ಶ್ರೀನಗರ: ಜಮ್ಮು ಕಾಶ್ಮೀರದ ಗ್ರಾಮೀಣ ಭಾಗಗಳ ಅಭಿವೃದ್ಧಿ ಕಾರ್ಯಗಳಲ್ಲಿ ಭಾರತೀಯ ಸೇನೆ ಮಹತ್ವದ ಪಾತ್ರವನ್ನು ನಿಭಾಯಿಸುತ್ತಿದೆ. ಅಲ್ಲಿನ ಜನರ ಸಬಲೀಕರಣಕ್ಕಾಗಿ ತನ್ನಿಂದಾದ ಕೊಡುಗೆಯನ್ನು ನೀಡುತ್ತಾ ಬರುತ್ತಿದೆ.
ತನ್ನ ಮಹಾತ್ವಾಕಾಂಕ್ಷೆಯ ರೋಶನಿ ಯೋಜನೆಯಡಿ ಸೇನೆಯು ಜಮ್ಮು ಕಾಶ್ಮೀರದ ಕುಗ್ರಾಮಗಳಲ್ಲಿ ಸುಮಾರು 17 ಸಾವಿರ ಸೋಲಾರ್ ಲೈಟ್ಗಳನ್ನು ಹಂಚಿಕೆ ಮಾಡಿದೆ. ವಿದ್ಯುತ್ನ್ನೇ ಕಾಣದ ದೋಡ ಜಿಲ್ಲೆಯ ಗ್ರಾಮಗಳಿಗೆ ಲೈಟ್ ವಿತರಣೆ ಮಾಡಲಾಗಿದ್ದು, ಇದರಿಂದ ಅಲ್ಲಿನ ಜನರ ಜೀವನದಲ್ಲಿ ತುಸು ನಿರಾಳತೆ ಮೂಡಿದೆ.
ವಾನಿ ಪುರ, ಬೈನ್ ಗೋತ್, ಬಾನಿ-ಬತೊಲಿ, ದೂರು, ಕೋಟ-ಟಾಪ್, ಶಂಕೋಜ, ಗಂಗೂರಿ, ಯಾರಿವನ್, ಮಾಗ್ರೆ ಮೊಹಲ್ಲಾ, ತಂತ, ಬಗ್ದನ್, ದ್ರಮನ್, ಕುತಲ್ ಮುಂತಾದ ಪ್ರದೇಶಗಳ ಬಡ ಜನರಿಗೆ ಸೋಲಾರ್ ಲೈಟ್ಗಳನ್ನು ಸೇನೆ ಹಂಚಿಕೆ ಮಾಡಿದೆ.
ಇಂತಹ ಯೋಜನೆಗಳು ಸೇನೆ ಮತ್ತು ಸ್ಥಳಿಯ ನಾಗರಿಕ ನಡುವಣ ಸಂಪರ್ಕವನ್ನು, ಬಾಂಧವ್ಯವನ್ನು ಉತ್ತಮಪಡಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.