ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ವಿಟ್ಟರ್ನಲ್ಲಿ 4.3 ಕೋಟಿ ಸಂಖ್ಯೆಯ ಜನರು ಅನುಸರಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಟ್ವಿಟರ್ನಲ್ಲಿ ಹಿಂಬಾಲಿಸುವ ಜನರ ಸಂಖ್ಯೆ ಕೇವಲ 73 ಲಕ್ಷ. ಮೋದಿಯ ಪ್ರತೀ ಟ್ವೀಟ್ಗೆ ಸಿಗುವ ಸರಾಸರಿ ಲೈಕ್ ಹಾಗೂ ರಿಟ್ವೀಟ್ 10 ರಿಂದ 15 ಸಾವಿರ. ವಿಶೇಷ ಏನೆಂದರೆ ಮೋದಿಗಿಂತ 7 ಪಟ್ಟು ಕಡಿಮೆ ಟ್ವಿಟ್ಟರ್ ಫಾಲೋವರ್ಗಳು ಇರುವ ರಾಹುಲ್ನ ಪ್ರತೀ ಟ್ವೀಟ್ಗೆ 25 ಸಾವಿರಕ್ಕೂ ಮಿಗಿಲಾಗಿ ಲೈಕ್ ಹಾಗೂ ರಿಟ್ವೀಟ್ ಸಿಗುತ್ತದೆ. ರಾಹುಲ್ಗೆ ರಷ್ಯಾ, ಇಂಡೋನೇಷ್ಯಾ, ಕಝಾಕಿಸ್ತಾನಗಳಿಂದ ಹೆಚ್ಚು ಲೈಕ್ಗಳು ಹಾಗೂ ರೀಟ್ವೀಟ್ಗಳು (ಕಾಸಿಗೆ ಬೇಕಾಗಿ ಟ್ವೀಟ್, ರಿಟ್ವೀಟ್ ಮಾಡುವ ವಿದೇಶದ ಬಾಡಿಗೆ ಜನರನ್ನು ಬಾಟ್ಸ್ ಎಂದು ಕರೆಯುತ್ತಾರೆ ) ಸಿಗುತ್ತಿರುವುದು ಕೂಲಂಕುಶ ಅಧ್ಯಯನದಿಂದ ತಿಳಿದುಬಂದಿದೆ. ಪಾಕಿಸ್ತಾನದಿಂದಲೂ ಲೈಕ್ಗಳು ಸಿಗುತ್ತಿರುವುದು ಆಶ್ಚರ್ಯ.
ಇನ್ನೊಂದು ಪ್ರಮುಖ ಸಾಮಾಜಿಕ ಮಾಧ್ಯಮವಾದ ಫೇಸ್ಬುಕ್ನಲ್ಲಿ ಮೋದಿಗೆ ಟ್ವಿಟ್ಟರ್ನಷ್ಟೇ ಅಂದರೆ 4.3 ಕೋಟಿ ಫಾಲೋವರ್ಸ್ಗಳಿದ್ದಾರೆ. ಆದರೆ ರಾಹುಲ್ಗೆ ಫೇಸ್ಬುಕ್ನಲ್ಲಿ ಇರುವ ಫಾಲೋವರ್ಸ್ಗಳ ಸಂಖ್ಯೆ ಕೇವಲ 18 ಲಕ್ಷ. ಇದು ಮೋದಿಗಿರುವ ಹಿಂಬಾಲಕರ ಸಂಖ್ಯೆಗಿಂತ 24 ಪಟ್ಟು ಕಡಿಮೆ. ಮೋದಿಗೆ ಟ್ವಿಟರ್ ಹಾಗೂ ಫೇಸ್ ಬುಕ್ಗಳಲ್ಲಿ ಸಮಾನ ಸಂಖ್ಯೆಯ ಫಾಲೋವರ್ಸ್ಗಳು ಇದ್ದಾರೆ. ಆದರೆ ರಾಹುಲ್ನ ಟ್ವಿಟರ್ ಹಾಗೂ ಫೇಸ್ ಬುಕ್ಗಳ ಫಾಲೋವರ್ಸ್ಗಳ ಸಂಖ್ಯೆಯಲ್ಲಿ ಭಾರೀ ವ್ಯತ್ಯಾಸವಿದೆ. ರಾಹುಲ್ಗೆ ಟ್ವಿಟರ್ನಲ್ಲಿ 73 ಲಕ್ಷ ಮಂದಿ ಫಾಲೋವರ್ಸ್ಗಳಿದ್ದೂ ಫೇಸ್ ಬುಕ್ನಲ್ಲಿ ಕೇವಲ 18 ಲಕ್ಷ ಫಾಲೋವರ್ ಇರುವುದು, ಟ್ವಿಟ್ಟರ್ನಲ್ಲಿ ಫೇಸ್ ಬುಕ್ಗಿಂತ 4 ಪಟ್ಟು ಹೆಚ್ಚು ಫಾಲೋವರ್ಗಳನ್ನು ಗಳಿಸಲು ಸಾಧ್ಯವಾಗಿರುವುದು ಹೇಗೆ ಎಂಬ ಪ್ರಶ್ನೆಯನ್ನು ಮೂಡಿಸುತ್ತದೆ. ಕಳೆದ ವರ್ಷ ರಾಹುಲ್ ಗಾಂಧಿ ಅಮೇರಿಕಾಕ್ಕೆ ಹೋಗಿ ಹಿಂದಿರುಗಿದ ನಂತರ ಅವರ ಟ್ವಿಟ್ಟರ್ ಹಿಂಬಾಲಕರ ಸಂಖ್ಯೆಯು ಒಮ್ಮಿಂದೊಮ್ಮೆಗೇ ನಾಟಕೀಯವಾಗಿ ಹೆಚ್ಚಾಗಿತ್ತು. ಇದಕ್ಕೆ ಕಾಂಗ್ರೆಸ್ ಪಕ್ಷವು ಕೇಂಬ್ರಿಡ್ಜ್ ಅನಾಲಿಟಿಕಾ ಎಂಬ ಸಂಸ್ಥೆಯ ಸಹಕಾರವನ್ನು ಪಡೆದುಕೊಂಡಿತ್ತು ಎಂದು ಹೇಳಲಾಗುತ್ತಿದೆ. ಜನರ ಇಂಟರ್ ನೆಟ್ ದತ್ತಾಂಶಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯ ಮೇಲೆ ಸಿಬಿಐ ತನಿಖೆಯನ್ನು ಮಾಡಲು ಕೇಂದ್ರ ಸರಕಾರವು ಆದೇಶ ಹೊರಡಿಸಿದೆ.
ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕೃತ ಫೇಸ್ ಬುಕ್ ಪೇಜ್ PMO India ಗೆ ಪೇಜ್ 1.38 ಕೋಟಿ ಫಾಲೋವರ್ಗಳು ಇದ್ದಾರೆ. ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕೃತ ಟ್ವಿಟರ್ ಪೇಜ್ PMO India ಕ್ಕೆ 2.66 ಕೋಟಿ ಫಾಲೋವರ್ಗಳು ಇದ್ದಾರೆ. ಜನಪ್ರಿಯ ಇನ್ಸ್ಟಾಗ್ರಾಂನಲ್ಲೂ ಮೋದಿಗೆ 1.38 ಕೋಟಿ ಫಾಲೋವರ್ಗಳು ಇದ್ದಾರೆ. ನರೇಂದ್ರ ಮೋದಿ ಆ್ಯಪ್ನ್ನು 50 ಲಕ್ಷ ಕ್ಕಿಂತಲೂ ಹೆಚ್ಚು ಜನರು ಡೌನ್ಲೋಡ್ ಮಾಡಿಕೊಂಡು ಮೋದಿಯೊಡನೆ ನಿರಂತರ ಸಂವಹನ ನಡೆಸುತ್ತಿದ್ದಾರೆ.
ಜಾಗತಿಕವಾಗಿ ಮೋದಿ ಫೇಸ್ ಬುಕ್ನಲ್ಲಿ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿದ ಜನ ನಾಯಕ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಮೋದಿ ಟ್ವಿಟರ್ನಲ್ಲಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಂತರ ಎರಡನೇ ಅತೀ ಹೆಚ್ಚು ಜನರಿಂದ ಹಿಂಬಾಲಿಸಲ್ಪಟ್ಟ ಜಾಗತಿಕ ಜನನಾಯಕ ಎಂದೂ ಗುರುತಿಸಲ್ಪಟ್ಟಿದ್ದಾರೆ. ನರೇಂದ್ರ ಮೋದಿಯವರು ಮೇಲೆ ಹೇಳಿದ ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ಜನಸಾಮಾನ್ಯರೊಡನೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡು ಅವರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.