ನಮ್ಮ ದೇಶದಲ್ಲಿ 2014 ರವರೆಗೂ ಅಂದರೆ ಕಳೆದ 67 ವರ್ಷಗಳ ಕಾಂಗ್ರೆಸ್ ಸರಕಾರದಡಿಯಲ್ಲಿ ದೇಶದ 130 ಕೋಟಿ ಜನಕ್ಕೆ ಕೇವಲ 77 ಪಾಸ್ಪೋರ್ಟ್ ಸೆಂಟರ್ನ ವ್ಯವಸ್ಥೆ ಇದ್ದುದು ಕಳೆದ 4 ವರ್ಷಗಳ ಮೋದಿ ಸರಕಾರದ ಅಡಿಯಲ್ಲಿ ಅದು ಬರೋಬ್ಬರಿ 304 ಕ್ಕೆ ತಲುಪಿದ್ದು ” ಅಚ್ಚೇ ದಿನ್ ” ಅಲ್ಲವೇ?!
ನಮ್ಮ ದೇಶ ಸ್ವಾತಂತ್ರ್ಯ ಪಡೆದು 67 ವರ್ಷಗಳ ನಂತರ ಅಂದರೆ 2014 ರಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂತು.
ಸುಮಾರು 125-130 ಕೋಟಿಯ ಅಸುಪಾಸಿನಲ್ಲಿ ಜನಸಂಖ್ಯೆ ಹೊಂದಿರುವ ಈ ಭಾರತ ದೇಶದಲ್ಲಿ ಮೋದಿ ಸರಕಾರ ಆಡಳಿತ ಆರಂಭಿಸಿದಾಗ ಈ ದೇಶದ ಜನತೆಗೆ ಪಾಸ್ ಪೋರ್ಟ್ ಮಾಡಿಸಿಕೊಡುವ ಕಛೇರಿಗಳು ಇದ್ದುದು ಎಷ್ಟು ಗೊತ್ತೇ? ಕೇವಲ 77 ಮಾತ್ರ!! ದೇಶದ ಮೂಲೆ ಮೂಲೆಯ ಜನರು ತಮ್ಮ ಪಾಸ್ ಪೋರ್ಟ್ ಮಾಡಿಸಲು ಈ 77 ಕಛೇರಿಗಳನ್ನು ಅವಲಂಬಿಸಬೇಕಾಗಿತ್ತು.
ಮಧ್ಯಪ್ರದೇಶದಂತಾ ದೊಡ್ಡ ರಾಜ್ಯದಲ್ಲಿದ್ದುದು ಕೇವಲ ಒಂದು ಪಾಸ್ ಪೋರ್ಟ್ ಆಫೀಸ್ ಭೋಪಾಲ್ನಲ್ಲಿ! ಹಿಮಾಚಲ ಪ್ರದೇಶದಂತಾ ಗುಡ್ಡಗಾಡು ಪ್ರದೇಶ ಹೊಂದಿರುವ ರಾಜ್ಯದಲ್ಲೂ ಇದ್ದುದು ಒಂದೇ ಕಛೇರಿ ಶಿಮ್ಲಾದಲ್ಲಿ! ಅದೆಲ್ಲಾ ಬಿಟ್ಟು ಬಿಡಿ.. ನಮ್ಮ ದೇಶದ ಈಶಾನ್ಯದಲ್ಲಿ ಅರುಣಾಚಲ ಪ್ರದೇಶ, ಸಿಕ್ಕಿಂ, ಅಸ್ಸಾಂ ಎಂದು ಒಟ್ಟು 8 ರಾಜ್ಯಗಳಿವೆ. ಆ ಎಂಟು ರಾಜ್ಯದ ಜನಕ್ಕೆ ಪಾಸ್ ಪೋರ್ಟ್ ಕಛೇರಿ ಇದ್ದುದು ಕೇವಲ ಒಂದು ! ಗುವಾಹಟಿಯಲ್ಲಿ ! ಕರ್ನಾಟಕದವರು ಚೆನೈಗೆ ಹೋಗುತ್ತಿದ್ದುದು ಎಲ್ಲರಿಗೂ ತಿಳಿದ ವಿಷಯವೇ ತಾನೇ.
ನಮ್ಮ ಭಾರತ ದೇಶದಲ್ಲಿನ ಈ ಪರಿಸ್ಥಿತಿಯನ್ನು ಸುಧಾರಿಸಿ ಜನರಿಗೆ ಸುಲಭವಾಗುವಂತೆ ಮಾಡಬೇಕೆಂಬ ಉದ್ದೇಶದಿಂದ ವಿದೇಶಾಂಗ ಸಚಿವರಾದ ಸುಷ್ಮಾ ಸ್ವರಾಜ್ ರವರು ದೇಶದ ಅಂಚೆ ಕಛೇರಿಯ ಸಹಾಯವನ್ನು ಪಡೆದು ಕಳೆದ ನಾಲ್ಕು ವರ್ಷಗಳಲ್ಲಿ ದೇಶದಾದ್ಯಂತ ತೆರೆದ ಹೊಸ ಪಾಸ್ ಪೋರ್ಟ್ ಸೆಂಟರ್ಗಳು ಎಷ್ಟು ಗೊತ್ತೇ? ಬರೋಬ್ಬರಿ 227 ಸೆಂಟರ್ಗಳು. ಅವುಗಳಲ್ಲಿ 211 ಅಂಚೆ ವಿಭಾಗದಲ್ಲೇ ಇರುವುದು!
ಅಂದರೆ ನಾಲ್ಕು ವರ್ಷಗಳ ಹಿಂದಿನವರೆಗೂ ದೇಶದಾದ್ಯಂತ 77 ಮಾತ್ರ ಇದ್ದುದು ಈಗ ಮೋದಿ ಸರಕಾರ ಬಂದ ನಂತರ 304 ಕ್ಕೆ ತಲುಪಿದೆಯೆಂದರೆ ಇದಕ್ಕಿಂತ ಹೆಚ್ಚಿನ ಅಚ್ಛೇ ದಿನ್ ಬರಬೇಕೆಂದು ನಾವು ನಿರೀಕ್ಷಿಸುವುದು ತಪ್ಪೆಂದು ನನ್ನ ಭಾವನೆ.
ಈ ನಡುವೆ ಪಾಸ್ ಪೋರ್ಟಿಕರಣದಲ್ಲೂ ಬಹಳಷ್ಟು ಸರಳತೆ ತರಲಾಗಿದ್ದಲ್ಲದೇ 8 ವರ್ಷದ ಕೆಳಗಿನವರಿಗೂ 60 ವರ್ಷ ಮೆಲ್ಪಟ್ಟವರಿಗೂ ಪಾಸ್ ಪೋರ್ಟ್ ಮಾಡುವ ಶುಲ್ಕದಲ್ಲಿ ಶೇಕಡಾ 10 ರಷ್ಟು ಕಡಿತಗೊಳಿಸಿದ್ದು ಸಣ್ಣ ವಿಚಾರವೇನಲ್ಲ. ಇನ್ನೂ ಕೂಡ ನಾವು ಅಚ್ಚೇ ದಿನ್ ಬಂದಿಲ್ಲವೆಂದು ಹೇಳುತ್ತಿದ್ದೇವೆಯೆಂದರೆ ನಮ್ಮದೆಲ್ಲಾ ಅತೃಪ್ತ ಆತ್ಮ ಎಂದು ಕರೆದರೆ ತಪ್ಪಾಗಲಾರದೇನೋ!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.