ಆಧಾರ್ ಮಾನ್ಯತೆಯ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಹೇಗಿದೆ?
ಆಧಾರ್ ಮಾನ್ಯತೆಯ ಕುರಿತು ಸುಪ್ರೀಂ ಕೋರ್ಟ್ ನ ಐವರು ನ್ಯಾಯಾಧೀಶರ ಪೀಠವಿಂದು ತೀರ್ಪನ್ನು ಪ್ರಕಟಿಸಿದೆ. ಈ ತೀರ್ಪನ್ನು ಸ್ವಾಗತಿಸಿದ ದೇಶದ ಆಡಳಿತಪಕ್ಷ ಹಾಗೂ ವಿರೋಧಪಕ್ಷಗಳೆರಡೂ ತೀರ್ಪು ತಮ್ಮ ವಿಜಯವಾಗಿದೆ ಎಂದು ಬೆನ್ನು ತಟ್ಟಿಕೊಂಡಿವೆ. ಸುಪ್ರೀಂ ಕೋರ್ಟ್ ನ ತೀರ್ಪಿನ ಸಾರಾಂಶ ಈ ಕೆಳಗಿನಂತಿವೆ.
- ಆಧಾರ್ ಕಾರ್ಡ್ ಸಂವಿಧಾನಬದ್ಧವಾಗಿದೆ
- ಪಾನ್ ಕಾರ್ಡ್ ನ ಜೊತೆಗೆ ಆಧಾರನ್ನು ಖಡ್ಡಾಯವಾಗಿ ಲಿಂಕ್ ಮಾಡಬೇಕು
- ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ಆಧಾರ್ ಸಲ್ಲಿಕೆ ಖಡ್ಡಾಯ
- ಆಧಾರ್ ಆಕ್ಟನ್ನು ಮನಿ ಬಿಲ್ ಗೆ ಸರಿಸಮವಾಗಿ ಪರಿಗಣನೆ.
- ಆಧಾರ್ ಕಾರ್ಡ್ ವ್ಯವಸ್ಥೆಯು ಆಧಾರ್ ಕಾರ್ಡ್ ದಾರರ ಡಾಟಾ (ಅಂಕಿ – ಅಂಶ ಮಾಹಿತಿ) ವನ್ನು ಸೋರಿ ಹೋಗದಂತೆ ಗುಪ್ತವಾಗಿರಿಸಿಡುವಷ್ಟು ಭದ್ರತೆಯನ್ನು ಮಾಡಲಾಗಿದೆ,ಜೊತೆಗೆ ಮುಖ್ಯ ನ್ಯಾಯಾಲಯವು ವ್ಯಕ್ತಿಗಳ ಅಂಕಿ – ಅಂಶ ಮಾಹಿತಿಯನ್ನು ಭದ್ರವಾಗಿಡಲು ಇನ್ನಷ್ಟು ಕಠಿಣ ಕಾನುನುನನ್ನು ರೂಪಿಸಲು ಸರಕಾರಕ್ಕೆ ತಿಳಿಸಿದೆ.
- ಸರಕಾರವು ಆಧಾರ್ ಮೂಲಕ ದೇಶದ ಪ್ರಜೆಗಳನ್ನು ಕಣ್ಗಾವಲಿಡುತ್ತಿದೆ ಎಂಬ ಅಕ್ಷೇಪವನ್ನು ಮುಖ್ಯ ನ್ಯಾಯಾಲಯವು ತಳ್ಳಿಹಾಕಿದೆ.
- ಆಧಾರ್ ಆಕ್ಟ್ ನ 57 ನೇ ಸೆಕ್ಷನನ್ನು ತೆಗೆದು ಹಾಕಿದ ನ್ಯಾಯಾಲಯವು ಬ್ಯಾಂಕ್ ಖಾತೆ ತೆರೆಯಲು,ಮಕ್ಕಳನ್ನು ಶಾಲೆಗೆ ಸೇರಿಸಲು, ಫೋನ್ ಕಂಪೆನಿಗಳು,ಖಾಸಗಿ ಉದ್ಯೋಗದಾತ ಸಂಸ್ಥೆಗಳು,ಖಾಸಗಿ ಹಣಕಾಸು ಸಂಸ್ಥೆಗಳು ಅಧಾರ್ ಕೇಳುವಂತಿಲ್ಲ ಎಂದಿದೆ.
