ಕೊಲ್ಲೂರು: ದೇಶದ ಪ್ರಮುಖ ದ್ವಿಚಕ್ರ ವಾಹನದ ನಿರ್ಮಾಣ ಸಂಸ್ಥೆ ಟಿವಿಎಸ್ ಮೋಟಾರ್ಸ್ನ ಮಾಲೀಕರಾದ ವೇಣು ಶ್ರೀನಿವಾಸನ್(ಸುಂದರಂ) ಇವರ ಇಚ್ಛೆಯಂತೆ ಕೊಲ್ಲೂರಿನಲ್ಲಿ ಶನಿವಾರ ಸಹಸ್ರ ಚಂಡೀಯಾಗ ಸಂಪನ್ನಗೊಂಡಿತು.
ಮಾ.23ರಿಂದ ಸತತ ಆರು ದಿನಗಳ ಕಾಲ ಈ ಯಾಗದ ಪೂರ್ವಭಾವಿಯಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಕ್ಷೇತ್ರದ ಪ್ರಧಾನ ಅರ್ಚಕ ಡಾ. ಕೆ.ಎನ್. ನರಸಿಂಹ ಅಡಿಗರ ಮುಂದಾಳತ್ವದಲ್ಲಿ ಜರುಗಿತ್ತು. ಸುಮಾರು ೧೩೦ಕ್ಕೂ ಹೆಚ್ಚು ಪುರೋಹಿತರು ಈ ಧಾರ್ಮಿಕ ಕಾರ್ಯದಲ್ಲಿ ವೈದಿಕರಾಗಿ ಭಾಗವಹಿಸಿದ್ದರು.
ವೇಣು ಶ್ರೀನಿವಾಸನ್ ಅವರ ಸೋದರ ಮಾವ ಮಾಜಿ ಸಂಸದ ರಾಮಕೃಷ್ಣ, ಕೆ.ಎನ್. ರಾಧಾಕೃಷ್ಣನ್ ಬೆಂಗಳೂರು ಜೊತೆಯಲ್ಲಿದ್ದರು.
ಶನಿವಾರ ಬೆಳಿಗ್ಗೆ 11 ಗಂಟೆಗೆ ತಮ್ಮ ಖಾಸಗಿ ಹೆಲಿಕ್ಯಾಪ್ಟರ್ನಲ್ಲಿ ಅರೆಶಿರೂರು ಹೆಲಿಪ್ಯಾಡ್ಗೆ ಬಂದಿಳಿದ ಸುಂದರಂ ಅಲ್ಲಿಂದ ನೇರವಾಗಿ ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಅವರನ್ನು ಸ್ವಾಗತಿಸಿ ಗೌರವಿಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಅಧೀಕ್ಷಕ ಕೆ. ರಾಮಕೃಷ್ಣ ಅಡಿಗ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೊಲ್ಲೂರಿನಲ್ಲಿರುವ 10 ಎಕ್ರೆ ಗೋಮಾಳದಲ್ಲಿ ದೇವಳದ ವತಿಯಿಂದ ನಡೆಸಲ್ಪಡುವ ಗೋಶಾಲೆಗೆ ಟಿವಿಎಸ್ ಸಂಸ್ಥೆಯ ಚೇಯರ್ಮನ್ ವೇಣು ಶ್ರೀನಿವಾಸನ್ 14ಲಕ್ಷ 30 ಸಾವಿರ ದೇಣಿಗೆ ನೀಡಿದರು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಈ ಗೋಮಾಳದ ಸ್ಥಳದಲ್ಲಿ ಶಾಶ್ವತ ಕಟ್ಟಡ ಕಟ್ಟುವಂತಿಲ್ಲ. ಆದರೂ ತಾತ್ಕಾಲಿಕ ಗೋಶಾಲೆ (ತಗಡಿನ ಶೆಡ್) ನಿರ್ಮಿಸಲಾಗುತ್ತ್ತಿದೆ ಎಂದು ಅಡ್ಯಂತಾಯ ತಿಳಿಸಿದರು.
ಸಮಾರು ೨೨ ವರ್ಷಗಳ ಹಿಂದೆ ಕೊಲ್ಲೂರಿನಲ್ಲಿ ದಿ. ಸೂರ್ಯರಾಮಚಂದ್ರ ಶಾಸ್ತ್ರಿಗಳ ಆಚಾರ್ಯತ್ವದಲ್ಲಿ ಸಹಸ್ರ ಚಂಡೀಯಾಗ ನಡೆದಿತ್ತು. ಅಂದು ಶ್ರೀ ರಾಮಚಂದ್ರಾಪುರ ಮಠಾಧೀಶ ಬ್ರಹ್ಮಕ್ಯ ಜಗದ್ಗುರು ಶ್ರೀ ರಾಘವೇಂದ್ರ ಭಾರತೀ ಸ್ವಾಮೀಜಿ ಉಪಸ್ಥಿತಿಯನ್ನು ಸ್ಮರಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.