ಗುವಾಹಟಿ: ಸುಪ್ರೀಂಕೋರ್ಟ್ ಆದೇಶದನ್ವಯ ಅಸ್ಸಾಂನಲ್ಲಿ ಅಕ್ರಮ ವಲಸಿಗರ ಪತ್ತೆ ಕಾರ್ಯ ನಡೆದಿದ್ದು, ರಿಜಿಸ್ಟ್ರಾರ್ ಜನರೇಶನ್ ಆಫ್ ಇಂಡಿಯಾ ಅಲ್ಲಿ ಸುಮಾರು 40 ಲಕ್ಷ ಅಕ್ರಮ ವಲಸಿಗರನ್ನು ಪತ್ತೆ ಮಾಡಿದೆ.
ಅಕ್ರಮ ವಲಸಿಗರು ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (ಎನ್ಆರ್ಸಿ)ನಲ್ಲಿ ಸೇರ್ಪಡೆಗೊಳ್ಳಲು ಅನರ್ಹರಾಗುತ್ತಾರೆ. ಆದರೆ ಇದು ಅಂತಿಮ ವರದಿಯಲ್ಲ, ಅಂತಿಮ ವರದಿ ಬರುವವರೆಗೂ ಈ 40 ಲಕ್ಷ ಮಂದಿ ತಮ್ಮ ಪ್ರಸ್ತುತ ಸ್ಥಾನಮಾನವನ್ನು ಮುಂದುವರೆಸಲಿದ್ದಾರೆ ಎಂದು ರಿಜಿಸ್ಟಾರ್ ಜನರಲ್ ಆಫ್ ಇಂಡಿಯಾ ಶೈಲೇಶ್ ಸ್ಪಷ್ಟಪಡಿಸಿದ್ದಾರೆ.
ಎನ್ಆರ್ಸಿಯಲ್ಲಿ ಹೆಸರು ಇಲ್ಲದವರು ಆಗಸ್ಟ್ 30-ಸೆ.28ರವರೆಗೆ ತಮ್ಮಲ್ಲಿನ ದಾಖಲೆಯನ್ನು ಸಲ್ಲಿಕೆ ಮಾಡಬೇಕಿದೆ. ಡಿ.31ಕ್ಕೆ ಮುಂದಿನ ಎನ್ಆರ್ಸಿ ಅಪ್ಡೇಟ್ ಇರಲಿದೆ.
ತಮ್ಮ ನಾಗರಿಕತ್ವವನ್ನು ಸಾಬೀತುಪಡಿಸಲಾಗದವರಿಗೆ ಇನ್ನಷ್ಟು ಅವಕಾಶಗಳನ್ನು ನೀಡಲು ರಿಜಿಸ್ಟಾರ್ ನಿರ್ಧರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.