ನಮ್ಮ ದೇಶದಿಂದ ಓಡಿಹೋಗಿ ಲಂಡನ್ನಲ್ಲಿ ಕುಳಿತು ಬಚಾವ್ ಆಗಲು ಏನೆಲ್ಲಾ ದಾರಿಗಳಿದೆಯೋ ಅದೆಲ್ಲಾ ಹಾದಿಯನ್ನು ಹಿಡಿಯುತ್ತಿರುವ ವಿಜಯಮಲ್ಯ ಇದೀಗ ಅರುಣ್ ಜೇಟ್ಲಿಯವರ ಮೇಲೆ ಏನೇನೋ ಹೇಳಿಕೆ ನೀಡಲು ಆರಂಭಿಸಿದ್ದು, ಅದನ್ನು ಕೇಳಿದ ಹಲವರಿಗೆ ಜೇಟ್ಲಿಯವರ ಮೇಲೆ ಏನೋ ಸಂಶಯ….!!! ಎಂತಹಾ ವಿಚಿತ್ರವಲ್ಲವೇ… ನಮ್ಮ ದೇಶಕ್ಕೆ ಸುಮಾರು 9000 ಕೋಟಿಯಷ್ಟು ಮೋಸ ಮಾಡಿ ಓಡಿಹೋದವನ ಮಾತಿನ ಮೇಲೆ ನಮ್ಮ ಜನಕ್ಕೆ ಪೂರ್ಣ ನಂಬಿಕೆ…!!
ವಿಜಯ ಮಲ್ಯ ಇರಲಿ, ನೀರವ್ ಮೋದಿ ಇರಲಿ, ಮೇಹುಲ್ ಚೋಕ್ಸಿಯೇ ಇರಲಿ ಇವರಿಗೆಲ್ಲಾ ಬೇಕುಬೇಕಾದ ರೀತಿಯಲ್ಲಿ ಕೋಟ್ಯಾಂತರ ಸಾಲ ವ್ಯವಸ್ಥೆ ಮಾಡಿದ್ದೆಲ್ಲವೂ UPA ಸರಕಾರದ ಸಮಯದಲ್ಲಿ…!! UPA ಸರಕಾರದ ಸಮಯದಲ್ಲಿ ಕೋಟ್ಯಾಂತರ ರೂಪಾಯಿಗಳ ಮೋಸ ನಡೆದಿದ್ದರೂ ಇವರೆಲ್ಲರೂ ಆರಾಮವಾಗಿ ಭಾರತದಲ್ಲೇ ಇದ್ದವರು, ಮೋದಿ ಸರಕಾರವು ಆಡಳಿತಕ್ಕೆ ಬಂದು ನೋಟ್ ಬಂಧಿಯಾದ ನಂತರ ಬ್ಯಾಂಕುಗಳ ಒಂದೊಂದೇ ಹಗರಣಗಳು ಒಂದೊಂದಾಗಿ ಹೊರಬರುವುದರ ಸುಳಿವು ಸಿಗುತ್ತಿದ್ದಂತೆ ಇವರೆಲ್ಲಾ ದೇಶ ಬಿಟ್ಟು ಪರಾರಿಯಾಗಿದ್ದು ಯಾಕೆ…?!! ದೇಶ ಬಿಟ್ಟು ಓಡಿಹೋದಲ್ಲಿ ವಿಶ್ವದಾದ್ಯಂತ ಸುದ್ದಿಯಾಗುವುದರೊಂದಿಗೆ ಕೇಸ್ನಿಂದ ಬಚಾವ್ ಆಗುವುದು ಮತ್ತಷ್ಟು ಕಷ್ಟವೆಂಬುದರ ಅರಿವಿರುವ ಇವರೆಲ್ಲರೂ ದೇಶದೊಳಗೇ ಇದ್ದುಕೊಂಡು ದೇಶದ ಸರಕಾರದ ಜೊತೆ ಕೈ ಜೋಡಿಸಿಕೊಂಡು ಹಗರಣಗಳನ್ನು ಮುಚ್ಚಿ ಹಾಕುವುದರ ಬಗ್ಗೆ ಇವರೆಲ್ಲಾ ಯಾಕೆ ಯೋಚಿಸಿಲ್ಲ….!! ಅದರ ಅರ್ಥ ಕೇಸ್ ಮುಚ್ಚಿಹಾಕಲು ಮೋದಿ ಸರಕಾರದಡಿಯಲ್ಲಿ ಕಷ್ಟವೆಂದು ಇವರೆಲ್ಲರಿಗೂ ಅನಿಸಿದ್ದರಿಂದ ಓಡಿದ್ದಾರೆ ಅಷ್ಟೇ..!!
