ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಸೆಪ್ಟೆಂಬರ್ 10 ರಂದು ಭಾರತ್ ಬಂದ್ಗೆ ಕರ್ನಾಟಕದ ಆಡಳಿತ ಪಕ್ಷಗಳಾದ ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳೂ ಬೆಂಬಲ ನೀಡಿವೆ. ಕೇರಳದ ಆಡಳಿತ ಪಕ್ಷವಾದ ಕಮ್ಯೂನಿಸ್ಟ್ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ಕೂಡಾ ಬಂದ್ಗೆ ಬೆಂಬಲ ಸೂಚಿಸಿವೆ.
ಕರ್ನಾಟಕದಲ್ಲಿ ಹಾಗೂ ಕೇರಳ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ ರುಪಾಯಿ 83 ಸಮೀಪಿಸಿವೆ. ಆದರೆ ಸಮೀಪದದ ರಾಜ್ಯವಾದ ಗೋವಾದಲ್ಲಿ (ಗೋವ ಬಿಜೆಪಿ ಆಡಳಿತದಲ್ಲಿದೆ) ಇಂದಿನ ಪೆಟ್ರೋಲ್ ಬೆಲೆ ಲೀಟರಿಗೆ ರೂ 74.16. ಲೀಟರೊಂದಕ್ಕೆ ಗೋವಾದ ಪೆಟ್ರೋಲ್ ಬೆಲೆಗಿಂತ ಕರ್ನಾಟಕ ಕೇರಳಗಳಲ್ಲಿ 9 ರುಪಾಯಿ ಜಾಸ್ತಿ! ಇದು ಹೇಗೆ ಸಾಧ್ಯ?
ಪೆಟ್ರೋಲ್ ಮೇಲಿನ ರಾಜ್ಯ ವಿಧಿಸುವ ತೆರಿಗೆಗಳನ್ನು ಗೋವಾದಲ್ಲಿ ತುಂಬಾ ಕಡಿತ ಮಾಡಲಾಗಿದೆ. ಇದರ ಪರಿಣಾಮವಾಗಿ ಪೆಟ್ರೋಲ್ ಬೆಲೆಯು ಗೋವಾದಲ್ಲಿ ದೇಶದಲ್ಲೇ ಅತೀ ಕಡಿಮೆ ಇದೆ. ಆದರೆ ಕರ್ನಾಟಕದಲ್ಲಿ ರಾಜ್ಯ ತೆರಿಗೆಗಳನ್ನು ಕಡಿಮೆ ಮಾಡುವುದು ಇರಲಿ, ಮೊನ್ನೆ ರೈತರ ಸಾಲ ಮನ್ನಾ ನೆಪದಲ್ಲಿ ಮೊದಲು ಇದ್ದ ಸೆಸ್ ಅನ್ನು ಇನ್ನೂ 2% ಏರಿಸಲಾಯಿತು. ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ ಇನ್ನಷ್ಟು ತುಟ್ಟಿಯಾಯಿತು. ಬಿಜೆಪಿ ಆಡಳಿತದ ಗೋವಾದಲ್ಲಿ ಪೆಟ್ರೋಲ್ ಬೆಲೆ ಅತೀ ಕಡಿಮೆಯಿದೆ. ಪೆಟ್ರೋಲ್ ಬೆಲೆಯೇರಿದೆ ಎಂದು ಬಂದ್ಗೆ ಬೆಂಬಲಿಸುತ್ತಿರುವ ಕಾಂಗ್ರೆಸ್, ಜೆಡಿಎಸ್, ಕಮ್ಯುನಿಸ್ಟ್ ಪಕ್ಷಗಳ ಆಡಳಿತವಿರುವ ಕರ್ನಾಟಕ ಕೇರಳಗಳಲ್ಲಿ ಪೆಟ್ರೋಲ್ ಬೆಲೆ ಅತೀ ಹೆಚ್ಚಿದೆ. ಇದಕ್ಕೆ ಏನನ್ನೋಣ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.