ಕೋಲಾರ : “ಹಸಿದವನಿಗೆ ಊಟ ನೀಡಬೇಕೆ ಹೊರತು ಒಣ ತತ್ವಶಾಸ್ತ್ರವಲ್ಲ” ಎಂಬುದು ಸ್ವಾಮಿ ವಿವೇಕಾನಂದರ ಮನನೀಯ ನುಡಿ. ಕರ್ನಾಟಕದ ಗಡಿ ಜಿಲ್ಲೆ ಕೋಲಾರದ ಶ್ರೀನಿವಾಸಪುರ ತಾಲೂಕಿನ ಮುದಿಮಡುಗು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉತ್ತಮ ವಿದ್ಯಾಭ್ಯಾಸ ನೀಡುವುದರ ಜೊತೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿ ಶನಿವಾರ ರುಚಿ-ಸುಚಿಯಾದ ಇಡ್ಲಿ ಸಾಂಬಾರ್ ನೀಡಿ ವಿವೇಕಾನಂದರ ಆಶಯ ಈಡೇರಿಸಿ ಇತರ ಸರ್ಕಾರಿ ಶಾಲೆಗಳಿಗೆ ಮೇಲ್ಪಂಕ್ತಿಯಾಗಿದೆ.
ಕೆಲವು ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಸೇವಿಸುವ ಮಟ್ಟದಲ್ಲಿ ಇರುವುದಿಲ್ಲ. ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ನೀಡಿದ ಅಕ್ಕಿ-ಬೇಳೆಯನ್ನು ತೆಗೆದುಕೊಂಡು ಹೋಗುವ ಕರ್ತವ್ಯ ಭ್ರಷ್ಟ ಶಿಕ್ಷಕ, ಅಡುಗೆಯವರ ಪ್ರಕರಣಗಳನ್ನೂ ಕೇಳಿದ್ದೇವೆ. ಇದಕ್ಕೆ ಶಿಕ್ಷಕರ, ಅಡುಗೆಯವರ ನಿರಾಸಕ್ತಿ ಒಂದೆಡೆಯಾದರೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತೊಂಡೆ ಕಾರಣ. ಆದರೆ ಕೆಲವು ಶಾಲೆಗಳಲ್ಲಿ ಶಾಲಾ ಕೈತೋಟ ಮಾಡಿ, ಬರುವ ಎಲ್ಲಾ ದವಸ ಧಾನ್ಯಗಳನ್ನು ಬಳಸಿಕೊಂಡು ಮಕ್ಕಳಿಗೆ ರುಚಿಯಾದ, ಶುಚಿಯಾದ ಅಡುಗೆ ಮಾಡಿ ಶಾಲಾ ವಾತಾವರಣವನ್ನು ಸುಸಂಸ್ಕೃತ ಮನೆ ವಾತಾವರಣದಂತೆ ಮಾಡುತ್ತಿರುವ ಅನೇಕ ಶಾಲೆಗಳು, ಶಿಕ್ಷಕರು ನಮ್ಮ ನಡುವೆ ಇದ್ದಾರೆ ಎಂಬುದಕ್ಕೆ ಮುದಿಮಡುಗು ಶಾಲೆ ಜೀವಂತ ಉದಾಹರಣೆಯಾಗಿ ನಿಂತಿದೆ.
ಈ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ 181 ವಿದ್ಯಾರ್ಥಿಗಳಿದ್ದು ಎಂಟು ಶಿಕ್ಷಕರ ತಂಡವು ಇದೆ. ಮುಖ್ಯ ಶಿಕ್ಷಕರ, ಸಹಶಿಕ್ಷಕರ, ಅಡುಗೆ ಸಿಬ್ಬಂದಿ ಮತ್ತು ಶಾಲಾಭಿವೃದ್ಧಿ ಸಮಿತಿಯ ಸಾಮೂಹಿಕ ಪ್ರಯತ್ನದ ಫಲವಾಗಿ ಪ್ರತಿ ಶನಿವಾರ ಎಲ್ಲಾ ವಿದ್ಯಾರ್ಥಿಗಳಿಗೆ ಇಡ್ಲಿ ಸಾಂಬಾರ್ ಉಣಬಡಿಸಿ ಉತ್ತಮ ಕಲಿಕಾ ವಾತಾವರಣ ನಿರ್ಮಾಣದಲ್ಲಿ ನಿರತರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.