ಈ ಹಿಂದೆ ವಿಜಯ ಮಲ್ಯ ಆಗಿನ ಮನಮೋಹನ್ ಸಿಂಗ್ರಿಗೆ ಪತ್ರ ಬರೆದು ನಿಮ್ಮ ಸಹಾಯದಿಂದಾಗಿ ನನ್ನ kingfisher ವಿಮಾನಯಾನದ ಬ್ಯುಸಿನೆಸ್ ಮುಳುಗುವುದರಿಂದ ಬಚಾವ್ ಆಯಿತು ಎನ್ನುತ್ತಾ ಧನ್ಯವಾದ ಅರ್ಪಿಸುತ್ತಾನೆ .!!! ಮತ್ತೊಮ್ಮೆ ಚಿದಂಬರಂ ಅವರಿಗೆ ಪತ್ರಬರೆದು ನಿಮ್ಮ ಒಂದು ಮಾತಿನಿಂದಾಗಿ ನನಗೆ ಲೋನ್ ಕೊಡುವುದಿಲ್ಲ ಎನ್ನುತ್ತಿದ್ದ SBI ಇದೀಗ ಲೋನ್ ಕೊಡುತ್ತಿದೆ ಎಂದು ಧನ್ಯವಾದ ಹೇಳುವ ಪತ್ರಗಳು ನಮ್ಮೆಲ್ಲರ ಮುಂದಿದ್ದರೂ ನಮಗೆ ಅದ್ಯಾವುದೂ ಕೂಡಾ ನೆನಪಾಗದೇ ಇರುವುದು ಎಂತಹಾ ವಿಪರ್ಯಾಸ ನೋಡಿ.!!!!
ಇಂದು ಮಲ್ಯ ಹೇಳುತ್ತಿರುವುದು ತಾನು ಜೇಟ್ಲಿಯವರ ಜೊತೆ settlement ಬಗ್ಗೆ ಮಾತಾಡಿದ್ದೆ ಎಂದಷ್ಟೇ ಹೊರತು ಜೇಟ್ಲಿಯವರು ನನಗೆ ಸಹಾಯ ಮಾಡಿದರೆಂದು ಎಲ್ಲೂ ಹೇಳಿಲ್ಲ…!! ಆದರೂ ನಮಗೆ ಸಂಶಯ ಬರುವುದು ಜೇಟ್ಲಿಯವರ ಮೇಲೆ ಹೊರತು ಮಲ್ಯ ಸುಳ್ಳು ಹೇಳಿ ವ್ಯವಸ್ಥೆಯಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾನೆಂದು ಅನಿಸುತ್ತನೇ ಇಲ್ಲ…!!!
ಇನ್ನೊಂದು ವಿಚಿತ್ರವೆಂದರೆ ಜೇಟ್ಲಿಯವರು ಮಲ್ಯರೊಂದಿಗಿನ ಭೇಟಿ ಬಗ್ಗೆ ಯಾಕಾಗಿ ಈವರೆಗೆ ಹೇಳಿಲ್ಲ ಎಂದು ಪ್ರಶ್ನೆ ಮಾಡುವವರಿಗೆ ಈಗ ಹೇಳುತ್ತಿರುವ ವಿಚಾರವನ್ನು ಮಲ್ಯ ಓಡಿಹೋದ ನಂತರ ಲಂಡನ್ನಲ್ಲಿ ಕೋರ್ಟ್ ಹೋರಾಟ ಆರಂಭವಾದ ದಿನಗಳಲ್ಲೇ ಯಾಕೆ ಮಾದ್ಯಮಗಳೊಂದಿಗೆ ಹಂಚಿಕೊಳ್ಳಲಿಲ್ಲವೆಂಬ ಪ್ರಶ್ನೆ ಯಾಕೆ ಏಳುವುದೇ ಇಲ್ಲ…?!!!
ಇದೆಲ್ಲದರ ನಡುವೆ ಮೋಸ ಮೋಸ ಎಂದು ಜನರೆದುರು ಬಂದು ಬೊಬ್ಬೆ ಹೊಡೆಯುತ್ತಿರುವವರು ಯಾರೆಂದರೆ ನ್ಯಾಷನಲ್ ಹೆರಾಲ್ಡ್ ಮಹಾನ್ ಹಗರಣದ ಮುಖ್ಯ ಆರೋಪಿಯಾಗಿದ್ದು ಸದ್ಯಕ್ಕೆ ಜಾಮೀನು ಪಡೆದು ನಮ್ಮ ನಡುವೆ ಓಡಾಡುತ್ತಿರುವ ರಾಹುಲ್ ಗಾಂಧಿಯವರು….!!!
ಏನೇ ಹೇಳಿ ಸ್ನೇಹಿತರೇ, ಈ ಕಾಂಗ್ರೇಸಿಗರಿಗೆ ಎಷ್ಟು ಸಲಾಮ್ ಹೊಡೆದರೂ ಕಡಿಮೆಯೇ…. ಯಾವುದೇ ಕೇಸ್ ಇರಲಿ ಇಲ್ಲಾ ಸಣ್ಣ ಘಟನೆಯೇ ಇರಲಿ ಹೇಗಾದರೂ ಮಾಡಿ ದೇಶದ ಜನರನ್ನು ಗೊಂದಲಕ್ಕೆ ದೂಡುವುದರಲ್ಲಿ ಅವರೆದುರು ಯಾರೂ ನಿಲ್ಲಲಾರರು….!!! ಆ ಒಂದು ವಿಭಾಗದಲ್ಲಿ ಅವರಿಗೆ ಅವರೇ ಸಾಟೀ. ಏನಂತೀರಾ…
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.