ಮಂಡ್ಯ: ನೆಸ್ಲೆ ಕಂಪೆನಿಯ ಮ್ಯಾಗಿ ನೂಡಲ್ಸ್ನಲ್ಲಿ ಸೀಸದ ಅಂಶ ಹೆಚ್ಚಿರುವ ಕುರಿತು ಪ್ರಯೋಗಾಲಯಗಳಲ್ಲಿ ಪರೀಕ್ಷೆಗಳು ನಡೆದಿದ್ದು, ಹಲವು ರಾಜ್ಯಗಳಲ್ಲಿ ಇದನ್ನು ಈಗಾಗಲೇ ನಿಷೇಧಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಕೆಂಟಕಿ ಫ್ರೈಡ್ ಚಿಕನ್(ಕೆಎಫ್ಸಿ) ಕೂಡ ವಿಷಕಾರಿ ಅಂಶ ಒಳಗೊಂಡಿದೆ ಎಂದು ಹೇಳಲಾಗುತ್ತಿದ್ದು, ಇದನ್ನು ನಿಷೇಧಿಸುವಂತೆ ಮಂಡ್ಯ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ.
ಇವುಗಳಲ್ಲಿ ಕರುಳು ಮತ್ತಿತರ ಅಂಗಾಂಗಗಳನ್ನು ಹಾನಿಗೊಳಿಸುವ ಅಂಶಗಳಿವೆ ಎಂದು ತಿಳಿಸಲಾಗಿದ್ದು, ಅದನ್ನು ಕೂಡಲೇ ನಿಷೇಧಿಸಬೇಕೆಂದು ಮಂಡ್ಯ ಬಿಜೆಪಿ ಮುಖಂಡ ಸಿ.ಟಿ.ಮಂಜುನಾಥ್ ಅವರು ಮಂಡ್ಯ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಬಿಬಿಸಿ ವರದಿಯಂತೆ ಕಳೆದ 6 ವರ್ಷದಲ್ಲಿ ಬ್ರಿಟನ್ನ ಕೆಎಫ್ಸಿ ರೆಸ್ಟೋರೆಂಟ್ ಘಟಕ ಒಟ್ಟು 32 ಡಾಲರ್ ದಂಡ ಪಾವತಿಸಿದ್ದು, ಕರ್ನಾಟಕದಲ್ಲಿ ಇದನ್ನು ನಿಷೇಧಿಸಲು ಮಂಜುನಾಥ್ ಅವರು ಕೋರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.