ನವದೆಹಲಿ: ಭಾರತದ ಸ್ವಾತಂತ್ರ್ಯ ಚಳುವಳಿಯ ಧೀಮಂತ ನಾಯಕರು ಎನಿಸಿರುವ ಚಂದ್ರಶೇಖರ್ ಆಜಾದ್ ಮತ್ತು ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ.
ಈ ಇಬ್ಬರು ರಾಷ್ಟ್ರ ನಾಯಕರಿಗೂ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ನಲ್ಲಿ ನಮನಗಳನ್ನು ಸಲ್ಲಿಸಿದ್ದಾರೆ.
‘ಲೋಕಮಾನ್ಯ ತಿಲಕ್ ಅವರಿಗೆ ತಲೆ ಬಾಗುತ್ತೇನೆ. ಅಪಾರ ಭಾರತೀಯರಲ್ಲಿ ದೇಶಪ್ರೇಮದ ಕಿಡಿ ಹೊತ್ತಿಸಿದ ಅವರು, ಎಲ್ಲಾ ವರ್ಗದ ಜನರನ್ನು ಒಟ್ಟಗೂಡಿಸುವಲ್ಲಿ ಸಫಲತೆ ಪಡೆದರು. ಈ ಮೂಲಕ ಜನಸಾಮಾನ್ಯರನ್ನು ಭಾರತದ ಅವಿಸ್ಮರಣೀಯ ಕಾಲಘಟ್ಟದೊಂದಿಗೆ ಜೋಡಿಸಿದರು. ಶಿಕ್ಷಣಕ್ಕೂ ಅವರು ನೀಡಿದ ಕೊಡುಗೆ ಅಪಾರ’ ಎಂದಿದ್ದಾರೆ.
ಚಂದ್ರ ಶೇಖರ್ ಆಜಾದ್ಗೂ ಗೌರವ ಸಲ್ಲಿಸಿದ ಅವರು, ‘ಭಾರತ ಮಾತೆಯ ಈ ಧೈರ್ಯಶಾಲಿ ಪುತ್ರ ತನ್ನವರ ಸ್ವತಂತ್ರಕ್ಕಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿದರು. ಇವರ ಸಾಹಸ ಮುಂಬರುವ ಪೀಳಿಗೆಗೂ ಸ್ಫೂರ್ತಿದಾಯಕವಾಗಲಿದೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.