ಮೋದಿ ಸರಕಾರದಲ್ಲಿ ವಿದೇಶಾಂಗ ಸಚಿವಾಲಯದ ಕೆಲಸವನ್ನು ಅವಲೋಕಿಸುತ್ತಾ ಹೋದಲ್ಲಿ ಅಲ್ಲಿ ಕಳೆದ ನಾಲ್ಕು ವರ್ಷಗಳಲ್ಲಾದ ಕೆಲಸಗಳು ನಿಜಕ್ಕೂ ನಮ್ಮನ್ನು ದಂಗುಬಡಿಸುವುದು ಗ್ಯಾರಂಟಿ…!!!
ಸುಷ್ಮಾ ಸ್ವರಾಜ್ ಮತ್ತು ನಿವೃತ್ತ ಸೇನಾ ಚೀಫ್ ಜನರಲ್ ವಿ. ಕೆ. ಸಿಂಘ್ ಅವರ ನೇತೃತ್ವದಲ್ಲಿ ನಮ್ಮ ವಿದೇಶಾಂಗ ಸಚಿವಾಲಯವರು ಈವರೆಗೆ ವಿಶ್ವದ ಮೂಲೆ ಮೂಲೆಗಳಲ್ಲಿ ಹಲವು ರೀತಿಯ ಕಷ್ಟಕ್ಕೆ ಸಿಲುಕಿದ್ದ ಸುಮಾರು 90000 ಜನರನ್ನು ಬಚಾವ್ ಮಾಡಿ ಭಾರತಕ್ಕೆ ಕರೆತಂದಿದೆ. ಹಲವು ಕಾರ್ಯಾಚರಣೆಗಳು ನಡೆದದ್ದು ಟ್ವೀಟರ್ ಮೇಸೇಜ್ನ ಸಹಾಯದಿಂದ ಎಂಬುದು ವಿದೇಶಾಂಗ ಸಚಿವಾಲಯ ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಹಿಡಿದ ಕನ್ನಡಿ ಎನ್ನಬಹುದು.
ಇದರಲ್ಲಿ ಕೆಲವರು ಆಯಾಯ ದೇಶಗಳಲ್ಲಿನ ಕಾನೂನಿನಂತೆ ಬಾರಿ ದಂಡಕ್ಕೆ ಒಳಗಾಗಿದ್ದರೆ, ಇನ್ನೂ ಕೆಲವರು ಜೈಲು ಸೇರಿದ್ದರು, ಮತ್ತೆ ಕೆಲವರು ನೇಣು ಶಿಕ್ಷೆಗೆ ಒಳಗಾಗಿದ್ದವರೂ ಇದ್ದರಂತೆ. ಎಲ್ಲರನ್ನೂ ಆಯಾಯ ದೇಶದ ಜೊತೆಗೆ ಹೊಂದಿದ್ದ ಉತ್ತಮ ಸಂಪರ್ಕಗಳಿಂದಾಗಿ ಅವರ ಶಿಕ್ಷೆಗಳನ್ನು ಕಡಿಮೆಗೊಳಿಸಿ ಅಲ್ಲಿ ಸಿಕ್ಕಿ ಹಾಕಿಕೊಂಡಿದ್ದವರನ್ನು ಬಿಡಿಸಿಕೊಂಡು ಬರಲು ಸಹಾಯವಾಯಿತೆಂದು ವಿದೇಶಾಂಗ ಸಚಿವೆಯವರು ಹೇಳುತ್ತಾರೆ.
ಈವರೆಗೆ ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ದೇಶವು ವಿಶ್ವದ ಇತರ 192 ದೇಶಗಳಲ್ಲಿ 186 ದೇಶಗಳಿಗೆ ಭೇಟಿ ಕೊಟ್ಟು ಆಯಾಯ ದೇಶಗಳೊಡನೇ ಉತ್ತಮ ಸಂಬಂಧವನ್ನು ಹೊಸದಾಗಿ ಆರಂಭಿಸಿದ್ದು ಉಳಿದ ರಾಷ್ಟ್ರಗಳ ಜೊತೆಗೆ ಬಾಂಧವ್ಯ ಉತ್ತಮಗೊಳಿಸಲು ಈಗಾಗಲೇ ಎಲ್ಲಾ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆಯಂತೆ.
ಈ ಎಲ್ಲಾ ಬೆಳವಣಿಗೆಗಳು ನೋಡಿದ ಮೇಲೂ ನಾವು ನಮಗೆ “ಅಚ್ಚೇ ದಿನ್” ಬಂತೇ ಎಂದು ವಿಚಾರಿಸುತ್ತಿದ್ದೇವೆ ಎಂದಾದಲ್ಲಿ ಸಮಸ್ಯೆ ಇರುವುದು ಸರಕಾರದಲ್ಲಿ ಅಲ್ಲ. ಸಮಸ್ಯೆ ಇರುವುದು ನಮ್ಮಲ್ಲಿ ಎಂಬುದು ಸ್ಪಷ್ಟ…!!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.