ನವದೆಹಲಿ: ಭಾರತೀಯ ವಾಯುಸೇನೆಯು ಫೈಟರ್ ಏರ್ಕ್ರಾಫ್ಟ್ಗಳ ಕೊರೆತಯನ್ನು ಅನುಭವಿಸುತ್ತಿದೆ, ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ದೇಶೀಯ ಲಘು ಯುದ್ಧ ವಿಮಾನ ತೇಜಸ್ನ ಉತ್ಪಾದನಾ ಕಾರ್ಯವನ್ನು ತ್ವರಿತಗೊಳಿಸಲು ನಿರ್ಧರಿಸಿದೆ. ಪ್ರತಿ ವರ್ಷ 16 ತೇಜಸ್ನ್ನು ಉತ್ಪಾದನೆ ಮಾಡಲು ನಿರ್ಧರಿಸಿದೆ.ಇದಕ್ಕಾಗಿ ರೂ.1381.04 ಕೋಟಿಯನ್ನು ಬಿಡುಗಡೆಗೊಳಿಸಿದೆ.
ಪ್ರಸ್ತುತ ವರ್ಷಕ್ಕೆ 8 ತೇಜಸ್ ಏರ್ಕ್ರಾಫ್ಟ್ನ್ನು ಉತ್ಪಾದನೆ ಮಾಡಲಾಗುತ್ತದೆ, ಇನ್ನು ಮುಂದೆ ಈ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ತೇಜಸ್ ಉತ್ಪಾದನೆಗಾಗಿ ಭಾರತೀಯ ವಾಯುಸೇನೆಯು ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ಜೊತೆ ಹಲವು ವರ್ಷಗಳ ಹಿಂದೆಯೇ ಒಪ್ಪಂದ ಮಾಡಿಕೊಂಡಿದೆ. 16 ಫೈಟರ್ ಮತ್ತು 4 ಟ್ರೈನರ್ ಯುದ್ಧ ವಿಮಾನ ಖರೀದಿ ಒಪ್ಪಂದ ಇದಾಗಿತ್ತು. ಇದರನ್ವಯ ಇದುವರೆಗೆ 9 ತೇಜಸ್ ವಿಮಾನವನ್ನು ಪೂರೈಕೆ ಮಾಡಲಾಗಿದೆ. ಉಳಿದವುಗಳು ಉತ್ಪಾದನಾ ಹಂತದಲ್ಲೇ ಇವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.