ಗುಹಾವಟಿ: ಎಫ್ಎಂಸಿಜಿ(Fast-moving consumer goods ) ದಿಗ್ಗಜ ಬ್ರಿಟಾನಿಯಾ ಅಸ್ಸಾಂನಲ್ಲಿ ರೂ.170 ಕೋಟಿ ವೆಚ್ಚದ ದೊಡ್ಡ ಉತ್ಪಾದನಾ ಘಟಕವನ್ನು ತೆರೆದಿದ್ದು, 1 ಸಾವಿರ ಜನರಿಗೆ ಉದ್ಯೋಗವಕಾಶವನ್ನು ಒದಗಿಸಲಿದೆ. ಈ ಘಟಕ ಬ್ರಿಟಾನಿಯಾ ಸಂಸ್ಥೆಯ ದೇಶದಲ್ಲೇ ಅತೀದೊಡ್ಡ ಗ್ರೀನ್ಫೀಲ್ಡ್ ಫೆಸಿಲಿಟಿಯಾಗಿದೆ.
ಗುವಾಹಟಿ ಸಮೀಪದ ರಾಂಪುರದಲ್ಲಿ ಘಟಕವನ್ನು ಸ್ಥಾಪನೆ ಮಾಡಲಾಗಿದ್ದು, ಬ್ರಿಟಾನಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ವರುಣ್ ಬೆರ್ರಿ ಅವರ ಸಮ್ಮುಖದಲ್ಲಿ ಅಸ್ಸಾಂ ಸಿಎಂ ಸರ್ಬಾನಂದ ಸೋನೊವಾಲ್ ಇದಕ್ಕೆ ಚಾಲನೆ ನೀಡಿದ್ದರು.
ಈ ಕಂಪನಿಯಲ್ಲಿ ಶೇ.70ರಷ್ಟು ಮಹಿಳಾ ಕಾರ್ಯಪಡೆಯಿರುವುದು ವಿಶೇಷ. ಮೂರು ಶಿಫ್ಟ್ಗಳಲ್ಲಿ ಇವರು ಕಾರ್ಯನಿರ್ವಹಿಸುತ್ತಾರೆ. ಕಂಪನಿ ಸಂಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದ ವೇಳೆ ಒಟ್ಟು 1 ಸಾವಿರ ಮಂದಿಗೆ ಇಲ್ಲಿ ಉದ್ಯೋಗ ದೊರಕಲಿದೆ.
ರೂ.170 ಕೋಟಿಯಲ್ಲಿ ಇದರ ನಿರ್ಮಾಣ ಮಾಡಲಾಗಿದ್ದು, ಬ್ರಿಟಾನಿಯಾ ಸಂಸ್ಥೆಯ ದೇಶದಲ್ಲೇ ಅತೀದೊಡ್ಡ ಗ್ರೀನ್ಫೀಲ್ಡ್ ಉತ್ಪಾದನಾ ಫೆಸಿಲಿಟಿ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.