ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯು ದಿನಾಂಕ 23-09-2018 ರಂದು ಜಾರಿಗೆ ಬಂದಿದೆ. ಸರ್ವರಿಗೂ ಆರೋಗ್ಯ ಎನ್ನುವ ಈ ಯೋಜನೆಯಡಿಯಲ್ಲಿ 5 ಲಕ್ಷ ರುಪಾಯಿಗಳವರೆಗಿನ ಉಚಿತ ಚಿಕಿತ್ಸಾ ಸೌಲಭ್ಯವಿದ್ದು ಈ ಯೋಜನೆಯು ದೇಶದ 10 ಕೋಟಿ ಕುಟುಂಬಗಳನ್ನು, 50 ಕೋಟಿ ಪ್ರಜೆಗಳಿಗೆ ವರದಾನವಾಗಲಿದೆ.
2011 ನೇ ಇಸವಿಯಲ್ಲಿ ನಡೆದ ಜನಗಣತಿಯ ಆಧಾರದ ಸೋಶಿಯಲ್ ಎಕಾನಮಿಕ್ ಆಂಡ್ ಕಾಸ್ಟ್ ಸೆನ್ಸಸ್ SECC ನ ಆಧಾರದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಈ ಕೆಳಗಿನ ವೆಬ್ ಲಿಂಕ್ನ ಮೂಲಕ ತಿಳಿದುಕೊಳ್ಳಬಹುದು. https://abnhpm.gov.in
1. ನಾವು ಫಲಾನುಭವಿಯೇ ಎಂದು ತಿಳಿಯಲು AM I ELIGIBLE ಎನ್ನುವ ಲಿಂಕ್ನ್ನು ಕ್ಲಿಕ್ ಮಾಡಬೇಕು.
2. ಅಲ್ಲಿ ನಮ್ಮ ಮೊಬೈಲ್ ನಂಬರನ್ನು ನಮೂದಿಸುವ ಜಾಗದಲ್ಲಿ ಮೊಬೈಲ್ ನಂಬರನ್ನು ನಮೂದಿಸಬೇಕು, ಕೆಳಗೆ ಕೊಡಲಾದ ಕ್ಯಾಪ್ಚಾ ನಂಬರನ್ನು ನಮೂದಿಸಬೇಕು. ನಂತರ ಜನರೇಟ್ OTP ಅಂತ ಕ್ಲಿಕ್ ಮಾಡಬೇಕು.
3. ಆಗ ಆರು ಅಂಕೆಗಳ OTP ಯು ಮೇಲೆ ನಮೂದಿಸಿದ ಮೊಬೈಲ್ಗೆ ಬರುವುದು. OTP ಯನ್ನು ನಮೂದಿಸಿದಾಗ ನಮ್ಮ ರಾಜ್ಯವನ್ನು ಆಯ್ಕೆ ಮಾಡುವ ಅವಕಾಶವು ಸಿಗುತ್ತದೆ.
4. ಅಲ್ಲಿ ನಮ್ಮ ರಾಜ್ಯವನ್ನು ಆಯ್ಕೆ ಮಾಡಬೇಕು.
5. ನಂತರ ಸೆಲೆಕ್ಟ್ ಕ್ಯಾಟಗರಿಯಲ್ಲಿ ನಮ್ಮ ಹೆಸರನ್ನು ನಮೂದಿಸಿ ಹುಡುಕುವ ಅವಕಾಶ, ನಮ್ಮ ರೇಶನ್ ಕಾರ್ಡ್ ನಂಬರನ್ನು ನಮೂದಿಸಿ ಹುಡುಕುವ ಅವಕಾಶ, ನಮ್ಮ ಮೊಬೈಲ್ ನಂಬರನ್ನು ನಮೂದಿಸಿ ಹುಡುಕುವ ಅವಕಾಶ ಹಾಗೂ RSBY URN ನಂಬರ್ ಹಾಕಿ ಹುಡುಕುವ ಅವಕಾಶ ಸಿಗುತ್ತದೆ. ಮೇಲಿನ ಆಯ್ಕೆಗಳ ಮೂಲಕ ಹುಡುಕಿದಾಗ ನಾವು ಫಲಾನುಭವಿಗಳ ಪಟ್ಟಿಯಲ್ಲಿದ್ದೇವೆಯೇ ಎಂಬುದು ತಿಳಿದುಬರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.