- ಸರಕಾರೀ ಜನ ಕಲ್ಯಾಣ ಯೋಜನೆಗಳಿಗೆ ಫಲಾನುಭವಿಗಳ ಆಧಾರ್ ಜೋಡಣೆ ಖಡ್ಡಾಯ ಮಾದಲಾಗಿದೆ.
- ಆದರೆ ಆಧಾರ್ ಇಲ್ಲವೆಂಬ ಕಾರಣಕ್ಕೆ ಜನಪರಕ್ಷೇಮ ಯೋಜನೆಯು ಜನಸಾಮಾನ್ಯರಿಗೆ ಕೈತಪ್ಪದಂತೆ ನೋಡಿಕೊಳ್ಳಬೇಕು ಅಂತಲೂ ನ್ಯಾಯಾಲಯವು ಸರಕಾರಕ್ಕೆ ಹೇಳಿದೆ.
- ಅಕ್ರಮ ವಲಸಿಗರಿಗೆ ಆಧಾರ್ ಕೊಡಬಾರದು ಎಂದೂ ಶ್ರೇಷ್ಥ ನ್ಯಾಯಾಲಯವು ಹೇಳಿದೆ.
ಒಟ್ಟಿನಲ್ಲಿ ಈ ಐತಿಹಾಸಿಕ ತೀರ್ಪನ್ನು ವಿರೋಧ ಪಕ್ಷವೂ ಕೂಡಾ ತನ್ನ ವಿಜಯವೆಂದು ಹೇಳಿಕೊಂಡರೂ ಇಂದಿನ ತೀರ್ಪು ಪ್ರಸ್ತುತ ಆಡಳಿತ ಪಕ್ಷದ ಆಧಾರ್ ಚಿಂತನೆಗೆ ಪೂರಕವೆಂದೇ ಭಾವಿಸಬಹುದು. ವಿರೋಧ ಪಕ್ಷಗಳು ಆಧಾರ್ ಮೂಲಕ ಪ್ರಜೆಗಳ ಡಾಟಾ(ಅಂಕಿ ಅಂಶ ಮಾಹಿತಿ)ಯ ಸೋರಿಕೆಯಾಗುತ್ತಿದೆ ಎಂದು ಹುಯಿಲೆಬ್ಬಿಸುತ್ತಿದ್ದುವು. ಆದರೆ ಆಧಾರ್ ವ್ಯವಸ್ಥೆಯಲ್ಲಿ ಅಂಕಿ ಅಂಶ ಮಾಹಿತಿಯು ಸುಭದ್ರವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಸರಕಾರಕ್ಕೆ ಆನೆಯ ಬಲ ತಂದಿದೆ.
ಈ ಮೊದಲು ಆಧಾರ್ ವ್ಯವಸ್ಥೆಗೆ ಸಾಂವಿಧಾನಿಕ ಚೌಕಟ್ಟಿರಲಿಲ್ಲ. ಈ ತೀರ್ಪಿನ ನಂತರ ಆಧಾರ್ ಸಂವಿಧಾನ ಬದ್ಧ ಎಂದು ನಿರೂಪಿತವಾಗಿದೆ.
