ತಿರುವನಂತಪುರಂ: ಇಲ್ಲಿನ ಶಬರಿಮಲೆ ದೇವಳದಲ್ಲಿ ಸಿಬ್ಬಂದಿಗಳ ಕೆಲಸ ತಗ್ಗಿಸಲು ಬೆಂಗಳೂರಿನ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿ ರೋಬೋಗಳನ್ನು ಖರೀದಿಸಲು ಚಿಂತಿಸಲಾಗಿದೆ ಎಂದು ದೇವಳದ ಆಡಳಿತ ಮಂಡಳಿ ಆಯುಕ್ತ ಸಿ.ಪಿ ರಾಮರಾಜಪ್ರೇಮ ಪ್ರಸಾದ್ ತಿಳಿಸಿದ್ದಾರೆ.
ದೇವಳವನ್ನು ನವೆಂಬರ್ನಿಂದ ಜನವರಿ ತಿಂಗಳ ಕೊನೆವರೆಗೂ ತೆರೆಯಲಾಗುತ್ತಿದ್ದು, ಈ ಸಂದರ್ಭ ಲಕ್ಷಾಂತರ ಭಕ್ತಾದಿಗಳು ಕಾಣಿಕೆ ಹಾಕುತ್ತಾರೆ. ಅದನ್ನು ಎಣಿಸಲು ಹಲವು ಮಂದಿ ಕಾರ್ಯಕರ್ತರನ್ನು ನೇಮಿಸುವ ಕಾರ್ಯ ತಗ್ಗಿಸಲು ಈ ನಿಯೋಜನೆ ತರಲಾಗುವುದು ಎಂದು ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಉನ್ನಿಅಪ್ಪಂ ಪ್ರಸಾದ ತಯಾರಿಕೆಗೂ ಸಮಸ್ಯೆಯಾಗುತ್ತಿದೆ.
ಭಕ್ತರು ನೀಡುವ ಕಾಣಿಕೆಯ ನೋಟುಗಳ ಹಾಗೂ ಚಿಲ್ಲರೆ ಹಾಗೂ ಪ್ರಸಾದ ತಯಾರಿಕೆಗೆ ಈ ರೋಬೋಗಳನ್ನು ಬಳಸಲು ಮಂಡಳಿ ಚಿಂತನೆ ನಡೆಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.