ಹೈದರಾಬಾದ್: ಓಸ್ಮಾನಿಯಾ ಜನರಲ್ ಹಾಸ್ಪಿಟಲ್ ವೈದ್ಯರು ಸೇರಿದಂತೆ ಸಂಶೋಧಕರ ತಂಡವೊಂದು, ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯ ಆಧ್ಯಾತ್ಮಿಕ ಶಕ್ತಿಯ ಮೂಲಕ ಡಯಾಬಿಟಿಸ್ನ್ನು ನಿರ್ಮೂಲನೆ ಮಾಡಬಹುದು ಎಂಬುದನ್ನು ಪತ್ತೆ ಮಾಡಿದೆ.
ಭಗವದ್ಗೀತೆಯಲ್ಲಿ ದಾಖಲಾಗಿರುವ ಅರ್ಜುನ ಮತ್ತು ಕೃಷ್ಣನ ನಡುವಣ ಸಂಭಾಷಣೆಯನ್ನು ಅನುಸರಿಸಿ ಕಾಯಿಲೆ ಗುಣಪಡಿಸಲು ಬಳಸಿಕೊಳ್ಳಬಹುದು ಎಂಬುದನ್ನು ಈ ಸಂಶೋಧಕರು ಸಂಶೋಧಿಸಿದ್ದಾರೆ.
ಬದುಕಿನ ವಿವಿಧ ಆಯಾಮಗಳ ಬಗ್ಗೆ ತಿಳಿಸಿರುವ ಭಗವದ್ಗೀತೆಯಲ್ಲಿನ ಶ್ಲೋಕಗಳ ಬಗ್ಗೆ ಇವರು ಹೇಳಿದ್ದಾರೆ. ಭಗವದ್ಗೀತೆ ಋಣಾತ್ಮಕತೆಯನ್ನು ತೋರಿಸುತ್ತದೆ ಮತ್ತು ಭಗವಾನ್ ಕೃಷ್ಣ ಸೂಚಿಸುವ ಸಕಾರಾತ್ಮಕ ಕೌಶಲ್ಯಗಳನ್ನು ಬಳಸಿ ಅರ್ಜುನ ಅದನ್ನು ನಿಭಾಯಿಸುತ್ತಾನೆ ಎಂದಿದ್ದಾರೆ.
ಜೀವನ ಶೈಲಿಯ ಕಾರಣದಿಂದ ಡಯಾಬಿಟಿಸ್ನಂತಹ ರೋಗಗಳು ಬರುತ್ತವೆ, ಭಗವದ್ಗೀತೆ ಸೂಚಿಸುವ ಜೀವನ ಪಾಠವನ್ನು ಪಾಲಿಸಿದರೆ ಇದನ್ನು ತಡೆಯಲು ಸಾಧ್ಯ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.