ಕೋರ್ಟ್ ಆಧಾರ್ ಆಕ್ಟನ್ನು ಮನಿ ಬಿಲ್ ಗೆ(ಹಣಕಾಸು /ಬಜೆಟ್ ವಿಧೇಯಕಕ್ಕೆ ಲೋಕಸಭೆಯ ಅನುಮೋದನೆ ಸಾಕು, ರಾಜ್ಯಸಭೆಯ ಅನುಮೋದನೆ ಬೇಕಿಲ್ಲ) ಸರಿಸಮವಾಗಿ ಪರಿಗಣನೆ ಮಾಡಿದ ಕಾರಣ ಮುಂದೆ ಈ ಆಕ್ಟನ್ನು ಬದಲಾವಣೆ ಮಾಡಬೇಕಾದ ಸಂದರ್ಭದಲ್ಲಿ ಅದನ್ನು ಲೋಕಸಭೆಯಲ್ಲಿ ಮಂಡನೆ ಮಾಡಿ ಅನುಮೋದನೆ ಪಡೆದುಕೊಂಡರೆ ಸಾಕು. ಅದಕ್ಕೆ ರಾಜ್ಯ ಸಭೆಯಲ್ಲಿ ಅನುಮೋದನೆ ಬೇಕಿಲ್ಲ.
ಸರಕಾರೀ ಜನ ಕಲ್ಯಾಣ ಯೋಜನೆಗೆ ಫಲಾನುಭವಿಗಳ ಆಧಾರ್ ಕಡ್ಡಾಯ ಮಾಡಿರುವುದರಿಂದ ಸರಕಾರೀ ಯೋಜನೆಯ ದುರುಪಯೋಗ, ಸೋರಿಕೆ ನಿಂತು ಹೋಗುವುದು. ಈಗಾಗಲೇ ಇದನ್ನು ಸರಕಾರ ಜ್ಯಾರಿಗೆ ತಂದಿದೆ. ಇದರಿಂದಾಗಿ ವಾರ್ಷಿಕವಾಗಿ 90,000 ಕೋಟಿ ರುಪಾಯಿಗಳ ಸರಕಾರೀ ಹಣದ ಸೋರಿಕೆ ನಿಂತುಹೋಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ನ್ಯಾಯಾಲಯದ ಆಧಾರ್ ಖಡ್ಡಾಯ ತೀರ್ಪಿನಿಂದ ಸರಕಾರದ ಸೋರಿಕೆ ತಡೆ ಪ್ರಕ್ರಿಯೆಗಳಿಗೆ ಇನ್ನಷ್ಟು ಉತ್ತೇಜನ ಸಿಗಲಿದೆ.
ಇನ್ನು ಅಕ್ರಮ ವಿದೇಶೀ ವಲಸೆಗಾರರಿಗೆ ಆಧಾರ್ ಕೊಡಬಾರದೆನ್ನುವ ಸುಪ್ರೀಂ ತೀರ್ಪಿನಿಂದಾಗಿ ಅಕ್ರಮ ನುಸುಳುಕೋರ ಬಾಂಗ್ಲಾದೇಶೀಯರನ್ನು ಹೊರದಬ್ಬುವ ಕೆಲಸಕ್ಕೆ ಪ್ರೋತ್ಸಾಹ ಸಿಕ್ಕಿದೆ.
ಆಧಾರ್ ಆಕ್ಟ್ ನ ಸೆಕ್ಷನ್ 57 ನ್ನು ತೆಗೆದು ಹಾಕುವ ಸುಪ್ರೀಂ ತೀರ್ಪಿನಿಂದ ಜನಸಾಮಾನ್ಯನಿಗಂತೂ ಬಹು ದೊಡ್ಡ ನಿರಾಳತೆ ಸಿಕ್ಕಿದೆ. ಇನ್ನು ಮುಂದೆ ಫೋನ್ ಸಿಮ್ ಕೊಳ್ಳುವಾಗ, ಹೊಸ ಬ್ಯಾಂಕ್ ಅಕೌಂಟ್ ತೆರೆಯುವಾಗ, ಮಕ್ಕಳನ್ನು ಶಾಲೆಗೆ ಸೇರಿಸುವಾಗ ಆಧಾರ್ ಸಲ್ಲಿಸಬೇಕಾದ ಕಿರಿ ಕಿರಿ ತಪ್ಪಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.