ನವದೆಹಲಿ: ವಯಸ್ಸು 102, ಆದರೂ ಓಟದಲ್ಲಿ ಪದಕಗಳನ್ನು ಗೆಲ್ಲುತ್ತಲೇ ಇರುವ ಮನ್ ಕೌರ್ ಅವರಿಗೆ ದಣಿವಾದಂತೆ ಕಾಣುತ್ತಿಲ್ಲ, ಇನ್ನಷ್ಟು ಓಡಬೇಕು ಪ್ರಶಸ್ತಿಗಳನ್ನು ಗೆಲ್ಲಬೇಕು ಎಂಬ ತುಡಿತ ಅವರಲ್ಲಿ ಇನ್ನೂ ಇದೆ.
ಪಂಜಾಬ್ನ ಪಟಿಯಾಲದವರಾದ ಕೌರ್, ಸ್ಪೇನ್ನ ಮಲಗದಲ್ಲಿ ಜರುಗಿದ ‘ವರ್ಲ್ಡ್ ಮಾಸ್ಟರ್ಸ್ ಅಥ್ಲೆಟಿಕ್ಸ್’ನ 200 ಮೀಟರ್ ಓಟದಲ್ಲಿ 100-104 ವಯೋ ವಿಭಾಗದಲ್ಲಿ ಬಂಗಾರದ ಪದಕ ಜಯಿಸಿದ್ದಾರೆ. ಈ ಮೂಲಕ ಇಡೀ ದೇಶವನ್ನೇ ಹೆಮ್ಮೆ ಪಡಿಸಿದ್ದಾರೆ.
ಅವರು ಬಂಗಾರ ಜಯಿಸುತ್ತಿರುವುದು ಇದೇ ಮೊದಲಲ್ಲ, ಕಳೆದ ವರ್ಷ ಅಕ್ಲ್ಯಾಂಡ್ನಲ್ಲಿ ನಡೆದ ವರ್ಲ್ಡ್ ಮಾಸ್ಟರ್ಸ್ ಗೇಮ್ 100 ಮೀಟರ್ ಓಟದಲ್ಲಿ ಬಂಗಾರವನ್ನು ಜಯಿಸಿದ್ದಾರೆ.
93ನೇ ವಯಸ್ಸಿನಲ್ಲಿ ಮಗನ ಪ್ರೋತ್ಸಾಹದೊಂದಿಗೆ ಓಟ ಆರಂಭಿಸಿದ ಅವರು ಇಂದಿಗೂ ಓಡುತ್ತಲೇ ಇದ್ದಾರೆ.
1916ರಲ್ಲಿ ಜನಿಸಿದ ಇವರು ಅತ್ಯಂತ ಶಿಸ್ತುಬದ್ಧವಾದ ಜೀವನವನ್ನು ಅಳವಡಿಸಿಕೊಂಡಿದ್ದಾರೆ. ಹಿತ ಮಿತ ಆಹಾರ, ವ್ಯಾಯಾಮಗಳು ಇವರ ಬದುಕಿನ ಭಾಗವಾಗಿದೆ. ಇದೇ ಕಾರಣಕ್ಕೆ ಈ ಇಳಿ ವಯಸ್ಸಿನಲ್ಲೂ ಅವರು ದಣಿವರಿಯದಂತೆ ಓಡುತ್ತಾರೆ.
ಬಂಗಾರ ಜಯಿಸಿದ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆಯ ಮಹಾಪೂರವೇ ಹರಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.