ನವದೆಹಲಿ: ಇತರ ದೇಶಗಳಿಗೆ ಹೋಲಿಸಿದರೆ ಭಾರತೀಯ ಉದ್ಯೋಗಿಗಳು ಹೆಚ್ಚು ಪರಿಶ್ರಮಿಗಳು ಎಂದು ಇಂಟರ್ನ್ಯಾಷನಲ್ ವರ್ಕ್ಫೋರ್ಸ್ ಮ್ಯಾನೇಜ್ಮೆಂಟ್ ಸಂಸ್ಥೆಯೊಂದು ನಡೆಸಿದ ಜಾಗತಿಕ ಸಮೀಕ್ಷೆ ತಿಳಿಸಿದೆ.
ಸಮೀಕ್ಷೆಗೊಳಪಟ್ಟ ಶೇ.69ರಷ್ಟು ಭಾರತೀಯರು ವಾರದಲ್ಲಿ 5 ದಿನಗಳ ಕಾಲ ಕಾರ್ಯನಿರ್ವಹಿಸಲು ಬಯಸುವುದಾಗಿ ತಿಳಿಸಿದ್ದಾರೆ. ಮೆಕ್ಸಿಕೋದ ಕೇವಲ ಶೇ.49ರಷ್ಟು ಮಂದಿ ವಾರದಲ್ಲಿ 5 ದಿನ ಕೆಲಸ ಓಕೆ ಎಂದಿದ್ದಾರೆ, ಯುಎಸ್ನ ಶೇ.27ರಷ್ಟು ಮಂದಿ ಮಾತ್ರ 5 ದಿನ ಕೆಲಸ ಓಕೆ ಎಂದಿದ್ದಾರೆ.
ಆಸ್ಟ್ರೇಲಿಯಾದ ಶೇ.19ರಷ್ಟು, ಫ್ರಾನ್ಸ್ನ ಶೇ.17ರಷ್ಟು ಮಂದಿ ಮಾತ್ರ 5 ದಿನ ಕೆಲಸ ಓಕೆ ಎಂದಿದ್ದಾರೆ. ಉಳಿದವರು ವಾರಕ್ಕೆ ನಾಲ್ಕು ದಿನ ಕೆಲಸವಿದ್ದರೆ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಾರದಲ್ಲಿ 40 ಗಂಟೆ ಕೆಲಸ ಮಾಡುವುದಕ್ಕೆ ಶೇ.44ರಷ್ಟು ಭಾರತೀಯರು ಓಕೆ ಎಂದಿದ್ದಾರೆ. ಯುಎಸ್ನ ಶೇ.49ರಷ್ಟು ಮಂದಿ ಓಕೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.