ್ಪ್ರೆಸ್, ಹೌರಾ ಮೇಲ್, ಗುವಾಹಟಿ-ತ್ರಿವೇಂಡ್ರಮ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್, ಶಾಲಿಮಾರ್-ತ್ರಿವೇಂಡ್ರಮ್ ಎಕ್ಸ್ಪ್ರೆಸ್ ಮುಂತಾದ ರೈಲುಗಳ ಹೆಸರುಗಳನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.ಈ ರೈಲುಗಳ ಮೂಲಕವೇ ಪಶ್ಚಿಮ ಬಂಗಾಳ,ಅಸ್ಸಾಮ್ ಮುಂತಾದ ರಾಜ್ಯಗಳಿಂದ ಸಾವಿರಾರು ಕಾರ್ಮಿಕರು ನಿರಂತರವಾಗಿ ದಕ್ಷಿಣ ಭಾರತಕ್ಕೆ ಬರುವುದರಿಂದ ಅದೇ ಕಾರ್ಮಿಕರ ಸೋಗಿನಲ್ಲಿ ತಮ್ಮ ಕುಟುಂಬ ಸಮೇತ ಸಾವಿರಾರು ಸಂಖ್ಯೆಯಲ್ಲಿ ರೋಹಿಂಗ್ಯಾಗಳು ಆ ರೈಲುಗಳ ಮೂಲಕ ಬರುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ RPF ಗೆ ಒದಗಿಸಿದೆ ಎನ್ನಲಾಗುತ್ತಿದೆ.
ಈ ಆತಂಕದ ಹಿಂದೆಯೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ದೇಶದೊಳಗೆ ಪ್ರವೇಶಿಸಿರುವ ರೋಹಿಂಗ್ಯಾ ನಿರಾಶ್ರಿತರ ಸ್ಥಿತಿಗತಿಗಳನ್ನು ಗುರುತಿಸಿ ಅವರ ಬಯೋಮೆಟ್ರಿಕ್ ಮಾಹಿತಿಗಳನ್ನು ಸಂಗ್ರಹಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ. ರೋಹಿಂಗ್ಯಾ ಗಳಿಂದ ಉಂಟಾಗಬಹುದಾದ ಭದ್ರತಾ ಅಪಾಯಗಳ ಬಗ್ಗೆ ರೈಲ್ವೆ ಮಂಡಳಿಯ ಸೂಚನೆಯ ನಂತರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹಿರಿಯ ರೈಲ್ವೆ ರಕ್ಷಣಾ ದಳದ (ಆರ್ಪಿಎಫ್) ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮುಖ್ಯಮಂತ್ರಿ ಶ್ರೀ.ಹೆಚ್.ಡಿ.ಕುಮಾರ ಸ್ವಾಮಿ ಅವರ ಕ್ಷೇತ್ರವಾದ ರಾಮ ನಗರದಲ್ಲಿ ಮತ್ತು ಬೆಂಗಳೂರಿನಲ್ಲಿ ಎನ್ ಐ ಎ ಇಂದ ಬಂಧಿತರಾದ ಉಗ್ರಗಾಮಿಗಳು ರೋಹಿಂಗ್ಯಾಗಳ ಪ್ರತೀಕಾರದ ಕ್ರಮವಾಗಿ ಬೌದ್ಧ ಧರ್ಮ ಗುರು ದಲೈ ಲಾಮಾ ಅವರ ಹತ್ಯೆ ಸಂಚು ನಡೆಸಿದ್ದರು ಎನ್ನುವ ಸುದ್ದಿಗಳು ಬರುತ್ತಿರುವ ಹೊತ್ತಿನಲ್ಲೇ ರೋಹಿಂಗ್ಯಾಗಳು ಹದಿನಾಲ್ಕು ರೈಲುಗಳ ಮೂಲಕ ಭಾರೀ ಪ್ರಮಾಣದಲ್ಲಿ ದಕ್ಷಿಣ ಭಾರತದತ್ತ ನುಗ್ಗಿ ಬರುತ್ತಿರುವ ವಿಷಯ ದಕ್ಷಿಣ ಭಾರತೀಯರಲ್ಲಿ ಇನ್ನಷ್ಟು ಆತಂಕ ಸೃಷ್ಟಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.